‘ನಮ್ಮ ಅಪ್ಪನ ಕೊನೆ ಅಸೆ ಈಡೇರಿಸಿ ಸ್ವಾಮಿ’ : ಸಿಎಂಗೆ ಮೃತ ರೈತನ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಕೆ.ಆರ್.ಪೇಟೆ, ಜೂ. 18- ಅಪ್ಪನ ಆಸೆಯಂತೆ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಮೂಲಕ ರೈತರ ಸಂಕಷ್ಟ ನೀಗಿಸುವಂತೆ ಆತ್ಮಹತ್ಯೆಗೆ ಶರಣಾದ ರೈತ ಸುರೇಶ್ ಅವರ ಪುತ್ರಿ ಸುವರ್ಣ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡಿದ್ದಾರೆ.

ನಮ್ಮ ತಂದೆಯವರು ಯಾವಾಗಲು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಗ್ಗೆ ಮಾತಾಡುತ್ತಿದ್ದರು. ಅವರ ಆಸೆಯನ್ನು ಈಡೇರಿಸಿ ಎಂದು ಅಂಗಲಾಚಿದ ಅವರು, ಸಂತೆಬಾಚನಹಳ್ಳಿಯ ಕೆರೆಗಳಿಗೆ ನೀರು ತುಂಬಿಸಿ, ರೈತರಿಗೆ ನೆರವು ಕಲ್ಪಿಸಬೇಕು ಆ ಮೂಲಕ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು ಎಂದಿರುವ ಅವರು, ತಮ್ಮ ಶಿಕ್ಷಣ ಮುಂದುವರೆಸಲು ಸಹಾಯ ಮಾಡುವಂತೆಯೂ ಎಂದು ಕೋರಿದ್ದಾರೆ.

ಕುಟುಂಬದ ಜವಾಬ್ದಾರಿ ನಿರ್ವಹಿಸಬೇಕಾದ ಅಣ್ಣನಿಗೆ ಕೆಲಸ ನೀಡಿ ಎಂದು ಮನವಿ ಮಾಡಿದರು. ಪುತ್ರ ಚಂದ್ರಶೇಖರ್ ಮಾತನಾಡಿ, ಅಪ್ಪ ನಮ್ಮ ಹತ್ತಿರ ಸಾಲದ ವಿಚಾರ ಏನೂ ಹೇಳಿರಲಿಲ್ಲ, ಅವರು ಹೇಳಿದ್ದರೆ ಓದುವುದನ್ನು ಬಿಟ್ಟು ಕೆಲಸ ಮಾಡುತ್ತಿದೆ ಎಂದರು.

ಕೆ.ಆರ್.ಪೇಟೆಯ ಅಘಲಯ ಗ್ರಾಮದಲ್ಲಿ ಸೆಲ್ಫಿ ವಿಡಿಯೋದಲ್ಲಿ ಗ್ರಾಮದ ಕೆರೆಗಳು ಬತ್ತಿ ಹೋಗಿರುವುದನ್ನು ನೋಡಲಾಗದೆ ಮನನೊಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದ ರೈತ ಸುರೇಶ್‍ನ ಮಕ್ಕಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Facebook Comments