ದೃಷ್ಟಿ ಕಾಪಾಡಿಕೊಳ್ಳಲು ಮಧುಮೇಹಿಗಳ ಕಣ್ಣಿನ ತಪಾಸಣೆ ಅತ್ಯಗತ್ಯ
ಬೆಂಗಳೂರು, ನ.16- ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿದ್ದು, ಮಧುಮೇಹ ಪತ್ತೆಯಾದ ತಕ್ಷಣ ಅದರಲ್ಲೂ ವಿಶೇಷವಾಗಿ ಟೈಪ್ 2 ಮಧುಮೇಹಿಗಳಲ್ಲಿ ಕಣ್ಣಿನ ತಪಾಸಣೆಯನ್ನು ಕೂಡಲೇ ಮಾಡಿಸುವುದು ಸೂಕ್ತ ಎಂದು ಶಂಕರ ಐ ಫೌಂಡೇಶನ್ ಇಂಡಿಯಾದ ವಿಟ್ರಿಯೊ ರೆಟಿನಾ ಮತ್ತು ಆಕ್ಯುಲರ್ ಆಂಕೊಲಾಜಿಯ ಮುಖ್ಯಸ್ಥ ಡಾ.ಮಹೇಶ್ ಪಿ.ಷಣ್ಮುಗಂ ಹೇಳಿದ್ದಾರೆ.
ಭಾರತದಲ್ಲಿ 77 ದಶಲಕ್ಷಕ್ಕೂ ಹೆಚ್ಚು ಜನರು ಮಧುಮೇಹದಿಂದ ಬಳಲುತ್ತಿರುವುದರಿಂದ ದೃಷ್ಟಿ ನಷ್ಟದ ಹರಡುವಿಕೆಯಲ್ಲಿ ಸಾರ್ವಕಾಲಿಕ ಮತ್ತು ತೀವ್ರವಾದ ಏರಿಕೆಯು ಕಂಡು ಬಂದಿದೆ.
ಭಾರತದಲ್ಲಿ ಸುಮಾರು 1.1-ಕೋಟಿ ಜನರು ರೆಟಿನಾದ ಅಸ್ವಸ್ಥತೆಗಳಿಂದ ಬಳಲುತ್ತಿz್ದÁರೆಂದು ಅಂದಾಜಿಸಲಾಗಿದೆ. ಹೆಚ್ಚು ಆತಂಕಕಾರಿಯಾಗಿ ಮಧುಮೇಹದಿಂದ ಬಳಲುತ್ತಿರುವ ಪ್ರತಿ ಮೂವರಲ್ಲಿ ಒಬ್ಬರು ಕಣ್ಣುಗಳ ಮೇಲೆ ಪರಿಣಾಮ ಬೀರುವ ಮಧುಮೇಹದ ತೊಡಕಾದ ಸ್ವಲ್ಪ ಮಟ್ಟಿನ ಡಯಾಬಿಟಿಕ್ ರೆಟಿನೋಪತಿ ಅನ್ನು ಹೊಂದಿz್ದÁರೆ. ಹಾಗಾಗಿ ಮಧುಮೇಹಿಗಳಲ್ಲಿ ರೋಗ ಲಕ್ಷಣಗಳು ಸಂಭವಿಸುವವರೆಗೆ ಕಾಯದಿರುವುದು ಉತ್ತಮ.
ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ ರೋಗವು ಸಾಕಷ್ಟು ಉಲ್ಬಣಿಸಿರ ಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಅವರು, ಎಷ್ಟು ಬೇಗನೆ ಸಾಧ್ಯವೋ ಅಷ್ಟು ಬೇಗ ರೋಗ ನಿರ್ಣಯಿಸಿ ಚಿಕಿತ್ಸೆ ನೀಡಬೇಕಾಗಿರುತ್ತದೆ ಎಂದು ಅಭಿಪ್ರಾಯ ಪಟ್ಟಿರುತ್ತಾರೆ.
ಟೈಪ್ 1 ಡಯಾಬಿಟಿಸ್ನಿಂದ ಬಳಲುತ್ತಿರುವ ಯುವ ಜನತೆ ಡಯಾಬಿಟಿಕ್ ರೆಟಿನೋಪತಿಗೆ ತುತ್ತಾಗುವ ಸಾಧ್ಯತೆಯಿದೆ. ಟೈಪ್-2 ಮಧುಮೇಹದಿಂದ ಬಳಲುತ್ತಿರುವ ಜನರು ಸಹ ಮಧುಮೇಹ ಸಂಬಂತ ರೆಟಿನಾದ ರೋಗಗಳ ಆಕ್ರಮಣದಿಂದಾಗಿ ತಮ್ಮ ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯವನ್ನು ಹೊಂದಿರುತ್ತಾರೆ.