ಟ್ಯಾಂಕರ್ ಡಿಕ್ಕಿ ; ಒಂದೇ ಕುಟುಂಬದ ಮೂವರ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

ಪಾಲ್ಗಾರ್,ಅ.20-ಸ್ಕೂಟರ್‍ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯಲ್ಲಿ ಸಂಭವಿಸಿದೆ. ಚಾಂದೀಪ್ ಸಮೀಪದ ವಿರಾರ್ ಗ್ರಾಮದಲ್ಲಿ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರಾದ 32 ವರ್ಷದ ಯೋಗೇಶ್ ಮಾಧವಿ, ಆತನ ತಾಯಿ ಸುನೀತಾ ಮತ್ತು ಒಂಬತ್ತು ವರ್ಷದ ಮಗಳು ವೇದಾ ಸಾವನ್ನಪ್ಪಿದ್ದಾರೆ.

ಟ್ಯಾಂಕರ್ ಚಾಲಕ ಹಿಂಬದಿಯಿಂದ ಸ್ಕೂಟರ್‍ಗೆ ಗುದ್ದಿ ಪರಾರಿಯಾದ ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಮೃತಪಟ್ಟರೆ ಒಂಬತ್ತು ವರ್ಷದ ವೇದಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ.

ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಸ್ಕೂಟರ್‍ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಟ್ಯಾಂಕರ್ ಚಾಲಕನನ್ನು ಪೊಲೀಸರು ಸಿನಿಮಿಯ ರೀತಿ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Facebook Comments