ನೀವು ಏರ್ ಕಂಡೀಷನ್‌ನಲ್ಲಿ ಕೂತು ಕೆಲಸ ಮಾಡ್ತೀರಾ..? ಹಾಗಾದ್ರೆ ಹುಷಾರ್..!

ಈ ಸುದ್ದಿಯನ್ನು ಶೇರ್ ಮಾಡಿ

ಏರ್ ಕಂಡೀಷನ್ಇರುವ ಕೊಠಡಿ ನಿಮಗೆ ತಂಪಿನ ಅನುಭವ ನೀಡಬಹುದು. ಆದರೆ ಹೆಚ್ಚು ಸಮಯ ಅಂತಹ ವಾತಾವರಣದಲ್ಲಿ ಇರುತ್ತೀರ ಅಂದರೆ ಅದು ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಮುಖ್ಯವಾಗಿ ಕಣ್ಣಿನ ಮೇಲೆ ಬೀರುವ ನಕಾರಾತ್ಮಕ ಪರಿಣಾಮ ತಕ್ಷಣಕ್ಕೆ ಅರಿವಿಗೆ ಬರುವುದಿಲ್ಲ.

ಕಣ್ಣು ಸೂಕ್ಷ ಅಂಗವಾಗಿದ್ದು ದೇಹಕ್ಕಿಂತಲೂ ಹೆಚ್ಚಿನ ನಕಾರಾತ್ಮಕ ಪರಿಣಾಮಕ್ಕೆ ಬಹು ಬೇಗ ಇದು ತುತ್ತಾಗಲಿದೆ. ಯಂತ್ರದ ಮೂಲಕ ಬೀಸುವ ಕೃತಕ ಗಾಳಿ ಮತ್ತು ತಾಪಮಾನ ಕಣ್ಣುಗಳಲ್ಲಿ ತೇವಾಂಶವನ್ನು ಕಡಿಮೆ ಮಾಡುತ್ತವೆ. ಇದರಿಂದಾಗಿ ಕಣ್ಣುಗಳಲ್ಲಿ ಸಾಕಾಗುವಷ್ಟು ಗುಣಮಟ್ಟದ ಮತ್ತು ಅಗತ್ಯ ಪ್ರಮಾಣದ ನೀರಿನ ಕೊರತೆಯಾಗುತ್ತದೆ.

ಏರ್ ಕಂಡೀಷನ್ಡ್ಅಥವಾ ಹವಾ ನಿಯಂತ್ರಿತ ಕೊಠಡಿಲ್ಲಿ ತಾಪಮಾನ ಕಡಿಮೆ ಇರುವುದರಿಂದ ತೇವಾಂಶ ನಷ್ಟವಾಗುತ್ತದೆ. ಇಂಥ ವಾತಾವರಣದಲ್ಲಿ ದೀರ್ಘಾವಧಿಗೆ ಕಣ್ಣುಗಳನ್ನು ಒಡ್ಡುವುದರಿಂದ ಕಣ್ಣೀರಿನ ಗುಣಮಟ್ಟ, ಪ್ರಮಾಣದಲ್ಲಿ ಬದಲಾವಣೆಯಾಗಿ ಒಣ ಕಣ್ಣುಗಳ ಸಮಸ್ಯೆ ಉಂಟಾಗುತ್ತದೆ. ಕೆಲವೊಮ್ಮೆ ಇದು ಗಂಭೀರ ಸ್ವರೂಪದ ಸಮಸ್ಯೆಗಳಿಗೂ ಕಾರಣವಾಗಬಲ್ಲದು.

‘ಏರ್ ಕಂಡೀಷನಿಂಗ್ನಲ್ಲಿ ನೈರ್ಮಲ್ಯದ ಕೊರತೆಯಿಂದಾಗಿ ವೈರಸ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಸುಲಭವಾಗಿ ಹರಡಬಲ್ಲವು. ಎಸಿಯಲ್ಲಿ ಸೋಂಕಿಗೆ ಪೂರಕವಾದ ಗುಣಗಳಿರುವುದರಿಂದ ಕಣ್ಣುಗಳಲ್ಲಿ ಉರಿ ಮತ್ತು ಸೋಂಕು ಕಾಣಿಸಿಕೊಳ್ಳಬಲ್ಲದು’

# ಲಕ್ಷಣಗಳು :  ಕಣ್ಣುಗಳಲ್ಲಿ ಉರಿಯುಂಟಾಗುವುದು,  ಕಣ್ಣುಗಳು ಒಣಗಿದಂತಾಗುವುದು,   ಕಣ್ಣಿನೊಳಗೆ ಏನೋ ಬಿದ್ದಂತಾಗಿ ತುರಿಕೆಯುಂಟಾಗುವದು, ಕಣ್ಣಿಗಳಲ್ಲಿ ಆಯಾಸ, ಭಾರವಾದಂತೆ ಭಾಸವಾಗುವುದು,  ಕಣ್ಣುಗಳಲ್ಲಿ ನೀರು ತುಂಬಿಕೊಂಡಂತಾಗುವುದು, ದೃಷ್ಟಿ ಮಸುಕಾದಂತಾಗುವುದು.

# ಎಚ್ಚರವಹಿಸಿ : 
* ಹವಾನಿಯಂತ್ರಣ ವ್ಯವಸ್ಥೆಗೆ ಸಮೀಪದಲ್ಲಿ ಕೆಲಸ ಮಾಡುವುದನ್ನು ಆದಷ್ಟು ಕಡಿಮೆ ಮಾಡಿ.  ಕೊಠಡಿಯ ತಾಪಮಾನವನ್ನು ಕಾಯ್ದುಕೊಳ್ಳಿ. ಇದು ಸರಾಸರಿ 23 ಡಿಗ್ರಿ ಸೆಂಟಿಗ್ರೇಡ್ಇರಬೇಕು.

* ಹವಾನಿಯಂತ್ರಿತ ವ್ಯವಸ್ಥೆಯು ವಾತಾವರಣದ ತಾಪಮಾನ ಕುಗ್ಗಿಸಲಿದೆ. ಇದು ಕಣ್ಣು ಒಣಗಲು ಕಾರಣವಾಗಲಿದೆ. ಇದನ್ನು ತಡೆಯಲು ಕೊಠಡಿಯ ಮೂಲೆಯಲ್ಲಿ ನೀರು ಇರುವಂತೆ ನೋಡಿಕೊಳ್ಳಿ. * ದೀರ್ಘಕಾಲ ಹವಾನಿಯಂತ್ರಿತ ವ್ಯವಸ್ಥೆ ಬಳಕೆ ಮಾಡುವುದರಿಂದ ಅದರಲ್ಲಿ ಬ್ಯಾಕ್ಟೀರಿಯಾ ವೃದ್ಧಿಯಾಗುತ್ತದೆ. ಇದರಿಂದ ವಾಸನೆ, ಸೋಂಕು ಮೂಡಲು ಕಾರಣವಾಗಲಿದೆ. ಹೀಗಾಗಿ ಎಸಿಯ ನಿಯಮಿತ ನಿರ್ವಹಣೆ ಸೂಕ್ತ.

* ದೇಹದ ತಾಪಮಾನ ಚೆನ್ನಾಗಿರುವಂತೆ ಆದಷ್ಟು ನೀರು, ಪಾನೀಯ, ಹಾಲು ಸೇವಿಸಿ. ಆದಷ್ಟು ಟೀ, ಕಾಫಿ ಕುಡಿಯುವುದನ್ನು ಕಡಿಮೆ ಮಾಡಿ. ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ನೀರು ಸೇವಿಸಿ.

Facebook Comments