ಗಣರಾಜ್ಯೋತ್ಸ ದಿನವೇ ಅಸ್ಸಾಂನಲ್ಲಿ 4 ಗ್ರೆನೇಡ್‍ಗಳ ಸ್ಫೋಟ..!

ಈ ಸುದ್ದಿಯನ್ನು ಶೇರ್ ಮಾಡಿ

ಗುವಾಹತಿ, ಜ.26-ದೇಶಾದ್ಯಂತ 71ನೇ ಗಣರಾಜ್ಯೋತ್ಸವವನ್ನು ಸಡಗರ-ಸಂಭ್ರಮದಿಂದ ಆಚರಿಸುತ್ತಿರುವಾಗಲೇ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನಾಲ್ಕು ಪ್ರಬಲ ಗ್ರೆನೇಡ್‍ಗಳು ಸ್ಫೋಟಗೊಂಡಿವೆ.

ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ.  ಅಸ್ಸಾಂ ದಿಬ್ರುಗಡ್‍ಜಿಲ್ಲೆಯಲ್ಲಿ ಮೂರು ಮತ್ತು ಚಾರೈಡಿಯೋ ಜಿಲ್ಲೆಯಲ್ಲಿ ಒಂದುಗ್ರೆನೇಡ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿಬ್ರುಗಢ್ ಪೊಲೀಸ್ ಠಾಣೆ ವ್ಯಾಪ್ತಿಯಗ್ರಹಂ ಬಜಾರ್ ಮತ್ತು ಎ.ಟಿ. ರಸ್ತೆಯ ಗುರುದ್ವಾರ್ ಪಕ್ಕದಲ್ಲಿ ಎರಡು ಗ್ರೆನೇಡ್‍ಗಳು ಸ್ಫೋಟಗೊಂಡವು. ಮತ್ತೊಂದು ಗ್ರೆನೇಡ್ ದುಲಿಯಾ ಜಾನ್‍ನಲ್ಲಿ ಬ್ಲಾಸ್ಟ್ ಆಗಿದೆ.  ಚಾರೈಡಿಯೋ ಜಿಲ್ಲೆಯ ಸೋನಾರಿ ಪೊಲೀಸ್‍ಠಾಣೆ ವ್ಯಾಪ್ತಿಯ ಟಿಯೋಕ್ ಘಾಟ್‍ನಲ್ಲಿ ಪ್ರಬಲ ಗ್ರೆನೇಡ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ಗ್ರೆನೇಡ್ ಸ್ಫೋಟಗಳಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲವಾದರೂ, ಜನರು ಭಯಭೀತರಾಗಿದ್ದಾರೆ.  ಇದು ಉಗ್ರರು ಮತ್ತು ಪ್ರತ್ಯೇಕತಾ ವಾದಿಗಳ ಕೃತ್ಯವಾಗಿದೆ. ಸ್ಥಳಕ್ಕೆ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Facebook Comments