ನಕಲಿ ಪಾಸ್ ಮಾರಾಟ ಮಾಡುತ್ತಿದ್ದ ಇಬ್ಬರು ಪೊಲೀಸರ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು : ಕರ್ಫ್ಯೂ ನಕಲಿ ಪಾಸ್ ಮಾರಾಟದಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊರೊನಾ ಆತಂಕದಲ್ಲಿ ದೇಶವೇ ಲಾಕ್ ಡೌನ್ ಮಾಡಲಾಗಿದ್ದು, ಅಗತ್ಯ ವಸ್ತುಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರ ಕ್ರಮಕೈಗೊಂಡಿದೆ ಇಂಥವರಿಗೆ ಪಾಸ್ ವಿತರಿಸಿದೆ.

ಆದರೆ ಇದೇ ಪಾಸುಗಳನ್ನು ನಕಲಿ ಮಾಡಿ ಮಾರುತ್ತಿದ್ದ ಆರೋಪಿಗಳು. ಇಲ್ಲಿನ ದಂಟರಮಕ್ಕಿ ಬಡಾವಣೆ ನಿವಾಸಿಗಳು. ಆರೋಪಿಗಳಿಂದ ಸ್ಕ್ಯಾನರ್, ಪ್ರಿಂಟರ್, ಕಂಪ್ಯೂಟರ್, ಮೊಬೈಲ್ ಹಾಗೂ ನಕಲಿ ಕರ್ಫ್ಯೂ ಪಾಸ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ತಲಾ 500 ರಂತೆ ನಕಲಿ ಪಾಸ್ ಗಳನ್ನು ಮಾರಾಟ ಮಾಡುತ್ತಿದ್ದರು. ನಕಲಿ ಪಾಸ್ ಅಂಟಿಸಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ಕಾರನ್ನು ವಶಕ್ಕೆ ಪಡೆದ ಪೊಲೀಸರು ಆರಂಭಿಕ ಹಂತದಲ್ಲಿಯೇ ದಂಧೆಯನ್ನು ಬೇಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin