ಕೊರೋನಾ ಕಂಟ್ರೋಲ್‌ಗೆ ತಜ್ಞರ ಸಮಿತಿ ಶಿಫಾರಸ್ಸುಗಳೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.16- ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಮಹಾಮಾರಿಯನ್ನು ತಡೆಗಟ್ಟಲು ದೆಹಲಿ ಮಾದರಿಯಲ್ಲಿ ರಾಜ್ಯದಲ್ಲೂ ವಾರಾಂತ್ಯ(ವೀಕೆಂಡ್)ದ ಲಾಕ್‍ಡೌನ್ ಜಾರಿ ಮಾಡಬೇಕೆಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಈ ವರದಿಯನ್ನು ಹಸ್ತಾಂತರ ಮಾಡಿರುವ ತಜ್ಞರ ಸಮಿತಿ ದೆಹಲಿಯಂತೆ ರಾಜ್ಯದಲ್ಲಿ ಶನಿವಾರ-ಭಾನುವಾರ ಸಂಪೂರ್ಣ ಲಾಕ್‍ಡೌನ್(ಅಗತ್ಯ ಸೇವೆಗಳನ್ನು ಹೊರತುಪಡಿಸಿ), 144 ಸೆಕ್ಷನ್ ಹಾಕುವುದು, ರಾಜ್ಯಾದ್ಯಂತ ಕಫ್ರ್ಯೂ ವಿಸ್ತರಣೆ, ಶಾಲಾಕಾಲೇಜುಗಳ ಸಂಪೂರ್ಣ ಬಂದ್,ಖಾಸಗಿ ಕಚೇರಿಗಳು ಸಂಪೂರ್ಣ ಬಂದ್, ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಶೇ.50ರಷ್ಟು ಕಾರ್ಯ ನಿರ್ವಹಣೆ, ಧಾರ್ಮಿಕ ಕೇಂದ್ರಗಳು, ಪಬ್, ಬಾರ್, ರೆಸ್ಟೋರೆಂಟ್, ಡಿಸ್ಕೊತೆಕ್ ಸೇರಿದಂತೆ ಹಲವು ರೀತಿಯ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸಮಿತಿ ಶಿಫಾರಸ್ಸು ಮಾಡಿದೆ.

ತಜ್ಞರು ಸಮಿತಿ ವರದಿ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಅಕೃತ ನಿವಾಸ ಕಾವೇರಿಯಲ್ಲಿ ಇಂದು ಸಚಿವರು, ಅಧಿಕಾರಿಗಳ ತುರ್ತು ಸಭೆಯನ್ನು ನಡೆಸಿದರು.

ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ನಡೆದ ಸಭೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವಗುಪ್ತ, ನಗರ ಪೊಲೀಸ್ ಆಯುಕ್ತ ಕಮಲ್‍ಪಂಥ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಬಿಬಿಎಂಪಿ ಸೇರಿದಂತೆ ಮತ್ತಿತರ ಇಲಾಖೆ ಅಕಾರಿಗಳು ಭಾಗವಹಿಸಿದ್ದರು.

ಈಗಾಗಲೇ ಮಹಾರಾಷ್ಟ್ರದಲ್ಲಿ ಜನತಾ ಕಫ್ರ್ಯೂ, ದೆಹಲಿಯಲ್ಲಿ ವೀಕೆಂಡ್ ಲಾಕ್‍ಡೌನ್, ರಾಜಸ್ಥಾನದಲ್ಲಿ ಸಂಪೂರ್ಣ ನೈಟ್ ಕಫ್ರ್ಯೂ ಸೇರಿದಂತೆ ಹಲವು ರೀತಿಯ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದಲ್ಲೂ ಇದನ್ನು ಜಾರಿ ಮಾಡಬೇಕೆಂದು ತಜ್ಞರ ಸಮಿತಿ ಸಿಎಂಗೆ ಸಲಹೆ ನೀಡಿದರು.

ಮೇ ತಿಂಗಳ 2ನೇ ವಾರದಲ್ಲಿ ಬರಬೇಕಾಗಿದ್ದ ಕೋವಿಡ್ ಪ್ರಮಾಣ ಈಗಲೇ ಬಂದಿದೆ. ಮೇ ತಿಂಗಳ ಅಂತ್ಯಕ್ಕೆ ಇದರ ಪ್ರಮಾಣ ಬೆಂಗಳೂರಿನಲ್ಲಿ 20 ಸಾವಿರ ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ 30 ಸಾವಿರ ಸೇರಿದಂತೆ ಒಟ್ಟು ದಿನಂ ಪ್ರತಿ 50 ಸಾವಿರ ದಾಟಬಹುದು. ಹೀಗಾಗಿ ಕೆಲವು ಕಠಿಣ ನಿಯಮಗಳನ್ನು ಜಾರಿ ಮಾಡಬೇಕೆಂದು ಮನವಿ ಮಾಡಿದರು.

ವಿಶೇಷವಾಗಿ ಮಹಾರಾಷ್ಟ್ರ, ಕೇರಳ, ಉತ್ತರಪ್ರದೇಶ, ಉತ್ತರಖಂಡ್, ಕೇರಳ, ರಾಜಸ್ಥಾನ ಸೇರಿದಂತೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗಿರುವ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾವಹಿಸಬೇಕು. ಅಲ್ಲಿಂದ ಬರುವವರಿಗೆ ಕೋವಿಡ್ ನೆಗೆಟಿವ್ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸಬೇಕು, ಅಂತರ್‍ರಾಜ್ಯ ಪ್ರಯಾಣಕ್ಕೆ ಕಡಿವಾಣ, ಗಡಿಭಾಗಗಳಲ್ಲಿ ಬಿಗಿಗೊಳಿಸಬೇಕೆಂದು ಸಲಹೆ ಮಾಡಿದರು.

# ಭಾನುವಾರ ತೀರ್ಮಾನ:
ತಜ್ಞರು ಹಾಗೂ ಅಕಾರಿಗಳ ಸಲಹೆ, ಅಭಿಪ್ರಾಯಗಳನ್ನು ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಭಾನುವಾರ ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿದೆ. ತಜ್ಞರು ನೀಡಿರುವ ಶಿಫಾರಸ್ಸುಗಳ ಬಗ್ಗೆ ಚರ್ಚಿಸಿ ಅಂದು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ತಜ್ಞರ ಸಮಿತಿಯ ಶಿಫಾರಸ್ಸುಗಳು:
* ರಾತ್ರಿ 8ರಿಂದ ಬೆಳಗ್ಗೆ 6 ಗಂಟೆವರೆಗೆ ಕಠಿಣ ಕಫ್ರ್ಯೂ ವಿಸುವುದು
* ರಾಜ್ಯಾದ್ಯಂತ 144ನೇ ಸೆಕ್ಷನ್ ಜಾರಿ
* ಜನಜಂಗುಳಿ ಸೇರುವ ಕಾರ್ಯಕ್ರಮಗಳ ಬಂದ್
* ಶಾಲಾಕಾಲೇಜು ಹಾಗೂ ಚಲನಚಿತ್ರಮಂದಿರಗಳು ಬಂದ್
* ಮದುವೆ ಮಂಟಪಗಳು ಬಂದ್
* ಧಾರ್ಮಿಕ ಕೇಂದ್ರಗಳಿಗೆ ಪ್ರವೇಶ ನಿರ್ಬಂಧ
* ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ನಿಯಮ ಜಾರಿ
* ಬಾರ್, ಪಬ್, ಡಿಸ್ಕೊತೆಕ್ ಬಂದ್
* ಅಂತಾರಾಜ್ಯ ಪ್ರಯಾಣಕ್ಕೆ ನಿರ್ಬಂಧ
* ಗಡಿಭಾಗಗಳಲ್ಲಿ ಬಿಗಿ ತಪಾಸಣೆ
* ಚೆಕ್‍ ಪೋಸ್ಟ್ ಗಳ ಹೆಚ್ಚಳ
* ಕನಿಷ್ಠ ಒಂದೂವರೆ ತಿಂಗಳು ಅಂದರೆ ಮೇ ತಿಂಗಳ ಅಂತ್ಯದವರೆಗೆ ಗಡಿಭಾಗಗಳಲ್ಲಿ ಹೊರರಾಜ್ಯಗಳಿಂದ ಬರುವವರ ಮೇಲೆ ನಿಗಾ ವಹಿಸುವುದು.
* ಕಫ್ರ್ಯೂ ಸಮಯವನ್ನು ರಾತ್ರಿ 8ರಿಂದ ಬೆಳಗ್ಗೆ 6ರವರೆಗೆ ವಿಸ್ತರಣೆ ಮಾಡುವುದು
* 8 ಜಿಲ್ಲೆಗಳ ಜೊತೆ ಇಡೀ ರಾಜ್ಯಕ್ಕೆ ಕಫ್ರ್ಯೂ ವಿಸ್ತರಣೆ
* ಆರ್ಥಿಕ ಸ್ಥಿತಿಗತಿಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ಎಚ್ಚರ ವಹಿಸಿ, ಹಗಲು ಸಮಯದಲ್ಲಿ ಕಫ್ರ್ಯೂ ಜಾರಿ ಮಾಡಬೇಕು.
* ಹೋಟೆಲ್‍ಗಳ ಸೇವೆಯನ್ನು ಸ್ಥಗಿತಗೊಳಿಸಿ, ಪಾರ್ಸಲ್‍ಗಳಿಗೆ ಮಾತ್ರ ಅವಕಾಶ ಕೊಡುವುದು
* ಹಣ್ಣು ತರಕಾರಿ ಮಾರುಕಟ್ಟೆ ವಿಕೇಂದ್ರೀಕರಣ ಮಾಡುವುದು
* ಈಜುಕೊಳ, ಕ್ಲಬ್‍ಗಳನ್ನು ಬಂದ್ ಮಾಡುವುದು
* ಕೋವಿಡ್ ಟೆಸ್ಟ್ ಹೆಚ್ಚಳ ಮಾಡುವುದು
* ಲಸಿಕೆ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸುವುದು
* ಸೆಲೆಬ್ರಿಟಿಗಳ ಮೂಲಕ ಜನಜಾಗೃತಿ ಕಾರ್ಯಕ್ರಮ
* ರಾಜ್ಯದ ಪ್ರಸಿದ್ದ ದೇವಾಲಯಗಳಲ್ಲಿ ಮೇ ಅಂತ್ಯದವರೆಗೂ ಭಕ್ತಾಗಳ ದರ್ಶನಕ್ಕೆ ನಿರ್ಬಂಧ ಸೇರಿದಂತೆ ಮತ್ತಿತರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಜ್ಞರ ಸಮಿತಿ ಶಿಫಾರಸ್ಸು ಮಾಡಿದೆ.

Facebook Comments

Sri Raghav

Admin