ಬ್ಲಾಕ್ ಫಂಗಸ್ ಕಣ್ಣಿಗೆ ತಲುಪಿದರೆ ಕಣ್ಣು ತೆಗೆಯಲೇ ಬೇಕಾಗುತ್ತದೆ: ಸಚಿವ ಸುಧಾಕರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ. 1- ಬ್ಲಾಕ್ ಫಂಗಸ್ ಔಷಧಿ 1300 ವಯಲ್ಸ್ ನೀಡಿದ್ದು, ಅದು ರಾಜ್ಯದ ರೋಗಿಗಳಿಗೆ ಸಾಕಾಗುವುದಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಲಾಕಗ ಫಂಗಸ್ ಔಷಧಿ ಕೊರತೆ ನೀಗಿಸಲು ನಾನು ಕೇಂದ್ರ ಸಚಿವ ಸದಾನಂದಗೌಡರ ಜೊತೆ ಪ್ರತಿದಿನ ಮಾತಾಡುತ್ತಾ ಇದ್ದೇನೆ. ನಾಲ್ಕು ಹಾಗೂ ಐದನೇ ತಾರೀಖಿನ ವೇಳೆಗೆ ಹೆಚ್ಚು ಕಳುಹಿಸುವುದಾಗಿ ಹೇಳಿದ್ದಾರೆ ಎಂದರು.

ಬ್ಲಾಕ್ ಫಂಗಸ್ ಕಣ್ಣಿಗೆ ತಲುಪಿದ ಮೇಲೆ ಕಣ್ಣು ತೆಗೆಯಲೇ ಬೇಕಾಗುತ್ತದೆ. ಅದು ಮಿದುಳಿಗೆ ಹೋಗದಂತೆ ನೋಡಿಕೊಳ್ಳಬೇಕು. ಮೊದಲು ಡೆಂಟಲ್ ಪರೀಕ್ಷೆ ಮಾಡುತ್ತಾರೆ. ಬಳಿಕ ಕಣ್ಣಿನ ತಜ್ಞರು ಎಲ್ಲಾ ಸೇರಿ ಪರೀಕ್ಷೆ ಮಾಡುತ್ತಾರೆ ಎಂದು ಅವರು ಹೇಳಿದರು.

ಮೂರು ಲಕ್ಷ ಕೋವಿಡ್ ಲಸಿಕೆ ಡೋಸ್ ಬಂದಿದೆ. ಎರಡನೇ ಡೋಸ್ ನೀಡಲು ಸಹಾಯವಾಗುತ್ತಿದೆ ಎಂದರು. ಪ್ರತಿ ಜಿಲ್ಲೆಗಳಲ್ಲೂ ಲಾಕ್ ಡೌನ್ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ನಾಯಕರು ಅಂತಿಮವಾಗಿ ನಿರ್ಣಯಗಳನ್ನ ತೆಗೆದುಕೊಳ್ಳುತ್ತಾರೆ. ಜನಹಿತದ ಅಭಿಪ್ರಾಯಗಳನ್ನು ಕೊಡುತ್ತೇವೆ. ಅಂತಿಮವಾಗಿ ಮುಖ್ಯಮಂತ್ರಿ ನಿರ್ಣಯ ತೆಗೆದುಕೊಳ್ತಾರೆ. ನಾವ್ಯಾರು ನಿರ್ಧಾರ ತೆಗೆದುಕೊಳ್ಳೋಕೆ ಆಗೋದಿಲ್ಲ. ಅದು ಆಗಲಬಾರದು. ಹೀಗಾಗಿ ನಮ್ಮ ಅಭಿಪ್ರಾಯ ಕೊಟ್ಟಿದ್ದೇವೆ ಎಂದು ಅವರು ತಿಳಿಸಿದರು.

ತಜ್ಞರು ನೀಡಿದ ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿದ್ದೇನೆ. ಶೇ.5 ಕ್ಕಿಂತ ಕಡಿಮೆ ಪಾಸಿಟಿವ್ ದರ, 5 ಸಾವಿರಕ್ಕೂ ಕಡಿಮೆ ಕೇಸ್ ಬಂದಾಗ ಮಾತ್ರ ಲಾಕ್ ಡೌನ್ ನಿರ್ಬಂಧ ಸಡಿಲ ಮಾಡಲು ಸೂಚಿಸಿದ್ದಾರೆ. ಹಂತ ಹಂತವಾಗಿ ಕಡಿಮೆ ಮಾಡಲು ಹೇಳಿದ್ದಾರೆ.‌ ಕಡಿಮೆ ಆಗಿದೆ. ಆದರೆ ಶೇ.5 ರಷ್ಟು ಕಡಿಮೆ ಆಗಿಲ್ಲ ಎಂದು ಸುಧಾಕರ್ ಹೇಳಿದರು.
ನಮ್ಮ ರಾಜ್ಯದಲ್ಲೇ ಅತಿ ಹೆಚ್ಚು ಮಕ್ಕಳ ತಜ್ಞರು ಇದ್ದಾರೆ. ಮೂರನೇ ಅಲೆ ಎದುರಿಸಲು ಸಿದ್ಧವಾಗಿದ್ದೇವೆ ಎಂದು ಅವರು ತಿಳಿಸಿದರು.

Facebook Comments