ಹೆಬ್ಬಾವನ್ನು ಕೊಂದ ರೈತನನ್ನು ಬಂಧಿಸಿದ ಪೊಲೀಸರು

ಈ ಸುದ್ದಿಯನ್ನು ಶೇರ್ ಮಾಡಿ

ಬಳ್ಳಾರಿ, ನ.7-ತಮ್ಮ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳೆಯನ್ನು ಕಟಾವು ಮಾಡುವಾಗ ಹೆಬ್ಬಾವು ಯಂತ್ರಕ್ಕೆ ಸಿಲುಕಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ರೈತನನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಶಿರಗುಪ್ಪ ತಾಲ್ಲೂಕಿನ ದೇಶನೂರು ಗ್ರಾಮದಲ್ಲಿ ರೈತ ದುರ್ಗಪ್ಪ ಎಂಬುವವರು ತಮ್ಮ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಕಟಾವು ಮಾಡಲು ನಿನ್ನೆ ಬಳ್ಳಾರಿಯಿಂದ ಯಂತ್ರ ತರಿಸಿದ್ದರು.

ಅದೇಗೋ ಏನೋ ಹೆಬ್ಬಾವೊಂದು ಭತ್ತದ ಬೆಳೆ ನಡುವೆ ಅಡಗಿತ್ತು. ಅದನ್ನು ಅರಿಯದೆ ಯಂತ್ರದಿಂದ ಕಟಾವು ಮಾಡುವಾಗ ಯಂತ್ರಕ್ಕೆ ಹಾವು ಸಿಲುಕಿ ಸಾವನ್ನಪ್ಪಿದೆ. ಸಂಜೆ ಈ ವಿಷಯ ಪೊಲೀಸರಿಗೆ ತಿಳಿದಿದ್ದು, ಸ್ಥಳಕ್ಕೆ ಬಂದು ವನ್ಯಜೀವಿ ಹತ್ಯೆ ಆರೋಪ ಹೊರಿಸಿ ರೈತನನ್ನು ಬಂಧಿಸಿದ್ದಾರೆ.

ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ತಿಳಿಯದೆ ನಡೆದಿರುವ ಘಟನೆಯಾಗಿದ್ದು, ಸುಮ್ಮನೆ ದುರ್ಗಪ್ಪ ಅವರನ್ನು ಬಂಧಿಸಿ ಶಿಕ್ಷಿಸುವುದು ಸರಿಯಲ್ಲ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

Facebook Comments