ಟ್ರೆಂಡ್ ಆಯ್ತು ‘ಉಪವಾಸ’, ಇದರಿಂದ ಏನೆಲ್ಲಾ ಲಾಭ ಗೊತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

ಉಪವಾಸ ಮಾಡುವುದು ಇಂದಿನ ದಿನಗಳಲ್ಲಿ ಆರೋಗ್ಯಕಾರಿ ಟ್ರೆಂಡ್ ಆಗಿದೆ ಮತ್ತು ಇದು ಒಳ್ಳೆಯ ಕಾರಣಕ್ಕೆ ಕೂಡ. ಯಾವಾಗಲೊಮ್ಮೆ ಉಪವಾಸ ಮಾಡುತ್ತಲಿದ್ದರೆ ಆಗ ದೀರ್ಘಕಾಲ ಬದುಕಬಹುದು ಮತ್ತು ಕಾಯಿಲೆಗಳು ಕಡಿಮೆ ಆಗುವುದು ಎಂದು ಅಧ್ಯಯನ ವರದಿಗಳು ತಿಳಿಸಿವೆ. ನಿಯಮಿತವಾಗಿ ಉಪವಾಸ ಮಾಡುವಂತಹ ಜನರು ಇತರರಗಿಂತ ಶೇ.40ರಷ್ಟು ಹೆಚ್ಚು ಬದುಕುವರು ಎಂಧು ಹೇಳಲಾಗಿದೆ.

# ಉಪವಾಸ ಹೇಗಿರಬೇಕು? : ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಉಪವಾಸ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಉಪವಾಸ ಮಾಡುವುದರಿಂದ ಅಡ್ಡ ಪರಿಣಾಮಗಳು ಆಗಬಹುದೆ ಎನ್ನುವುದರ ಬಗ್ಗೆ ತಿಳುವಳಿಕೆ ಇರಬೇಕು. ಉಪವಾಸ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕಾಗಿ ಯಾರ ಸಲಹೆಯೂ ಪಡೆಯದೆ ಉಪವಾಸ ಮಾಡಿದರೆ ಆರೋಗ್ಯ ಸಮಸ್ಯೆ ಉಲ್ಬಣಿಸುವುದರಲ್ಲಿ ಸಂಶಯವಿಲ್ಲ.

ಉಪವಾಸವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ ದೇಹವನ್ನು ಕಾಪಾಡುತ್ತದೆ. ಆದರೆ ಇದೇ ಉಪವಾಸವನ್ನು ಸರಿಯಾಗಿ ಪಾಲಿಸದಿದ್ದರೆ ಅನಾರೋಗ್ಯ ನಮ್ಮನ್ನು ಕಾಡುವುದು ಖಂಡಿತ. ನಮ್ಮ ಚಟುವಟಿಕೆ ಮತ್ತು ದೇಹದಲ್ಲಿನ ಆರೋಗ್ಯದ ಪರಿಸ್ಥಿತಿಯನ್ನು ಪರಿಗಣಿಸಿ ಉಪವಾಸವನ್ನು ಆಚರಿಸಬೇಕಾಗುತ್ತದೆ. ಕೆಲವರು ಇವು ಯಾವುದನ್ನೂ ಲೆಕ್ಕಿಸದೆ ಉಪವಾಸವನ್ನು ಆಚರಿಸುತ್ತಾರೆ. ಇದರಿಂದ ದೇಹ ಕ್ಷೀಣಿಸುವುದರ ಜತೆಗೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

# ಉಪವಾಸದ ವಿಧ ;  ಉಪವಾಸದಲ್ಲಿ ಅನೇಕ ವಿಧಗಳಿವೆ. ಫಲಾಹಾರ, ದ್ರವಾಹಾರ, ಒಪ್ಪೊತ್ತು ಅಥವಾ ಸಂಪೂರ್ಣ ಉಪವಾಸ. ನಮ್ಮ ಆರೋಗ್ಯ ಮತ್ತು ಋತುಮಾನಕ್ಕೆ ಅನುಸಾರವಾಗಿ ಇದರಲ್ಲಿ ಯಾವುದಾದರೂ ಒಂದು ರೀತಿಯ ಉಪವಾಸವನ್ನು ಕೈಗೊಳ್ಳಬಹುದು. ಉಷ್ಣವಲಯದಲ್ಲಿರುವವರು ಸಂಪೂರ್ಣ ಉಪವಾಸ ಮಾಡುವುದು ಒಳ್ಳೆಯದಲ್ಲ. ಈ ವಲಯದವರಿಗೆ ದ್ರವಾಹಾರ ಉಪವಾಸ ತುಂಬಾ ಒಳ್ಳೆಯದ್ದು.

ಇನ್ನು ಶೀತವಲಯದಲ್ಲಿರುವವರು ಯಾವುದೇ ಶಾರೀರಿಕ ಸಮಸ್ಯೆಗಳು ಇಲ್ಲದಿದ್ದರೆ ಸಂಪೂರ್ಣ ಉಪವಾಸ ಮಾಡಬಹುದು. ಉಪವಾಸವನ್ನು ಆಚರಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಉಪವಾಸದಿಂದ ಹೊರಗೆ ಬರುವ ಕ್ರಮ. ದಿನವಿಡೀ ಉಪವಾಸವಿದ್ದು ರಾತ್ರಿಯ ವೇಳೆ ಕೆಲವರು ಹೊಟ್ಟೆ ತುಂಬಾ ಊಟ ಮಾಡಿ ಮಲಗುತ್ತಾರೆ. ಇದು ಆರೋಗ್ಯಕ್ಕೆ ಹಾನಿಕಾರಕ.

ಉಪವಾಸದ ಅಂತ್ಯ ಸರಿಯಾದಲ್ಲಿ ದೇಹವು ಇನ್ನಷ್ಟು ಬಲಶಾಲಿಯಾಗುತ್ತದೆ. ಉಪವಾಸ ಮಾಡುವಾಗ ನಮ್ಮ ಜೀರ್ಣಶಕ್ತಿ ಮತ್ತು ನಮ್ಮ ಜೀರ್ಣಾಳ ತುಂಬಾ ದುರ್ಬಲವಾಗಿರುತ್ತದೆ. ಈ ರೀತಿ ದುರ್ಬಲವಾದ ಜೀರ್ಣಕ್ರಿಯೆ ಇದ್ದಾಗ ಹೊಟ್ಟೆ ತುಂಬಾ ತಿನ್ನುವುದರಿಂದ ಜೀರ್ಣಾಕ್ರಿಯೆ ನಾಶವಾಗಿ ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಉಪವಾಸ ಮುರಿಯುವಾಗ ಅಲ್ಪ ಪ್ರಮಾಣದ, ಜೀರ್ಣಕ್ರಿಯೆಯನ್ನು ವೃದ್ಧಿಸುವ ಆಹಾರವನ್ನು ಸೇವಿಸಿ ಮಲಗಬೇಕು.

ಉಪವಾಸ ಮುಗಿದ ಮರುದಿನದ ಆಹಾರವೂ ಕೂಡ ಜೀರ್ಣಕ್ರಿಯೆಯನ್ನು ವೃದ್ಧಿಸುವಂತಹದ್ದಿರಬೇಕು. ಬೇಯಿಸಿದ ತರಕಾರಿ, ಹಸಿ ತರಕಾರಿಯನ್ನು ಅಧಿಕ ಪ್ರಮಾಣದಲ್ಲಿ ತಿನ್ನಬೇಕು. ಜಿಡ್ಡಿರುವ ಆಹಾರ, ಸಂಸ್ಕರಿಸಿದ ಆಹಾರಗಳನ್ನು ಒಂದು ವಾರದವರೆಗೆ ವರ್ಜಿಸಬೇಕು. ಉಪವಾಸದ ಮರುದಿನ ಸರಿಯಾಗಿ ಮಲಶೋಧನೆಯಾಗುವುದು ಅತ್ಯಗತ್ಯ. ಫಲಾಹಾರದಿಂದ ಉಪವಾಸ ಮಾಡುವವರು ಆಯಾ ಋತುಮಾನಕ್ಕೆ ಮತ್ತು ಆಯಾ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳನ್ನೇ ತಿನ್ನಬೇಕು.

#ಏನು ಪ್ರಯೋಜನ?
ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಜೀವನಶೈಲಿಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಉಪವಾಸವೇ ಸೂಕ್ತ ಮಾರ್ಗ. ಮುಖ್ಯವಾಗಿ
• ಉಪವಾಸದಿಂದ ದೇಹಕ್ಕೆ ಹೊಸ ಚೈತನ್ಯ ಬರುತ್ತದೆ. ಅಲ್ಲದೆ ಅನೇಕ ಕಾಯಿಲೆಗಳು ಬರದಂತೆ ತಡೆಯುತ್ತದೆ.
•ಉಪವಾಸ ಮಾಡುವುದರಿಂದ ದುಶ್ಚಟ ಗಳಿಂದ ದೂರ ಇರಲು ಸಾಧ್ಯವಾಗುತ್ತದೆ.
• ಜೀರ್ಣಕ್ರಿಯೆಯ ಸಮಸ್ಯೆ, ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
•ಮಾನಸಿಕ ಆರೋಗ್ಯ ಎಲ್ಲಕ್ಕಿಂತ ಮಿಗಿಲಾದುದು. ಹಾಗಾಗಿ ಉಪವಾಸ ಮಾಡಿದರೆ ಮಾನಸಿಕ ಆರೋಗ್ಯವು ಸುಸ್ಥಿತಿಯಲ್ಲಿರುತ್ತದೆ.
•ತ್ವಚೆ ಸಮಸ್ಯೆ ಹೋಗಲಾಡಿಸುವಲ್ಲಿ ಉಪವಾಸ ತುಂಬಾ ಪರಿಣಾಮಕಾರಿಯಾಗಿದೆ.
•ಉಪವಾಸದಿಂದ ದೇಹದ ತೂಕವನ್ನು ಸಮಪ

Facebook Comments