ಮಳೆಯಿಂದಾಗಿ ಜಮೀನಿನಲ್ಲೇ ರಾಗಿ ಮೊಳಕೆ, ರೈತರಿಗೆ ಸಂಕಷ್ಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.2- ವಾಯುಭಾರ ಕುಸಿತದಿಂದಾಗಿ ರಾಜ್ಯದ ವಿವಿಧೆಡೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಷ್ಟಪಟ್ಟು ಬೆಳೆದ ರಾಗಿ ಬೆಳೆ ರೈತರ ಕೈಗೆ ಬರದಂತಾಗಿದೆ. ತುಮಕೂರು , ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರಾಗಿ ಬೆಳೆ ಕಟಾವು ಮಾಡಲಾಗಿದ್ದು, ಇನ್ನು ಬೆಳೆ ಜಮೀನಿನಲ್ಲೇ ಇರುವುದರಿಂದ ಮಳೆ ಬೀಳುತ್ತಿದ್ದು , ರಾಗಿ ತೆನೆ ನೆನೆಯುತ್ತಿವೆ. ಕೂಲಿ ಕಾರ್ಮಿಕರ ಕೊರತೆ, ಮಳೆಯ ಕಣ್ಣಾ ಮುಚ್ಚಾಲೆ ಯಿಂದ ರೈತರು ಕೃಷಿಯನ್ನೇ ತೊರೆಯುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲಿ ಕೆಲ ರೈತರು ಕಸುಬನ್ನು ಬಿಡಬಾರದೆಂದು ವ್ಯವಸಾಯ ಮಾಡುತ್ತಿದ್ದಾರೆ. ಈ ಬಾರಿ ರಾಗಿ ಬೆಳೆ ತುಂಬಾ ಚೆನ್ನಾಗಿ ಬಂದಿದೆ. ಆದರೆ ಒಕ್ಕಣೆ ಸಮಯದಲ್ಲೇ ಮಳೆ ಬರುತ್ತಿದ್ದು , ಜಮೀನಿನಲ್ಲೇ ಫಸಲು ನೆನೆಯುತ್ತಿದೆ. ಇದರಿಂದ ರಾಗಿ ಕಪ್ಪಾಗುವ ಸಾಧ್ಯತೆ ಇದ್ದು , ರಾಗಿ ಮೇವು ಕೂಡ ಹಾಳಾಗುತ್ತಿದೆ.

ಮಳೆಯಲ್ಲಿ ನೆಂದ ಮೇವನ್ನು ಜಾನುವಾರು ಗಳು ತಿನ್ನುವುದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿ ದ್ದಾರೆ. ರಾಗಿ ಬೆಳೆ ಕಟಾವಿಗೆ ಅತ್ಯಾಧುನಿಕ ಯಂತ್ರಗಳು ಬಂದಿದ್ದು , ಇದು ದುಬಾರಿ ವೆಚ್ಚವಾಗಿರುವುದರಿಂದ ಕೆಲ ರೈತರು ಮಾತ್ರ ಯಂತ್ರದಿಂದ ಬೆಳೆಯನ್ನು ಕಟಾವು ಮಾಡಿಸಿದ್ದಾರೆ. ಇನ್ನು ಕೆಲ ರೈತರು ಕೂಲಿಯಾಳುಗಳ ನೆರವಿನಿಂದ ಬೆಳೆಯನ್ನು ಕಟಾವು ಮಾಡಿಸಿದ್ದಾರೆ. ಆದರೆ ಬಣವೆ ಹಾಕುವ ಮುನ್ನವೇ ಮಳೆ ಬಂ

Facebook Comments