ಅನ್ನದಾತನಿಗೆ ಲಾಸ್, ವ್ಯಾಪಾರಿಗಳಿಗೆ ಲಾಭ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು.ಮೇ25. ಗಾಳಿ, ಮಳೆ, ಬಿಸಿಲು ಲೆಕ್ಕಿಸದೆ ಕಷ್ಟ ಪಟ್ಟು ಬೆಳೆದ ತರಕಾರಿ, ಹೂ,  ಹಣ್ಣು ಲಾಕ್‍ಡೌನ್ ನಿಂದ ಬೆಲೆ ಇಲ್ಲದೆ ಜಮೀನುಗಳಲ್ಲೇ ನಾಶವಾಗುತ್ತಿದ್ದರೆ ನಗರದಲ್ಲಿ ಮಾತ್ರ ಚಿಲ್ಲರೆ ವ್ಯಾಪಾರಿಗಳು ದುಪ್ಪಟ್ಟು ಬೆಲೆಗೆ ಮಾರುತ್ತಿದ್ದಾರೆ. ಅನ್ನದಾತರಿಗೆ ಮಾತ್ರ ಸಿಗದ ಬೆಲೆ ಮಧ್ಯವರ್ತಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಸಿಗುತ್ತಿದೆ. ಬೆಳೆದ ಬೆಳೆಗೆ ಬೆಲೆ ಸಿಗುತ್ತಿಲ್ಲ ಎಂದು ಕೆಲ ರೈತರು ರಸ್ತೆ ಬದಿ ತರಕಾರಿಗಳನ್ನು ಸುರಿಯುತ್ತಿದ್ದಾರೆ, ಕೆಲ ರೈತರು ಬೆಳೆ ಕಟಾವು ಮಾಡದೆ ಹಾಗೇ ಜಮೀನಿನಲ್ಲಿ ಬಿಟ್ಟಿದ್ದಾರೆ ಇನ್ನೂ ಕೆಲವರು ಯಾರಾದರೂ ತಿನ್ನಲಿ ಎಂದು ಉಚಿತವಾಗಿ ಹಂಚುತ್ತಿದ್ದಾರೆ ಆದರೆ ಬೆಂಗಳೂರಲ್ಲಿ ಮಾತ್ರ ಚಿಲ್ಲರೆ ವ್ಯಾಪಾರಿಗಳು ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದ್ದಾರೆ.

ಹೆಗಿದ್ದರೂ ಲಾಕ್‍ಡೌನ್ ಇದೆ ಎಷ್ಟೆ ಬೆಲೆ ಹೆಳಿದರೂ ಗ್ರಾಹಕರು ಕೊಂಡು ಕೋಳುತ್ತಾರೆ ಯಾಕೆಂದರೆ ಸಮಯವಿಲ್ಲ ನಾಲ್ಕು ಗಂಟೆ ಸಮಯದಲ್ಲಿ ವ್ಯಾಪಾರ ಮಾಡಿಕೋಳ್ಳಬೆಕೆಂದು ಚಿಲ್ಲರೆ ವ್ಯಾಪಾರಿಗಳು ಅಧಿಕ ಬೆಲೆಗೆ ತರಕಾರಿ ಮಾರಾಟ ಮಾಡುತ್ತಿದ್ದಾರೆ.

ಅದೇನೂ ಗಾದೆ ಹೆಳ್ತಾರಲ್ಲ ಹೇಳೊನಿಗೆ ಎಂಟಾಣಿ ಕೆಲ್ಸ ಮಾಡೋನಿಗೆ ನಾಲ್ಕಾಣಿ ಎಂಬಾತಾಗಿದೆ ಬೆವರು ಹರಿಸಿ ಬೆಳೆದ ರೈತನಿಗೆ ಮಾತ್ರ ಚಿಲ್ಲರೆ ಮಧ್ಯವರ್ತಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ಬಂಧ ಎಂಬತಾಗಿದೆ. ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರಲು ವಾಹನ ಸೌಲಭ್ಯವಿಲ್ಲ ತಂದ್ರೂ ಬೆಲೆ ಇಲ್ಲ ಖರ್ಚೂ ಕೂಡ ಹುಟ್ಟೋದಿಲ್ಲ ಹಾಗಾಗಿ ರೈತರು ಜಮೀನುಗಳಲ್ಲೆ ಫಸಲನ್ನು ಬಿಡುತ್ತಿದ್ದಾರೆ ಅದೂ ಅಲ್ಲದೆ ಬೆಳಗ್ಗೆ ಅಷ್ಟೆ ಮಾರುಕಟ್ಟೆ ಇರೋದೂ ಸಂಜೆ ಮಾರುಕಟ್ಟೆಗಳು ಇಲ್ಲದೆ ಇರುವುದರಿಂದ ರೈತರಿಗೆ ಬಹಳ ತೊಂದರೆ ಯಾಗುತ್ತಿದೆ ಇದರ ಲಾಭ ಮಾತ್ರ ಮಧ್ಯವರ್ತಿಗಳು ಹಾಗೂ ಚಿಲ್ಲರೆ ವ್ಯಾಪಾರಿಗಳ ಜೇಬು ತುಂಬುತ್ತಿದೆ. ರೈತರ ಸಂಕಷ್ಟ ಅರಿತ ಕೆಲ ಸಿನಿಮಾ ನಟರು, ಜನಪ್ರತಿನಿಧಿಗಳು. ಧಾನಿಗಳು ರೈತರಿಂದ ಕೆಲ ಫಸಲನ್ನು ಖರಿದಿಸಿ ಸಂಕಷ್ಟಕ್ಕೆ ಸಿಲುಕಿದವರಿಗೆ ಹಂಚುತ್ತಿದ್ದಾರೆ.

ಹೋರರಾಜ್ಯಗಳಿಗೆ ತರಕಾರಿ ಹಾಗೂ ಹೂ ಹಣ್ಣು ಸರಬರಾಜು ಇಲ್ಲದೆ ಬೆಲೆ ಕುಸಿತವಾಗಿದೆ ಅಲ್ಲದೆ ಹೋಲ್ ಸೆಲ್ ಕೊಳ್ಳುವವರಿಲ್ಲ ಚಿಲ್ಲರೆ ಯವರು ಮಾತ್ರ ಖರಿದಿಸುತ್ತಾರೆ ಹಾಗಾಗಿ ಚಿಲ್ಲರೆ ತರಕಾರಿ ಬೆಲೆ ಹೆಚ್ಚಳವಾಗಿದೆ ಬೆಂಗಳೂರಿನಲ್ಲಿ ತರಕಾರಿ ಖರಿದಿಸುವವರಿಗಿಂತ ಮಾರುವವರೇ ಹೆಚ್ಚಾಗಿದ್ದಾರೆ.

ಹೋಬಳಿ, ಜಿಲ್ಲಾ. ತಾಲೂಕು. ಮಟ್ಟದಲ್ಲಿ ತರಕಾರಿ ಮಾರುಕಟ್ಟೆಗಳನ್ನು ತೆರೆದು ರೈತರಿಂದ ನೆರವಾಗಿ ಖರಿದಿಸಿದ್ರೆ ಸ್ವಲ್ಪ ಅನುಕೂಲ ವಾಗಲಿದೆ ಇಲ್ಲಾ ಅಂದ್ರೆ ರೈತರು ಮತ್ತಷ್ಟು ಸಾಲದ ಸುಳಿಗೆ ಸಿಲುಕುವಂತಾಗುತ್ತದೆ. ಈ ನಿಟ್ಟಿನಲ್ಲಿ ಸಂಬಂಧ ಪಟ್ಟವರು ಕ್ರಮ ಕೈ ಗೊಳ್ಳಬೆಕಿದೆ.

Facebook Comments