ನೀವೇಕೆ ಕಣ್ಣಿನ ಬಗ್ಗೆ ಕಾಳಜಿ ವಹಿಸುತ್ತಿಲ್ಲ…?

ಈ ಸುದ್ದಿಯನ್ನು ಶೇರ್ ಮಾಡಿ

Eye

ಕಣ್ಣಿಗೆ ಬಗ್ಗೆ ಕಾಳಜಿ ವಹಿಸುವಲ್ಲಿ ಮತ್ತು ನೇತ್ರ ರಕ್ಷಣೆ ಕುರಿತು ಜಾಗೃತಿ ಮೂಡಿಸುವಲ್ಲಿ ಭಾರತೀಯರು ಅತ್ಯಂತ ಉದಾಸೀನ ಧೋರಣೆ ಹೊಂದಿದ್ದಾರೆ ಎಂದು ಸಂಶೋಧನೆಯೊಂದು ತಿಳಿಸಿದೆ. ವಿಶ್ವದ ಮೂರನೇ ಒಂದರಷ್ಟು ಜನರು ಮಾತ್ರ ತಮ್ಮ ಅಮೂಲ್ಯ ಕಣ್ಣುಗಳ ಬಗ್ಗೆ ತೀವ್ರ ಕಾಳಜಿ ವಹಿಸುತ್ತಾರೆ. ಕಾಳಜಿ ವಹಿಸದೇ ಇರುವವರ ಪಟ್ಟಿಯಲ್ಲಿ ಭಾರತೀಯರು ಮುಂಚೂಣಿಯಲ್ಲಿದ್ದಾರೆ ಎಂಬುದು ಇತ್ತೀಚಿನ ಕೆಲವು ಸಂಶೋಧನೆಗಳಿಂದ ತಿಳಿದುಬಂದಿದೆ.

ಮನುಷ್ಯ ತನ್ನ ದೃಷ್ಟಿಯನ್ನು ಕಳೆದುಕೊಂಡರೆ ಜೀವನದಲ್ಲಿ ಬಹಳಷ್ಟನ್ನು ಕಳೆದುಕೊಂಡಂತೆ ಎಂಬ ಸತ್ಯ ತಿಳಿದಿದ್ದರೂ ಕೂಡ ಅತ್ತ ಕಡೆ ಗಮನ ಹರಿಸುತ್ತಿಲ್ಲ. ಕಣ್ಣಿನ ಸಮಸ್ಯೆ ತಾನಾಗೇ ಬರುವವರೆಗೆ ತಾವು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದಿಲ್ಲ ಎಂದು ಶೇ.44ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ತಮ್ಮ ದೃಷ್ಟಿಯಲ್ಲಿ ಯಾವುದೇ ದೋಷವಿಲ್ಲ. ತಾವು ಏಕೆ ನೇತ್ರ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಶೇಕಡ 42ರಷ್ಟು ಜನರು ಪ್ರಶ್ನಿಸುತ್ತಾರೆ.

ಭಾರತದಲ್ಲಿ ಶೇಕಡ 70ರಷ್ಟು ಮಂದಿ ಕಣ್ಣಿನಲ್ಲಿ ಸಮಸ್ಯೆ ಅಥವಾ ದೋಷ ಉದ್ಭವಿಸುವ ತನಕ ಕಣ್ಣಿನ ಬಗ್ಗೆ ಆಸ್ಥೆ ವಹಿಸುವುದಿಲ್ಲ ಎಂದು ಸಂಶೋಧನೆ ತಿಳಿಸಿದೆ. ತಾವು ಕಣ್ಣಿನ ಬಗ್ಗೆ ಹೆಚ್ಚು ತಿಳಿದ್ದೇವೆ ಎಂದು ಭಾರತೀಯರು ಹೇಳಿಕೊಳ್ಳುತ್ತಾರೆ. ಆದರೆ ಇತರ ದೇಶಗಳಿಗೆ ಹೋಲಿಸಿದರೆ, ಭಾರತೀಯರುಗೆ ಕಣ್ಣಿನ ಬಗ್ಗೆ ನಿಜವಾಗಿಯೂ ಅರಿವಿಲ್ಲ. ಸ್ಥೂಲಕಾಯ, ಮಾಲಿನ್ಯ, ಧೂಮಪಾನದಿಂದ ಭಾರತೀಯರು ಹೆಚ್ಚಾಗಿ ಕಣ್ಣಿನ ದೋಷಕ್ಕೆ ಒಳಗಾಗುತ್ತಾರೆ ಎಂದು ಸಂಶೋಧನೆ ತಿಳಿಸಿದೆ.

ಕಣ್ಣು ನಿಮಗೆಷ್ಟು ಮುಖ್ಯ ಎನ್ನುವ ಪ್ರಶ್ನೆಗೆ ಶೇ.79ರಷ್ಟು ಜನರು ನಮಗೆ ರುಚಿ ಅನುಭವಿಸುವ ಸಾಮಥ್ರ್ಯ ಹೋದರೂ ಪರವಾಗಿಲ್ಲ, ಶೇಕಡ 78ರಷ್ಟು ಮಂದಿ ನಮಗೆ ಕಿವಿಯಲ್ಲಿ ದೋಷ ಉಂಟಾದರೂ ತೊಂದರೆಯಿಲ್ಲ ಹಾಗೂ ಶೇಕಡ 67ರಷ್ಟು ಜನ ನಮ್ಮ ಆಯಸ್ಸು ಮತ್ತು ವರ್ಷ ಕಡಿಮೆಯಾದರೂ ಚಿಂತೆ ಇಲ್ಲ. ನಾವು ಬದುಕಿರುವ ತನಕ ದೃಷ್ಟಿಯಲ್ಲಿ ಯಾವುದೇ ದೋಷ ಉಂಟಾಗಬಾರದು ಎಂದು ಹೇಳಿಕೊಂಡಿದ್ದಾರೆ. ಜನರ ಮನಸ್ಥಿತಿ ಹೀಗಿದ್ದರೂ ಕೂಡ ನೇತ್ರ ರಕ್ಷಣೆ ಕುರಿತು ಜಾಗೃತಿ ವಹಿಸುತ್ತಿಲ್ಲ. ಭಾರತದಲ್ಲಿ ಸುಮಾರು 80,00,000 ಮಂದಿ ಕಣ್ಣಿನ ಸಮಸ್ಯೆಯಿಂದ ಬಳಸುತ್ತಿದ್ದಾರೆ ಎಂದು ಸಂಶೋಧನೆ ಹೇಳಿದೆ.

Facebook Comments

Sri Raghav

Admin