ಕಣ್ಣಿನ ಬಗ್ಗೆ ಕಾಳಜಿ ಇರಲಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.23- ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ತಡವಾಗುತ್ತಿರುವುದು ಮತ್ತು ಜೀವನಶೈಲಿಯಲ್ಲಿ ಬದಲಾವಣೆಯಾಗಿರುವುದು ಪ್ರಮುಖ ಕಾರಣಗಳಾಗಿವೆ ಎಂದು ಡಾ.ಅಗರ್‍ವಾಲ್ಸ್ ಐ ಹಾಸ್ಪಿಟಲ್‍ನ ಕಣ್ಣಿನ ಸರ್ಜನ್ ಈ ಆತಂಕಕಾರಿ ವಿಚಾರ ತಿಳಿಸಿದ್ದು, ಈ ಸಾಂಕ್ರಾಮಿಕದಿಂದ ಪ್ರಮುಖವಾಗಿ ವಯಸ್ಸಾದವರು ಗಂಭೀರ ಪರಿಸ್ಥಿತಿ ಎದುರಿಸುವಂತಾಗಿದೆ.

ಇವರಲ್ಲಿ ಮೆಚ್ಯೂರ್ ಕೆಟರಾಕ್ಟ್‍ಗಳ ಪ್ರಮಾಣ ಸಾಂಕ್ರಾಮಿಕಕ್ಕಿಂತ ಮುಂಚಿನದ್ದಕ್ಕಿಂತ ಐದು ಪಟ್ಟು ಹೆಚ್ಚಳವಾಗಿದೆ. ಇದರ ಜತೆಗೆ ಬೆಳಕಿನ ಕಿರಣಗಳು ಹೆಚ್ಚು ಇರುವ ಡಿಜಿಟಲ್ ಸ್ಕ್ರೀನ್‍ಗಳ ಮುಂದೆ ಹೆಚ್ಚು ಸಮಯ ಕಳೆಯುತ್ತಿರುವುದರಿಂದ ಜನರಲ್ಲಿ ಒಣ ಕಣ್ಣು ಅಥವಾ ಡ್ರೈ ಐ ಪ್ರಮಾಣ ಮೂರು ಪಟ್ಟು ಹೆಚ್ಚಳವಾಗಿದೆ ಎಂದು ಡಾ.ಅಗರ್‍ವಾಲ್ಸ್ ಐ ಹಾಸ್ಪಿಟಲ್ ಕ್ಲಿನಿಕಲ್ ಸರ್ವೀಸಸ್‍ನ ಪ್ರಾದೇಶಿಕ ಮುಖ್ಯಸ್ಥ ಡಾ.ರಾಮ್ ಮಿರ್ಲೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಂಕ್ರಾಮಿಕವಿದೆ ಎಂಬ ಕಾರಣಕ್ಕೆ ನಿಯಮಿತ ತಪಾಸಣೆಗೆ ಆಸ್ಪತ್ರೆಗೆ ಭೇಟಿ ನೀಡದ ಕಾರಣದಿಂದ ಅನೇಕ ರೋಗಿಗಳಲ್ಲಿ ಗ್ಲುಕೋಮಾ ಪ್ರಕರಣಗಳು ಹೆಚ್ಚಾಗಿರುವುದು ಮತ್ತು ಗಂಭೀರ ಸ್ವರೂಪ ಪಡೆದುಕೊಂಡಿರುವುದನ್ನು ಕಂಡಿದ್ದೇವೆ ಎಂದು ಹೇಳಿದರು. ಡಯಾಬಿಟಿಸ್ ಇರುವ ರೋಗಿಗಳು ನಿಯಮಿತವಾಗಿ ಕಣ್ಣಿನ ತಪಾಸಣೆಯನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಅವರ ರೆಟಿನಾದಲ್ಲಿ ಗಂಭೀರ ಸಮಸ್ಯೆಯನ್ನು ಎದುರಿಸುವಂತಾಗಿದೆ ಎಂದರು.

ಡಾ.ಅಗರ್‍ವಾಲ್ಸ್ ಐ ಹಾಸ್ಪಿಟಲ್ ಕ್ಲಿನಿಕಲ್ ಸರ್ವೀಸಸ್‍ನ ಪ್ರಾದೇಶಿಕ ಮುಖ್ಯಸ್ಥರಾದ ಡಾ.ಅರ್ಚನಾ ಎಸ್ ಮಾತನಾಡಿ, ಸಾಂಕ್ರಾಮಿಕಕ್ಕಿಂತ ಮುನ್ನ ಶೇ.10ರಷ್ಟಿದ್ದ ಗಂಭೀರ ಸ್ವರೂಪದ ಡ್ರೈ ಐ ಪ್ರಮಾಣ ಈಗ ಶೇ.30 ಕ್ಕೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಡಾ.ರಾಮ್ ಮಿರ್ಲೆ ಮಾತನಾಡಿ, 50 ವರ್ಷ ಮೇಲ್ಪಟ್ಟ ಡಯಾಬಿಟಿಕ್ ರೋಗಿಗಳು ಕನಿಷ್ಠ ಒಂದು ವರ್ಷಕ್ಕೊಮ್ಮೆಯಾದರೂ ಕಣ್ಣಿನ ವೈದ್ಯರಿಂದ ತಮ್ಮ ಕಣ್ಣುಗಳನ್ನು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

Facebook Comments