ಗುಜರಾತ್‍ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Sanjeev-bhat

ಅಹಮದಾಬಾದ್,ಸೆ.5- ವಕೀಲರೊಬ್ಬರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ ಆರೋಪದ ಮೇಲೆ ಗುಜರಾತ್‍ನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಸಿಐಡಿ ಪೂಲೀಸರು ಇಂದು ಬಂಧಿಸಿದ್ದಾರೆ. 1998ರಲ್ಲಿ ಸಂಜೀವ್ ಭಟ್ ಗುಜರಾತ್‍ನ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಕೀಲರೊಬ್ಬರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಬಂಧಿಸಿದ್ದರು.

ವಕೀಲರನ್ನು ಕಾನೂನು ಬಾಹಿರವಾಗಿ ಸಂಜೀವ್ ಭಟ್ ಬಂಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ನಕಲಿ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ವಕೀಲರನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತೆಂದು ಡಿಸಿಪಿಯಾಗಿದ್ದ ಸಂಜೀವ್ ಭಟ್ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದರು.

ಈ ಪ್ರಕರಣವನ್ನು ಅಂದಿನ ಗುಜರಾತ್ ಸರ್ಕಾರ ಸಿಐಡಿ ತನಿಖೆಗೆ ವಹಿಸಿತ್ತು. ಇಂದು ತನಿಖಾ ತಂಡ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆ. ಗುಜರಾತ್‍ನ ವಿವಾದಾತ್ಮಕ ಐಪಿಎಸ್ ಅಧಿಕಾರಿ ಎಂದೇ ಇವರು ಗುರುತಿಸಿಕೊಂಡಿದ್ದರು. 2002ರ ಗುಜರಾತ್‍ನಲ್ಲಿ ನಡೆದ ಗೋದ್ರಾ ಹತ್ಯಾಖಂಡ ಅಂದಿನ ಮುಖ್ಯಮಂತ್ರಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ ನಡೆದಿತ್ತು ಎಂದು ಹೇಳಿ ದೇಶಾದ್ಯಂತ ಕೋಲಾಹಲವನ್ನೇ ಸೃಷ್ಟಿಸಿದ್ದರು.

2015ರಲ್ಲಿ ಗುಜರಾತ್ ಸರ್ಕಾರ ಸಂಜೀವ್ ಭಟ್ ಅವರನ್ನು ಐಪಿಎಸ್ ಸೇವೆಯಿಂದ ವಜಾ ಮಾಡಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತಿದ್ದರಾದರೂ ವಿಚಾರಣೆ ನಡೆಯುತ್ತಿದೆ. ಸಂಜೀವ್ ಭಟ್ ತಮ್ಮ ಪತ್ನಿಯನ್ನು ವಿಧಾನಸಭಾ ಚುನಾವಣೆ ವೇಳೆ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ದವೇ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಕಣಕ್ಕಿಳಿಸಿದ್ದರು.

Facebook Comments

Sri Raghav

Admin