ರಾಜ್ಯದಲ್ಲಿ ಸಿಪಿಎಂ ಪಕ್ಷಕ್ಕಾಗಿ 50 ವರ್ಷ ದುಡಿದಿದ್ದೇನೆ : ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಸಿಪಿಎಂ ಪಕ್ಷದ ತತ್ವ ಮತ್ತು ಸಿದ್ದಾಂತಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವಲ್ಲಿ ನನ್ನ ರಾಜಕೀಯ 50 ವರ್ಷಗಳ ಕಾಲ ಶ್ರಮಿಸಿದ ನನ್ಬನ್ನು ಸಿ.ಪಿ.ಎಂ.ಪಕ್ಷ ಅಮಾನತ್ತುಗೊಳಿಸಿದ್ದು ಇದರಿಂದ ನನಗೆ ಯಾವುದೇ ರೀತಿಯ ಬೇಸರವೂ ಇಲ್ಲ ಪಶ್ಚಾ ತಾಪವೂ ಇಲ್ಲ ಎಂದು ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ತಿಳಿಸಿದರು.

ಅವರು ಜಚನಿ ಕಾಲೇಜಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ನನ್ನ ವಿರುದ್ದ ರಾಷ್ಟ್ರ ಮತ್ತು ರಾಜ್ಯಮಟ್ಟದಿಂದ ‌ನಡೆದ ಷಡ್ಯಂತರದ ಫಲವೇ ನನ್ನ ಅಮಾನತ್ತು ಕ್ರಮ ಎಂದರು.ರಾಜ್ಯ ರಾಜಕಾರಣದಲ್ಲಿ ನಾನು ನಂಬಿದ ಕಮ್ಯೂನಿಷ್ಟ್ ಪಕ್ಷದ ತತ್ವ ಸಿದ್ದಾಂತಗಳ ವಿರುದ್ದ ಎಂದೂ ನಡೆದುಕೊಂಡಿಲ್ಲ.

ಬಲಪಂಥೀಯ ಮತ್ತು ಕೋಮುವಾದಿ ಬಿಜೆಪಿ ಒಳಗೊಂಡಂತೆ ಯಾವುದೇ ರಾಜಕೀಯ ಪಕ್ಷಗಳೊಂದಿ ರಾಜೀ ರಾಜಕಾರಣ ಮಾಡಿಕೊಂಡಿಲ್ಲ, ಆದರೆ ಕ್ಷುಲ್ಲಕ ಎನಿಸುವ ಬಾಗೇಪಲ್ಲಿ ಎಪಿಎಂ.ಸಿ ಚುನಾವಣೆಯಲ್ಲಿ ನಾನು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಸಹಕರಿಸಿದ್ದೇನೆ ಎಂಬ ಆರೋಪವನ್ನು ಕೆಲ ಸ್ವಾರ್ಥ ರಾಜಕಾರಣಿ ಗಳು ನನ್ನ ಮೇಲೆ ಹೊರಿಸಿರುವುದು ಅವರ ಸಣ್ಣತನ ತೋರಿಸುತ್ತದೆ ಎಂದರು.

ಮುಂದಿನ ದಿನಗಳಲ್ಲಿ ನಾ‌ಉ ನನ್ನ ಬೆಂಬಲಿಗರು ಮತ್ತು ಅಭಿಮಾನಿಗಳ ಆಶಯಕ್ಕೆ ಅನುಗುಣವಾಗಿ ನನ್ನ ರಾಜಕೀಯ ನಿಲುವನ್ನು ಕಂಡುಕೊಳ್ಳುತ್ತೇನೆ.ರಾಜಕೀಯ ಸನ್ಯಾಸವನ್ನು ಸ್ವೀಕರಿಸಲಾರೆ ನನ್ನನ್ನು ನಂಬಿದ ಜನತೆಗಾಗಿ ಚುನಾವಣಾ ರಾಜಕಾರಣದಲ್ಲಿಯೂ ಇರುತ್ತೇನೆ ಎಂದರು.

ನನ್ನ ರಾಜಕೀಯ ಜೀವನದಲ್ಲಿ ಬಯಲು ಶಾಶ್ವತ ನೀರಾವರಿ ಸೌಲಭ್ಯಕ್ಕಾಗಿ ‌ನಡೆಸಿದ ಹೋರಾಟ ಕಂಬಾಲಪಲ್ಲಿ ನರಮೇದ ಪ್ರಕರಣದಲ್ಲಿ ದಲಿತರ ಪರ ನಾನು ತೆಗೆದುಕೊಂಡ ನಿರ್ಧಾರವು ನನ್ನನ್ನು ಒಕ್ಕಲಿಗರ ವಿರೊಧಿ ಎಂಬ ಹಣೆಪಟ್ಟಿ ನನಗೆ ಕಟ್ಟಿ ನನ್ನ ಆ ವಧಿಯ ಸೊಲಿಗೂ ಕಾರಣವಾಯ್ತು ನನಗೆ ಶೊಷಿತ ವರ್ಗದ ಹಿತ ಸಂರಕ್ಣಣೆ ಮುಖ್ಯವಾಯಿತೇ ಹೊರತು ಒಕ್ಕಲಿಗರ ಜಾತಿಪ್ರೇಮ ಮುಖ್ಯವಾಗಲಿಲ್ಲ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಜಿ.ವಿ.ಶ್ರೀರಾಮರೆಡ್ಡಿ ಅಭಿಮಾನಿ ಬಳಗದ ಚನ್ನರಾಯಪ್ಪ, ರಾಜು, ಹೆಚ್.ಎನ್.ಚಂದ್ರಶೇಖರ್ ರೆಡ್ಡಿ ಆರ್. ಚಂದ್ರಶೇಖರ್ ರೆಡ್ಡಿ ಜಿ.ಎಂ. ರಾಮಕೃಷ್ಣಪ್ಪ, ಭಾಷಸಾಬ್, ವೆಂಕಟರೊಣ, ಎಲ್, ವೆಂಕಟೇಶ್ ಸೇರಿದಂತೆ ಇನ್ನಿತರ ಪ್ರಮುಖರಿದ್ದರು

Facebook Comments

Sri Raghav

Admin