ಬೇರೊಬ್ಬರೊಂದಿಗೆ ಮದುವೆಯಾದ ಯುವತಿಗೆ ಪ್ರಿಯಕರನಿಂದ ಚಾಕು ಇರಿತ

ಈ ಸುದ್ದಿಯನ್ನು ಶೇರ್ ಮಾಡಿ

ಥಾಣೆ, ಡಿ.13- ತಾನು ಪ್ರೀತಿಸುತ್ತಿದ್ದ ಹುಡುಗಿಯು ಬೇರೊಬ್ಬನೊಂದಿಗೆ ಮದುವೆಯಾದಳು ಎಂಬ ಕೋಪದಲ್ಲಿ ಪ್ರಿಯಕರನೊಬ್ಬ ತನ್ನ ಪ್ರೇಯಸಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿರುವ ಘಟನೆ ಥಾಣೆಯಲ್ಲಿ ನಡೆದಿದೆ.ವಿಶಾಲ್ ಖಾಡೆ ಬಂಧಿತ ವ್ಯಕ್ತಿ.

ವಿಶಾಲ್‍ಖಾಡೆಯು ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದು ಆಕೆಯನ್ನೇ ಮದುವೆಯಾಗಬೇಕೆಂದುಕೊಂಡಿರುವಾಗಲೇ ಮನೆಯವರ ಒತ್ತಾಯಕ್ಕೆ ಮಣಿದು ಆಕೆ ಬೇರೊಬ್ಬರೊಂದಿಗೆ ಮದುವೆ ಆಗುತ್ತಾಳೆ.

ಇದರಿಂದ ಬೇಸತ್ತ ವಿಶಾಲ್ ಮದುವೆಯ ದಿನವೇ ಆಕೆಯನ್ನು ಮುಗಿಸಲು ಪ್ಲಾನ್ ಮಾಡಿ ಯುವತಿಯ ಮನೆಯ ಬಳಿಯೇ ಕಾದುಕುಳಿತಿದ್ದಾನೆ. ಯುವತಿಯು ತನ್ನ ಗಂಡನೊಂದಿಗೆ ಮನೆಯಿಂದ ಹೊರಬಂದ ಮೇಲೆ ಆಕೆಗೆ ಚಾಕುವಿನಿಂದ 10 ಬಾರಿ ಇರಿದಿದ್ದೇ ಅಲ್ಲದೆ ಆಕೆಯ ಪತಿಯ ಮೇಲೂ ಹಲ್ಲೆ ನಡೆಸಿದ್ದಾನೆ.

ಚಾಕುವಿನ ಇರಿತಕ್ಕೆ ಒಳಗಾಗಿದ್ದ ಯುವತಿಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಭಗ್ನ ಪ್ರೇಮಿ ವಿಶಾಲ್‍ನನ್ನು ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

Facebook Comments