ಎಲ್ಲರನ್ನೂ ,ಎಲ್ಲವನ್ನೂ ಸ್ವೀಕರಿಸುವವಳು ಅವಳೊಬ್ಬಳೇ, ಭೂಮಿ ತಾಯಿ..

ಈ ಸುದ್ದಿಯನ್ನು ಶೇರ್ ಮಾಡಿ

ಸಂಸ್ಕøತದಲ್ಲಿ ಒಂದು ಮಾತಿದೆ.ಕೃಷಿತೋ ನಾಸ್ತಿ ದುರ್ಭಿಕ್ಷಂ(ವ್ಯವಸಾಯದಿಂದ ಬರಗಾಲವಿಲ್ಲ) ಇದು ಅಕ್ಷರಶಃ ಸತ್ಯ.ಪ್ರಪಂಚದಲ್ಲೇ ಜನಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ಕೃಷಿ ಪ್ರಧಾನ ರಾಷ್ಟ್ರ.ಒಂದು ಕಾಲದಲ್ಲಿ ಶೇ. 65ರಷ್ಟು ಜನ ಕೃಷಿಯನ್ನೇ ಅವಲಂಬಿಸಿದ್ದರು. ಕೈಗಾರಿಕಾ ತಂತ್ರಜ್ಞಾನ ಬೆಳೆದಂತೆ ನಗರ ಪ್ರದೇಶಗಳಿಗೆ ವಲಸೆ ಹೋದ ಜನರು ಮನೆ ದೇವರಿಗಿಂತ ಹೆಚ್ಚಾಗಿ ಭೂಮಿತಾಯಿಯನ್ನೇ ನಂಬಿಕೊಂಡು ತಲೆತಲಾಂತರದಿಂದ ಮುಂದುವರಿಸಿಕೊಂಡು ಬಂದಿದ್ದ ವ್ಯವಸಾಯವನ್ನೇ ಮರೆತು ಬಿಟ್ಟರು.

ಹಿರಿಯರು ವಯೋ ಸಹಜ ಮುಪ್ಪಿನಿಂದ ನಿಶ್ಯಕ್ತರಾಗಿ ಹಾಸಿಗೆ ಸೇರಿದರು. ರಾಗಿ, ಜೋಳ, ಸಜ್ಜೆ , ಭತ್ತ ಬೆಳೆಯುತ್ತಿದ್ದ ಜಮೀನು ಬೀಳಾಗಿ ಬಿದ್ದಿತು. ಓಡಾಡಲು ಕಾರು, ಚಂದ ಕಾಣಲು ಬ್ರಾಂಡೆಡ್ ಜೀನ್ಸ್ ಟೀ ಶರ್ಟ್, ಘಮ ಘಮ ಪರಿಮಳ ಬೀರುವ ಪಾರಿನ್ ಸೆಂಟಿನ ಅಮಲಿನಲ್ಲಿ ಪಟ್ಟಣದ ಜೀವನಕ್ಕೆ ದಾಸರಾಗಿದ್ದ ಯುವಕರಿಗೆ ಹುಟ್ಟಿ ಬೆಳೆದ ಮನೆಯನ್ನು, ಹಳ್ಳಿಯನ್ನು ನೆನಪು ಮಾಡಿಕೊಟ್ಟಿದ್ದು ಮಾತ್ರ ಕೊರೋನ. ಜಗತ್ತನ್ನೇ ಹೈರಾಣು ಮಾಡಿರುವ ಮಹಾ ಮಾರಿ ಕೊರೊನಾ ಕಳೆದ ವರ್ಷ ಪೆಬ್ರವರಿ ತಿಂಗಳಿನಲ್ಲಿ ಭಾರತಕ್ಕೆ ಕಾಲಿಟ್ಟಿತು.

ಆಗ ಕೊರೊನಾಗೆ ಬೆಚ್ಚಿ ಬೆದರಿದ ಬೆಂಗಳೂರಿನ ನಿವಾಸಿಗಳು ಸೇರಿದಂತೆ ದೇಶದ ದೊಡ್ಡ ದೊಡ್ಡ ಮಹಾನಗರಗಳಲ್ಲಿ ಜೀವನ ನಡೆಸುತ್ತಿದ್ದ ಜನರು ಪ್ರಾಣ ಭಯದಿಂದ ತತ್ತರಿಸಿ ರಾತ್ರೋರಾತ್ರಿ ಜಾಗ ಖಾಲಿ ಮಾಡಿ ಅವರವರ ಹಳ್ಳಿಗಳಿಗೆ ಸೇರಿದರು. ಪಿಜ್ಜ ಬರ್ಗರ್ ಮರೆತು ಮು ಬಸ್ಸಾರಿಗೆ ಹೊಂದಿಕೊಂಡರು ಆಗಲೇ ನೋಡಿ ಅದೆಷ್ಟೋ ಹಳ್ಳಿಗಳಿಗೆ ಬದಲಾವಣೆಯ ಗಾಳಿ ಬೀಸಿತು, ಬಿದ್ದು ಹೋಗಿದ್ದ ಅದೆಷ್ಟೋ ಮನೆಗಳು ಹೊಸ ಮನೆಗಳಾಗಿ ರೂಪ ತಾಳಿದವು.ಪಾಳು ಬಿದ್ದಿದ್ದ ಜಮೀನು ಹಚ್ಚ ಹಸಿರಾಗಿ ಕಂಗೊಳಿಸುವ ಕಾಲ ಕೂಡಿ ಬಂದಿತು.ಮಾಸ್ಟರ್‍ಡಿಗ್ರಿ ಓದಿಕೊಂಡಿರುವ ನಾವುಗಳು ಹೊಲದಲ್ಲಿ ದುಡಿಯಬೇಕ..? ಎಂಬ ಅಹಂ ನಲ್ಲಿದ್ದ ಯುವಕರು ಕೊರೊನಾ ಪರಿಣಾಮದಿಂದ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾದಾಗ ಜಮೀನಿನ ಬಗ್ಗೆ ಆಸಕ್ತಿ ವಹಿಸಿ ವ್ಯವಸಾಯದತ್ತ ಮುಖ ಮಾಡಿದರು. ಇದೊಂದು ಒಳ್ಳೆಯ ಬೆಳವಣಿಗೆ.

1998 ರಲ್ಲಿ, ಕೊಡಾಕ್ನಲ್ಲಿ 1,70,000 ಉದ್ಯೋಗಿಗಳು ಕೆಲಸ ಮಾಡುತ್ತಿದ್ದರು ಮತ್ತು ಅವರು ವಿಶ್ವದ 85% ಫೋಟೋ ಫಿಲಂಗಳನ್ನು ಮಾರಾಟ ಮಾಡುತ್ತಿದ್ದರು. ಕೆಲವೇ ವರ್ಷಗಳಲ್ಲಿ, ಡಿಜಿಟಲ್ ಫೋಟೋಗ್ರಫಿ ಅವರನ್ನು ಮಾರುಕಟ್ಟೆಯಿಂದ ಹೊರಹಾಕಿತು.ಕೊಡಾಕ್ ದಿವಾಳಿಯಾಯಿತು ಮತ್ತು ಅದರ ಎಲ್ಲಾ ಉದ್ಯೋಗಿಗಳು ರಸ್ತೆಗೆ ಬಂದರು.

ಎಚ್‍ಎಂಟಿ (ವಾಚ್) ,ಬಜಾಜ್ (ಸ್ಕೂಟರ್), ಡೈನೋರಾ (ಟಿವಿ), ಮರ್ಫಿ (ರೇಡಿಯೋ), ನೋಕಿಯಾ (ಮೊಬೈಲï), ರಾಜ್ದೂತ್ (ಬೈಕ್), ಅಂಬಾಸಿಡರ್ (ಕಾರು), ದಿನೇಶ್ (ಬಟ್ಟೆ) ಈ ಎಲ್ಲದರ ಗುಣಮಟ್ಟದಲ್ಲಿ ಯಾವುದೇ ಕೊರತೆ ಇರಲಿಲ್ಲ, ಆದರೂ ಅವು ಮಾರುಕಟ್ಟೆಯಿಂದ ಹೊರಬಿದ್ದವು !! ಕಾರಣ ??? ಕಾಲಕ್ಕೆ ತಕ್ಕಂತೆ ಅವು ಬದಲಾಗಲಿಲ್ಲ,ಯಾವುದೇ ಕ್ಷೇತ್ರವಿರಲಿ ಅಲ್ಲಿ ಬದಲಾವಣೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ.

ಯಾಕೆಂದರೆ ಬದಲಾವಣೆ ಜಗದ ನಿಯಮ, ಹಳೇ ಬೇರು ಹೊಸ ಚಿಗುರು ಇದು ಸೃಷ್ಟಿಯ ಧರ್ಮ. ಆದ್ದರಿಂದ ಮುಂಬರುವ 10 ವರ್ಷಗಳಲ್ಲಿ ಜಗತ್ತು ಸಂಪೂರ್ಣವಾಗಿ ಬದಲಾಗುತ್ತದೆ ಮತ್ತು ಇಂದು ನಡೆಯುತ್ತಿರುವ ಶೇ.70ರಷ್ಟು ಕೈಗಾರಿಕೆಗಳು ಸ್ಥಗಿತಗೊಳ್ಳುತ್ತವೆ. ಇನ್ನೇನಿದ್ದರು ಡಿಜಿಟಲ್ ಮಾರುಕಟ್ಟೆ ಉದಾಹರಣೆಗೆ, ಊಬರ್ ಕೇವಲ ಸಾಫ್ಟೆವೇರ್ ಮಾತ್ರ, ತನ್ನದೇ ಆದ ಒಂದು ಸ್ವಂತ ಕಾರು ಹೊಂದಿಲ್ಲ ಆದರು ಇಂದು ವಿಶ್ವದ ಅತಿದೊಡ್ಡ ಟ್ಯಾಕ್ಸಿ ಕಂಪನಿ.

ಏರ್ಬನ್ಬಿ ತಮ್ಮದೇ ಆದ ಹೋಟೆಲ್ ಹೊಂದಿಲ್ಲದಿದ್ದರೂ ವಿಶ್ವದ ಅತಿದೊಡ್ಡ ಹೋಟೆಲ್ ಕಂಪನಿಯಾಗಿದೆ.ಹೀಗೆ Paytm, ola cabs, oyo ಕೊಠಡಿಗಳಂತಹ ಅನೇಕ ಉದಾಹರಣೆಗಳಿವೆ.ಇನ್ನು ವಿಶ್ವದ ದೊಡ್ಡಣ್ಣ ಅಮೇರಿಕದಲ್ಲಿ ವಕೀಲರಿಗೆ ಈಗ ಯಾವುದೇ ಕೆಲಸ ಉಳಿದಿಲ್ಲ, ಏಕೆಂದರೆ ಐಬಿಎಂ ವ್ಯಾಟ್ಸನ್ ಸಾಫ್ಟೆವೇರ್ ಒಂದು ಕ್ಷಣದಲ್ಲಿ ಉತ್ತಮ ಕಾನೂನು ಸಲಹೆಯನ್ನು ನೀಡುತ್ತದೆ. ಮುಂದಿನ 10 ವರ್ಷಗಳಲ್ಲಿ, ಶೇ.90ರಷ್ಟು ಯುಎಸ್ ವಕೀಲರು ನಿರುದ್ಯೋಗಿಗಳಾಗುತ್ತಾರೆ ಎಂದು ಅಂದಾಜಿಸಲಾಗಿದೆ . ಇನ್ನುಳಿದ ಶೇಕಡಾ ಹತ್ತರಷ್ಟು ವಕೀಲರು ಸೂಪರ್ ಸ್ಪೆಷಲಿಸ್ಟ್ ಆಗುತ್ತಾರೆ.

ವ್ಯಾಟ್ಸನ್ ಹೆಸರಿನ ಸಾಫ್ಟ್‍ವೇರ್ ಮಾನವರಿಗಿಂತ 4 ಪಟ್ಟು ಹೆಚ್ಚು ನಿಖರವಾಗಿ ಕ್ಯಾನ್ಸರ್ ರೋಗ ನಿರ್ಣಯವನ್ನು ಮಾಡುತ್ತದೆ. 2030 ರ ವೇಳೆಗೆ ಕಂಪ್ಯೂಟರ್‍ಗಳು ಮನುಷ್ಯರಿಗಿಂತ ಹೆಚ್ಚು ನಿಖರವಾಗಿ ಕಾರ್ಯ ನಿರ್ವಹಿಸುತ್ತವೆ. ಮುಂದಿನ 10 ವರ್ಷಗಳಲ್ಲಿ, ಶೇ.90ರಷ್ಟು ಪೆಟ್ರೋಲ್, ಡೀಸೆಲ್ ಕಾರುಗಳು ಪ್ರಪಂಚದಾದ್ಯಂತದ ರಸ್ತೆಗಳಿಂದ ಕಣ್ಮರೆಯಾಗುತ್ತವೆ ಉಳಿದಿರುವುವು ಎಲೆಕ್ಟ್ರಿಕ್ ಕಾರುಗಳು ಅಥವಾ ಹೈಬ್ರಿಡ್ ಆಗಿರುತ್ತವೆ ರಸ್ತೆಗಳು ಖಾಲಿಯಾಗುತ್ತವೆ, ಪೆಟ್ರೋಲ್ ಬಳಕೆ ಶೇ.90 ರಷ್ಟು ಕಡಿಮೆಯಾಗುತ್ತದೆ, ಎಲ್ಲಾ ಅರಬ್ ರಾಷ್ಟ್ರಗಳು ದಿವಾಳಿಯಾಗುತ್ತವೆ.

ನೀವು ಉಬರ್‍ನಂತಹ ಸಾಫ್ಟೆವೇರ್‍ನಿಂದ ಕಾರನ್ನು ಪಡೆಯುತ್ತೀರಿ ಮತ್ತು ಕೆಲವೇ ಕ್ಷಣಗಳಲ್ಲಿ ಚಾಲಕರಹಿತ ಕಾರು ನಿಮ್ಮ ಬಾಗಿಲಲ್ಲಿ ನಿಲ್ಲುತ್ತದೆ. ನೀವು ಅದನ್ನು ಯಾರೊಂದಿಗಾದರೂ ಹಂಚಿಕೊಂಡರೆ, ಆ ಪ್ರಯಾಣ ನಿಮ್ಮ ಬೈಕ್‍ಗಿಂತ ಅಗ್ಗವಾಗಿರುತ್ತದೆ. ಕಾರುಗಳು ಚಾಲಕರಹಿತವಾಗಿರುವುದರಿಂದ ಶೇ.99ರಷ್ಟು ಅಪಘಾತಗಳು ನಿಂತುಹೋಗುತ್ತವೆ. ಇದು ಕಾರ್ ವಿಮೆ ಎಂಬ ವ್ಯವಹಾರವನ್ನು ನಿಲ್ಲಿಸುತ್ತದೆ.

ಚಾಲಕನಿಗೆ ಯಾವುದೇ ಉದ್ಯೋಗ ಇರುವುದಿಲ್ಲ. ನಗರಗಳು ಮತ್ತು ರಸ್ತೆಗಳಿಂದ ಶೇ.90ರಷ್ಟು ಕಾರುಗಳು ಕಣ್ಮರೆಯಾದಾಗ, ಟ್ರಾಫಿಕ್ ಮತ್ತು ಪಾರ್ಕಿಂಗ್‍ನಂತಹ ಸಮಸ್ಯೆಗಳು ಸ್ವಯಂಚಾಲಿತವಾಗಿ ಕಣ್ಮರೆಯಾಗುತ್ತವೆ. ಏಕೆಂದರೆ ಒಂದು ಕಾರು ಇಂದು 20 ಕಾರುಗಳಿಗೆ ಸಮವಾಗಿರುತ್ತದೆ. 5 ಅಥವಾ 10 ವರ್ಷಗಳ ಹಿಂದೆ ಪಿಸಿಒ ಇಲ್ಲದಂತಹ ಸ್ಥಳ ಇರಲಿಲ್ಲ. ನಂತರ ಎಲ್ಲರ ಜೇಬಿನಲ್ಲಿ ಮೊಬೈಲ್ ಫೋನ್ ಬಂದಾಗ ನಂತರ ಪಿಸಿಒ ಸ್ಥಗಿತಗೊಳ್ಳಲು ಪ್ರಾರಂಭಿಸಿತು. ನಂತರ ಆ ಎಲ್ಲಾ ಪಿಸಿಒ ಜನರು ಫೋನ್ ರೀಚಾರ್ಜ್ ಮಾರಾಟ ಮಾಡಲು ಪ್ರಾರಂಭಿಸಿದರು. ಈಗ ಆನ್‍ಲೈನ್‍ನಲ್ಲಿ ರೀಚಾರ್ಜ್ ಕೂಡ ಪ್ರಾರಂಭಿಸಲಾಗಿದೆ. ಅಂದರೆ ಈಗೇನಿದ್ದರು ಮಷಿನ್ ಮತ್ತು ಕಂಪ್ಯೂಟರ್‍ಗಳದ್ದೇ ಕಾರು ಬಾರು ಇದರ ಜೊತೆಗೆ ರೋಬಾಟ್‍ಗಳ ಆವಿಷ್ಕಾರ ಬೇರೆ ನಡೆಯುತ್ತಿದೆ.

ಈಗಾಗಲೇ ವಿದೇಶದಲ್ಲಿ ರೋಬಾಟ್‍ಗಳು ಮನುಷ್ಯನ ಜಾಗದಲ್ಲಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ ಅತಿ ಶೀಘ್ರದಲ್ಲಿ ಭಾರತಕ್ಕು ಇವುಗಳ ಆಗಮನ ಆಗಲಿದೆ ಆಗ ಮನುಷ್ಯನ ಉದ್ಯೋಗಕ್ಕೆ ದೊಡ್ಡ ಕತ್ತರಿ ಬೀಳುವುದಂತು ಸುಳ್ಳಲ್ಲ. ಆಗ ಜನ ನಿರುದ್ಯೋಗದಿಂದ ತತ್ತರಿಸುವುದಂತು ಸುಳಲ್ಲ, ಅವರಿಗೆ ಕೊನೆಯಲ್ಲಿ ಉಳಿಯುವುದೊಂದೆ ದಾರಿ, ಅದೇ ಕೃಷಿ.

ಆದ್ದರಿಂದ ಬೇರೆ ದಾರಿ ಇಲ್ಲದೇ ಭೂಮಿ ತಾಯಿಯ ಬಳಿ ಬರುತ್ತಾರೆ ಯಾಕೆಂದರೆ ಎಲ್ಲರನ್ನೂ ಎಲ್ಲವನ್ನೂ ಯಾವುದೇ ಭೇದ-ಭಾವವಿಲ್ಲದೇ ಸ್ವಿಕರಿಸು ವವಳು ಅವಳೊಬ್ಬಳೇ. ಆದ್ದರಿಂದ ಭೂಮಿ ತಾಯಿಯ ಮಕ್ಕಳಾದ ರೈತರನ್ನು ಕಡೆಗಣಿಸ ಬೇಡಿ, ಅವರನ್ನು ಗೌರವದಿಂದ ಕಾಣಿ.
#ಮಹಾಂತೇಶ್ ಬ್ರಹ್ಮ

Facebook Comments