ಮತ್ತೊಂದು ನಕಲಿ ಛಾಪಾ ಕಾಗದ ದಂಧೆ ಬಯಲಿಗೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.19- ಅಕ್ರಮವಾಗಿ ಮತ್ತು ಅನಕೃತವಾಗಿ ನಕಲಿ ಛಾಪಾ ಕಾಗದಗಳನ್ನು ಸೃಷ್ಟಿಸಿ ಎಂಬೋಜಿಂಗ್/ಪ್ರಾಂಕಿಂಗ್ ಅಸಲಿ ಎಂದು ನಂಬಿಸಿ ಗ್ರಾಹಕರಿಗೆ ಮಾರಾಟ ಮಾಡಿ ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟುಮಾಡಿ ಮೋಸ ಮಾಡುತ್ತಿದ್ದ 5 ಮಂದಿ ಹವ್ಯಾಸಿ ದಂಧೆಕೋರ ಆರೋಪಿಗಳನ್ನು ಪೂರ್ವ ವಿಭಾಗದ ಎಸ್‍ಐಟಿ ಬಂಧಿಸಿ ಬರೊಬ್ಬರಿ 63.57 ಲಕ್ಷ ಮೌಲ್ಯದ ನಕಲಿ ಛಾಪಾ ಕಾಗದಗಳನ್ನು ವಶಪಡಿಸಿಕೊಂಡಿದೆ.

ಟೈಪಿಸ್ಟ್ ಸೀಮಾ, ಛಾಪಾ ಕಾಗದದ ಸೃಷ್ಠಿಕರ್ತ ಹುಸೇನ್ ಅಲಿಯಾಸ್ ಬಾಬು, ಶಬೀರ್, ನಯಾಜ್ ಮತ್ತು ಹರೀಶ್ ಬಂಧಿತ ಆರೋಪಿಗಳು ಎಂದು ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂಥ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಮುಖ ಆರೋಪಿ ಹುಸೇನ್ ಎಲ್ಲಾ ರೀತಿಯ ಛಾಪಾ ಕಾಗದಗಳ ಬಗ್ಗೆ ತಿಳಿದುಕೊಂಡಿದ್ದನು. ಮಹಾರಾಜರ ಕಾಲದ ಸ್ಟ್ಯಾಂಪ್ ಪೇಪರ್ ಅಲ್ಲದೆ, ಇತ್ತೀಚೆಗೆ ಇರುವಂತಹ ಛಾಪಾ ಕಾಗದಗಳ ಬಗ್ಗೆಯೂ ತಿಳಿದುಕೊಂಡು ಅದೇ ರೀತಿ ಸಿದ್ಧ ಪಡಿಸುತ್ತಿದ್ದನು.

ಸರ್ಕಾರದ ಎಂಬೋಜಿಂಗ್ ಸಹ ಗೊತ್ತಾಗದ ರೀತಿಯಲ್ಲಿ ತಯಾರು ಮಾಡುತ್ತಿದ್ದನು. ಈತ ಯಾವುದೇ ರೀತಿಯ ಹೈಟೆಕ್ ಟೆಕ್ನಾಲಜಿ ಬಳಸುತ್ತಿರಲಿಲ್ಲ.ಸಾಧಾರಣವಾದ ಸ್ಕ್ರೀನ್ ಪ್ರಿಂಟಿಂಗ್ ತಂತ್ರಜ್ಞಾ ಬಳಸುತ್ತಿದ್ದನು. ಸಬ್‍ರಿಜಿಸ್ಟ್ರಾರ್ ಕಚೇರಿಯ ಸಹಿ ಹಾಗೂ ಸೀಲನ್ನು ನಕಲಿಯಾಗಿ ಈತನೇ ಮಾಡುತ್ತಿದ್ದನು.

ಪ್ರಮುಖವಾಗಿ ಆಸ್ತಿ ಖರೀದಿ ಮಾಡುವಾಗ ಸಬ್‍ರಿಜಿಸ್ಟ್ರಾರ್ ಕಚೇರಿ ಹಾಗೂ ಛಾಪಾ ಕಾಗದ ತೆಗೆದುಕೊಳ್ಳುವ ಜಾಗ ಒಂದೇ ವ್ಯಾಪ್ತಿಯಲ್ಲಿ ಇರಬೇಕೆಂಬ ನಿಯಮವಿದೆ. ಆದರೆ, ಈ ಬಗ್ಗೆ ಆರೋಪಿಗೆ ಅರಿವಿರಲಿಲ್ಲ. ಹಾಗಾಗಿ ಬೇರೆ ಬೇರೆ ಸಬ್‍ರಿಜಿಸ್ಟ್ರಾರ್ ಕಚೇರಿಗಳಿಗೆ ಛಾಪಾ ಕಾಗದ ಮಾರಾಟ ಮಾಡುತ್ತಿದ್ದ ವಿಳಾಸ ಬೇರೆಯಾಗಿರುತ್ತಿತ್ತು.

ಗಾಂನಗರದಲ್ಲಿ ಸಬ್‍ರಿಜಿಸ್ಟ್ರಾರ್ ಕಚೇರಿಗೆ ಛಾಪಾ ಕಾಗದ ಕಳುಹಿಸಿದಾಗ ಅಲ್ಲಿನ ಸಿಬ್ಬಂದಿ ಗಮನಿಸಿ ಅದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದು ಅನುಮಾನ ಬಂದು ವಾಪಾಸ್ ಕಳುಹಿಸಿದ್ದರು. ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಂದು ಪ್ರಕರಣ ಮತ್ತು ಹಲಸೂರು ಗೇಟ್ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳನ್ನು ಡಿಸಿಪಿ ಮಟ್ಟದ ಅಕಾರಿಯ ನೇತೃತ್ವದಲ್ಲಿ ತನಿಖೆ ನಡೆಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಘನ ಉಚ್ಛ ನ್ಯಾಯಾಲಯ ಆದೇಶಿಸಿತ್ತು.

ಈ ಹಿನ್ನಲೆಯಲ್ಲಿ ಆಯುಕ್ತರು ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಪೂರ್ವ ವಿಭಾಗದ ಡಿಸಿಪಿ ಡಾ. ಎಸ್.ಡಿ. ಶರಣಪ್ಪ, ಮೇಲ್ವಿಚಾರಣೆಯ ಅಕಾರಿಯಾಗಿ ಬಾಣಸವಾಡಿ ಉಪ ವಿಭಾಗದ ಎಸಿಪಿ ನಿಂಗಪ್ಪ ಬಿ. ಸಕ್ರಿ ಹಾಗೂ ತನಿಖಾಕಾರಿಯಾಗಿ ಗೋವಿಂದಪುರ ಠಾಣೆ ಇನ್ಸ್‍ಪೆಕ್ಟರ್ ಪ್ರಕಾಶ್ ಆರ್. ಅವರನ್ನೊಳಗೊಂಡ ತಂಡವನ್ನು ರಚಿಸಿದ್ದರು.

ಘನ ಉಚ್ಛ ನ್ಯಾಯಾಲಯ ಹಾಗೂ ಪೊಲೀಸ್ ಆಯುಕ್ತರ ಆದೇಶದಂತೆ ತನಿಖೆ ಕೈಗೊಂಡು ಸಿಟಿ ಸಿವಿಲ್ ಕೋರ್ಟ್ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಸಮೀಪ ಪ್ರಾಂಕಿಂಗ್ ಮಾಡಿರುವ ನಕಲಿ ಛಾಪಾ ಕಾಗದಗಳು ಮತ್ತು ಪ್ರಾಂಕಿಂಗ್ ಮಾಡದಿರುವ ಛಾಪಾ ಕಾಗದಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯನ್ನು ಈ ತಂಡ ಸಂಗ್ರಹಿಸಿದೆ.

ನಾಲ್ಕು ತಂಡ ರಚನೆ: ಈ ಪ್ರಕರಣದಲ್ಲಿನ ಆರೋಪಿಗಳನ್ನು ಪತ್ತೆ ಮಾಡುವ ಸಲುವಾಗಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡಗಳು ಸುಮಾರು ಒಂದುವರೆ ತಿಂಗಳಿನಿಂದ ಸದರಿ ಸ್ಥಳಗಳಲ್ಲಿ ನಿಗಾವಹಿಸಿ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದವು.

ನಂತರ ಸಿವಿಲ್ ಡ್ರೆಸ್‍ನಲ್ಲಿ ಸಿಬ್ಬಂದಿಗಳನ್ನು ಕಳುಹಿಸಿ ನಕಲಿ ಛಾಪಾ ಕಾಗದಗಳನ್ನು ಖರೀದಿಸಿ ಅವುಗಳು ನಕಲಿಯೇ ಅಸಲಿಯೇ ಎಂಬುದನ್ನು ಖಚಿತಪಡಿಸಿಕೊಂಡರಲ್ಲದೇ ಸಿಬ್ಬಂದಿಯಿಂದ ದೊರೆತ ಮಾಹಿತಿ ಮೇರೆಗೆ ನ.12ರಂದು ಆರೋಪಿಗಳ ಮನೆಗಳನ್ನು ಶೋಧ ಮಾಡಲು ನ್ಯಾಯಾಲಯದಿಂದ ಶೋಧನಾ ಅನುಮತಿ ಪಡೆಯಲಾಯಿತು.

5 ಮಂದಿ ಬಂಧನ: ಈ ತಂಡಗಳು ಆರೋಪಿಗಳ ಮನೆಗಳ ಮೇಲೆ ನ.13ರಂದು ದಾಳಿ ಮಾಡಿ ಆರೋಪಿಗಳನ್ನು ಬಂಸಿ ವಿಚಾರಣೆಗೆ ಒಳಪಡಿಸಲಾಯಿತು. ಕೃತ್ಯಕ್ಕೆ ಬಳಸುತ್ತಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಬೆಂಗಳೂರು ಕಾಟನ್‍ಪೇಟ್ ಬ್ರ್ಯಾಂಚ್ ಎಂಬ ಹೆಸರಿನ ಚಿಕ್ಕ ರೌಂಡ್‍ಸೀಲ್, ರಬ್ಬರ್ ಸೀಲ್‍ಗಳು, ಇವುಗಳಿಗೆ ಬಳಸುವ ವಿವಿಧ ಇಸವಿ ಹಾಗೂ ತಿಂಗಳುಗಳ ಪ್ಲಾಸ್ಟಿಕ್ ಕಟ್‍ಪೀಸ್ ಜೊತೆಗೆ ಪ್ಲಾಸ್ಟಿಕ್ ಡಬ್ಬಗಳು, ಚಿಕ್ಕ ಮತ್ತು ದೊಡ್ಡ ಗಾತ್ರದ ಸ್ಕ್ರೀನ್ ಪ್ರಿಂಟ್ ಮಷೀನ್ ಮತ್ತು ನಾಲ್ಕು ಪ್ಯಾಡ್‍ಗಳು ಗವರ್ನಮೆಂಟ್ ಆಫ್ ಇಂಡಿಯಾ ಎಂದು ಆಂಗ್ಲ ಭಾಷೆಯಲ್ಲಿ ಮತ್ತು ಭಾರತ್ ಸರ್ಕಾರ್ ಎಂದು ಹಿಂದಿ ಭಾಷೆಯಲ್ಲಿ ವಾಟರ್ ಮಾರ್ಕ್ ಇರುವ ಛಾಪಾ ಕಾಗದಗಳನ್ನು ಮುದ್ರಿಸಲು ಉಪಯೋಗಿಸುವ ಒಟ್ಟು 233 ಖಾಲಿ ಹಾಳೆಗಳು, ವಿವಿಧ ಮುಖಬೆಲೆಯ 208 ಖಾಲಿ ಇ-ಸ್ಟ್ಯಾಂಪ್ ಪೇಪರ್ಸ್‍ಗಳನ್ನು ಪಂಚರ ಸಮಕ್ಷಮ ಮುಖೇನ ಶೋಧನೆ ಮಾಡಿ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಪರಿಚಯಸ್ಥರು: ಈ ಐದು ಮಂದಿ ಆರೋಪಿಗಳು ಪರಸ್ಪರ ಪರಿಚಯಸ್ಥರಾಗಿದ್ದು, ಎಲ್ಲರೂ ಸೇರಿ ವ್ಯವಸ್ಥಿತವಾಗಿ ಜÁಲವನ್ನು ಸೃಷ್ಟಿಸಿಕೊಂಡು ಅಕ್ರಮವಾಗಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಸರ್ಕಾರಿ ದಸ್ತಾವೇಜು ದಾಖಲಾತಿಗಳನ್ನು 2005ರಿಂದ 2020ಕ್ಕೆ ಹಿಂದಿನ ವರ್ಷಗಳ ನಖಲಿ ಛಾಪಾ ಕಾಗದಗಳನ್ನು ಅಸಲಿ ಎಂಬಂತೆ ಬಿಂಬಿಸಿ ತನಗೆ ಪರಿಚಯವಿರುವ ಸಾರ್ವಜನಿಕರಿಗೆ ಹಾಗೂ ಗ್ರಾಹಕರಿಗೆ 3 ಸಾವಿರದಿಂದ 5 ಸಾವಿರ ರೂ. ಹಾಗೂ ಅಪರಿಚಿತರಿಗೆ 5 ಸಾವಿರದಿಂದ 10 ಸಾವಿರದ ವರೆಗೆ ಮಾರಾಟ ಮಾಡಿ ಮೋಸ ಮಾಡುತ್ತಾ ಸರ್ಕಾರಕ್ಕೆ ಹಾನಿಯನ್ನುಂಟುಮಾಡಿ ಅಕ್ರಮ ಲಾಭ ಸಂಪಾದಿಸಿರುವುದು ವಿಚಾರಣೆಯಿಂದ ಬೆಳಕಿಗೆ ಬಂದಿದೆ.

ಆರೋಪಿಗಳ ವಿರುದ್ಧ ಈ ಹಿಂದೆ ಹಲಸೂರು ಹಾಗೂ ಎಸ್‍ಜೆ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಸಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಈ ತಂಡಗಳು ಯಶಸ್ವಿಯಾಗಿವೆ.

ಬಹುಮಾನ: ಅಧಿಕಾರಿ ಮತ್ತು ಸಿಬ್ಬದಿಯ ಕರ್ತವ್ಯವನ್ನು ಪ್ರಶಂಶಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು 50 ಸಾವಿರ ರೂ ನಗದು ಬಹುಮಾನವನ್ನು ಘೋಷಿಸಿದ್ದಾರೆ.

Facebook Comments