ಖೋಟಾನೋಟು ಮುದ್ರಿಸಿ ಚಲಾವಣೆಗೆ ಯತ್ನಿಸುತ್ತಿದ್ದ ಇಬ್ಬರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು,ಜ.16- ಖೋಟಾನೋಟು ಮುದ್ರಿಸಿ ಚಲಾವಣೆಗೆ ಯತ್ನಿಸುತ್ತಿದ್ದ ಪಾವಗಡದ ಇಬ್ಬರನ್ನು ಹೊಸಕೋಟೆ ಠಾಣೆ ಪೆÇಲೀಸರು ಬಂಧಿಸಿ 500 ರೂ. ಮುಖಬೆಲೆಯ 248 ಹಾಗೂ 100 ರೂ. ಮುಖಬೆಲೆಯ 17 ಖೋಟಾನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.  ಪಾವಗಡ ತಾಲ್ಲೂಕು ಹೊಸಕೋಟೆ ಗ್ರಾಮದ ಶಿವಕುಮಾರ್(32) ಮತ್ತು ಶ್ರೀನಿವಾಸ(50) ಬಂಧಿತ ಆರೋಪಿಗಳು.

ಪಾವಗಡ ತಾಲ್ಲೂಕು ವೈ.ಎನ್.ಹೊಸಕೋಟೆಯಲ್ಲಿ ಆರೋಪಿ ತನ್ನ ಮನೆ ಮೇಲಿರುವ ಕೊಠಡಿಯಲ್ಲಿ ಉಪಕರಣಗಳಿಂದ ಖೋಟಾನೋಟುಗಳನ್ನು ಮುದ್ರಿಸಿ ಮೋಸದಿಂದ ಸಾರ್ವಜನಿಕರಿಗೆ ಚಲಾವಣೆ ಮಾಡುವ ಸಲುವಾಗಿ ಮನೆಯಲ್ಲಿಟ್ಟುಕೊಂಡಿದ್ದನು.

ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮನೆ ಮೇಲೆ ದಾಳಿ ಮಾಡಿ 500 ರೂ. ಮುಖಬೆಲೆಯ 248 ಖೋಟಾನೋಟು, 200 ರೂ. ಮುಖಬೆಲೆಯ 10 ನೋಟು, 100 ರೂ. ಮುಖಬೆಲೆಯ 17 ನೋಟುಗಳು ಮತ್ತು ಪ್ರಿಂಟ್ ಮಾಡಲು ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಉದೇಶ್ ಅವರ ಮಾರ್ಗದರ್ಶನದಲ್ಲಿ ಉಪಾಧೀಕ್ಷಕ ಪ್ರವೀಣ್ ನೇತೃತ್ವದಲ್ಲಿ ತಿರುಮಣಿ ವೃತ್ತನಿರೀಕ್ಷಕರಾದ ವೆಂಕಟೇಶ್, ವೈ.ಎನ್.ಹೊಸಕೋಟೆ ಠಾಣೆಯ ಪಿಎಸ್‍ಐ ಶ್ರೀರಾಮಯ್ಯ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದು, ಈ ತಂಡವನ್ನು ಎಸ್ಪಿ ಡಾ.ಕೋನವಂಶಿಕೃಷ್ಣ ಅಭಿನಂದಿಸಿದ್ದಾರೆ.

Facebook Comments