ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಪಾವತಿಗೆ ಅಧಿಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.28-ಮೈಸೂರಿನ ಕರ್ನಾಟಕ ರಾಜ್ಯ ಮುಖ್ಯ ವಿವಿಯಲ್ಲಿ 2014-15ನೇ ಶೈಕ್ಷಣಿಕ ಸಾಲಿನ ಸ್ನಾತಕ ಕೋರ್ಸ್‍ಗಳಾದ ಪ್ರಥಮ ವರ್ಷದ ಬಿಎ, ಬಿ.ಕಾಂ, ಪದವಿಗಳಿಗೆ ಪ್ರವೇಶಾತಿ ಪಡೆದು ಪ್ರಸ್ತುತ ತೃತೀಯ/ಅಂತಿಮ ವರ್ಷದ ಬಿ.ಎ, ಬಿಕಾಂ ಪದವಿಗಳಿಗೆ ಪ್ರವೇಶಾತಿ ಪಡೆದು ಪ್ರಸ್ತುತ ತೃತೀಯ /ಅಂತಿಮ ವರ್ಷದ ಬಿಎ.ಎ/ಬಿ.ಕಾಂ ವಿದ್ಯಾರ್ಥಿಗಳು ಹಾಗೂ 2010-20 ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ಕೋರ್ಸ್‍ಗಳಾದ ಎಂಎ/ಎಂಸಿಜೆ/ಎಂಕಾಂ ಪ್ರವೇಶಾತಿ ಪಡೆದು ಅಂತಿಮ ವರ್ಷದ ವಿದ್ಯಾರ್ಥಿಗಳು ಪರೋಕ್ಷಾ ಶುಲ್ಕ ಪಾವತಿಸಲು ಅಧಿಸೂಚನೆ ಹೊರಡಿಸಲಾಗಿದೆ.

ವಿದ್ಯಾರ್ಥಿಗಳು ವಿವಿಯ ಅಧಿಕೃತ ವೆಬ್‍ಐಸ್ www.ksoumysuru.ac.in ನಲ್ಲಿ ಪರೀಕ್ಷಾ ಅರ್ಜಿ ಮತ್ತು ಪರೀಕ್ಷಾ ಶುಲ್ಕವನ್ನು ಕಡ್ಡಾಯವಾಗಿ ಅಂತರ್ಜಾಲದ ಮೂಲಕವೇ ಸಲ್ಲಿಸಬೇಕೆಂದು ತಿಳಿಸಲಾಗಿದೆ.

ಪರೀಕ್ಷಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ ಆ.10ರ ಹಾಗೂ 200 ರೂ. ದಂಡ ಶುಲ್ಕದೊಂದಿಗೆ ಆ.24 ಕಡೆಯ ದಿನಾಂಕವಾಗಿರುತ್ತದೆ ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ.ಲೋಕೇಶ್.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರಾಮುವಿ ಮಹಿಳಾ ಪ್ರಾದೇಶಿಕ ಕೇಂದ್ರ, ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, 4ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-03, ಕಚೇರಿ ದೂ: 080-23448811, 9844506629, 9620395584, 7760848564 ಸಂಪರ್ಕಿಸಬಹುದು.

Facebook Comments

Sri Raghav

Admin