ಫ್ಯಾನ್ ಕಳ್ಳನಿಗೆ 2 ದಶಕಗಳ ನಂತರ ಶಿಕ್ಷೆ ವಿಧಿಸಿದ ಕೋರ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಇಂದೋರ್,ಫೆ.5- ಎರಡು ದಶಕಗಳ ಹಿಂದೆ ಅಂಗಡಿಯೊಂದರಲ್ಲಿ ಫ್ಯಾನ್ ಕದ್ದಿದ್ದ ವ್ಯಕ್ತಿಗೆ ಇಲ್ಲಿನ ಜೆಎಂಎಫ್‍ಸಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿದೆ.ಶಂಕರ್(55) ಶಿಕ್ಷೆಗೊಳಗಾದ ಫ್ಯಾನ್ ಕಳ್ಳ. 1998, ಮಾರ್ಚ್ 23ರಂದು ಈತ ಸ್ಥಳೀಯ ಅಂಗಡಿಯೊಂದರಲ್ಲಿ 500 ಬೆಲೆಯ ಎರಡು ಫ್ಯಾನ್‍ಗಳನ್ನು ಕದ್ದಿದ್ದು.

ಈ ವೇಳೆ ಅಂಗಡಿಯ ಕಾವಲುಗಾರನಿಗೆ ರೆಡ್‍ಹ್ಯಾಂಡೆಡಾಗಿ ಸಿಕ್ಕಿಬಿದ್ದಿದ್ದು. ಅಂಗಡಿ ಮಾಲೀಕರು ಈತನ ವಿರುದ್ಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದಲ್ಲಿ ಐದು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಎರಡು ದಶಕಗಳ ಹಿಂದಿನ ಅಪರಾಧಕ್ಕೆ ಇದೀಗ ಮ್ಯಾಜಿಸ್ಟ್ರೇಟ್ ಭೂಪೇಂದ್ರ ಆರ್ಯ ಅವರು ಶಂಕರ್‍ಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಸಾವಿರ ರೂ. ದಂಡ ವಿಧಿಸಿದ್ದಾರೆ. ಜಾಮೀನಿನಿಂದ ಹೊರಬಂದಿದ್ದ ಈತ ತಲೆಮರೆಸಿಕೊಂಡಿದ್ದರಿಂದ ಈತನಿಗೆ ಶಿಕ್ಷೆ ನೀಡುವಲ್ಲಿ ವಿಳಂಬವಾಗಿತ್ತು ಎಂದು ಸಹಾಯಕ ಜಿಲ್ಲಾ ಸಾರ್ವಜನಿಕ ಅಭಿಯೋಜಕ ಅಧಿಕಾರಿ(ಎಡಿಪಿಒ) ಸಂಜೀವ್ ಪಾಂಡೆ ತಿಳಿಸಿದ್ದಾರೆ.

Facebook Comments