ನೇತ್ರಾವತಿ ನದಿಗೆ ಹಾರಿ ತಂದೆ-ಮಗ ಆತ್ಮಹತ್ಯೆ..!

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಫೆ.16- ತನ್ನ ಆರು ವರ್ಷದ ಮಗನೊಂದಿಗೆ ನೇತ್ರಾವತಿ ನದಿಗೆ ಹಾರಿ ತಂದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ನಡೆದಿದೆ. ಕೊಣಾಚೆ ಗ್ರಾಮದಲ್ಲಿ ಸಂಬಂಧಿಕರೊಬ್ಬರ ಕಾರ್ಯಕ್ರಮವೊಂದಕ್ಕೆ ಕುಟುಂಬ ಸಮೇತ ಆಗಮಿಸಿದ್ದ ಗೋಪಾಲಕೃಷ್ಣ ರೈ (45) ಹಾಗೂ ಇವರ ಪುತ್ರ ಅನೀಷ್ ರೈ (6) ಸಮೀಪದಲ್ಲೇ ಇರುವ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನದಿದಡದಲ್ಲಿ ಡೆತ್‍ನೋಟ್ ಕೂಡ ಪತ್ತೆಯಾಗಿದ್ದು, ಪತ್ನಿ ಅಶ್ವಿನಿ ಅವರಿಗೆ ಕ್ಷಮಿಸುವಂತೆ ಮತ್ತು ದೂರ ಹೋಗುತ್ತಿರುವುದಾಗಿ ಬರೆದಿಡಲಾಗಿದೆ. ಸುದ್ದಿ ತಿಳಿದ ತಕ್ಷಣ ಗ್ರಾಮಸ್ಥರು ನದಿದಡಕ್ಕೆ ಆಗಮಿಸಿ ಶವವನ್ನು ಮೇಲೆತ್ತಲು ಪ್ರಯತ್ನಿಸಿದ್ದಾರೆ.

ಸಂಬಂಧಿಕರ ಶುಭ ಸಮಾರಂಭದ ಸಂದರ್ಭದಲ್ಲೇ ಈ ದುರಂತ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಮಂಗಳೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ.

Facebook Comments

Sri Raghav

Admin