ಸುಟ್ಟ ಶವ ಕಾರಿನಲ್ಲಿ ಎಎಪಿ ನಾಯಕನ ಪತ್ತೆ, ಭೀಕರವಾಗಿ ಕೊಲೆಮಾಡಿರುವ ಶಂಕೆ..!

ಈ ಸುದ್ದಿಯನ್ನು ಶೇರ್ ಮಾಡಿ

AAP--01

ಘಾಜಿಯಾಬಾದ್, ಅ.6 (ಪಿಟಿಐ)- ಅಮ್ ಆದ್ಮಿ ಪಾರ್ಟಿ(ಎಎಪಿ) ನಾಯಕ ನವೀನ್ ದಾಸ್(25) ಅವರ ಸುಟ್ಟು ಕರಕಲಾದ ಶವ ಕಾರಿನಲ್ಲಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್‍ನಿಂದ ವರದಿಯಾಗಿದೆ. ಇದು ಭೀಕರ ಕೊಲೆ ಎಂದು ಶಂಕಿಸಲಾಗಿದೆ. ದಾಸ್ ಅವರನ್ನು ದುಷ್ಕರ್ಮಿಗಳು ಕಾರಿನ ಸಮೇತ ಸುಟ್ಟು ಹಾಕಿ ಕೊಲ್ಲಲಾಗಿದೆ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಅದರೊಳಗೆ ನವೀನ್ ದಾಸ್ ಜೀವಂತ ದಹನವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಾಹಿಬಾಬಾದ್‍ನ ಲೋಣಿಗೆ ತೆರಳುವ ರಸ್ತೆಯಲ್ಲಿ ಭೋಪಿಯಾ ಬಳಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಕರಕಲಾದ ಕಾರು ಪತ್ತೆಯಾಗಿದೆ. ಶುಕ್ರವಾರ 2.30ರ ನಸುಕಿನಲ್ಲಿ ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ನವೀನ್ ದಾಸ್ ಅವರೇ ಕಾರನ್ನು ಚಾಲನೆ ಮಾಡುತ್ತಿದ್ದರು. ಸುಟ್ಟು ಹೋಗಿರುವ ವಾಹನದೊಳಗೆ ಇದ್ದ ಮೊಬೈಲ್‍ಫೋನ್‍ನನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊೀನ್ ಸುಸ್ಥಿತಿಯಲ್ಲಿದ್ದು, ಮುಂಜಾನೆ 4.30ರಲ್ಲಿ ವ್ಯಾಟ್ಸ್‍ಆಪ್ ಸಂದೇಶ ಇರುವುದು ಅದರಲ್ಲಿ ದಾಖಲಾಗಿದೆ. ದಾಸ್ ಅವರ ಕುಟುಂಬ ಇದು ಕೊಲೆ ಎಂದು ಆರೋಪಿಸಿದ್ದಾರೆ. ಕಾರಿನ ಕೀಲಿಕೈಗಳು ನಾಪತ್ತೆಯಾಗಿವೆ. ಎಎಪಿ ಮುಖಂಡರನ್ನು ದುಷ್ಕರ್ಮಿಗಳು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ಕಾರನ್ನು ಲಾಕ್ ಮಾಡಿ ನಂತರ ಬೆಂಕಿ ಹಚ್ಚಿ ಕೊಂದಿದ್ದಾರೆ ಎಂದು ದಾಸ್ ಕುಟುಂಬದವರು ಸಂಶಯ ವ್ಯಕ್ತಪಡಿಸಿದ್ದಾರೆ.

ಕಾರಿನ ಕೀಲಿ ಕೈಗಳು ನಾಪತ್ತೆಯಾಗಿರುವುದು ಸಹ ಕೊಲೆ ಶಂಕೆಗೆ ಪುಷ್ಟಿ ನೀಡಿದೆ. ದಾಸ್ ಬಳಿ ವಾಹನದ ಕೀ ಇದ್ದಿದ್ದರೆ ಅವರು ಪವರ್ ವಿಂಡೋಗಳನ್ನು ತೆಗೆದು ಪರಾಗುತ್ತಿದ್ದರು. ಆದರೆ ಅವರು ಲಾಕ್ ಮಾಡಿದ ಕಾರಿನ ಒಳಗೇ ದಹಿಸಿ ಹೋಗಿದ್ದಾರೆ. ಸಾಹೀಬಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ತೀವ್ರಗೊಂಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ನಗರ) ಶ್ಲೋಕ್ ಕುಮಾರ್ ತಿಳಿಸಿದ್ದಾರೆ.

Facebook Comments

Sri Raghav

Admin