8 ತಿಂಗಳ ಮಗುವನ್ನು ಅಮಾನುಷವಾಗಿ ಕೊಂದ ಪಾಪಿ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕಡೂರು, ಸೆ.12- ತನಗೆ ಹೆಣ್ಣು ಮಗು ಹುಟ್ಟಿತು ಎಂಬ ಕಾರಣದಿಂದ ತನ್ನ 8 ತಿಂಗಳ ಹೆಣ್ಣು ಮಗವನ್ನೇ ತಂದೆಯೇ ನೀರಿನ ಬಕೆಟ್‍ನಲ್ಲಿ ಮುಳುಗಿಸಿ ಅಮಾನುಷವಾಗಿ ಕೊಲೆ ಮಾಡಿದ ಘಟನೆ ಪಟ್ಟಣದಲ್ಲಿ ನಡೆದಿದೆ.

ಉಮಾಶಂಕರ್(32) ತನ್ನ ಹೆಣ್ಣು ಮಗವನ್ನು ಕೊಲೆ ಮಾಡಿದ ಆರೋಪಿಯಾಗಿದ್ದು, ವಕೀಲ ವೃತ್ತಿ ಮಾಡುತ್ತಿದ್ದ ಆರೋಪಿ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮಂಜುಳಾ ಎಂಬುವವನ್ನು ಮದುವೆಯಾಗಿದ್ದು, ನಂತರ ಹೆಣ್ಣು ಮಗು ಜನಿಸಿದ್ದು, ಪರಿಣಾಮ ಪತಿ-ಪತ್ನಿಯರ ನಡುವೆ ಜಗಳವಾಗುತ್ತಿತ್ತು. ಅಲ್ಲದೆ, ಮಾನಸಿಕ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ.

ಪಟ್ಟಣದ ನ್ಯಾಯಾಲಯದ ಡಿ.ದರ್ಜೆ ನೌಕರರಾಗಿದ್ದ ಪತ್ನಿ ಮಂಜುಳಾ ಎಂದಿನಂತೆ ಮೊನ್ನೆ ಕೆಲಸಕ್ಕೆ ತೆರಳಿದ್ದರು. ಯಾರೂ ಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ ಹೆಣ್ಣು ಮಗವನ್ನು ನೀರಿನ ಬಕೆಟ್‍ನಲ್ಲಿ ತಲೆಕೆಳಗೆ ಮಾಡಿ ಹತ್ಯೆಗೆ ಯತ್ನಿಸಿದ್ದಾನೆ.

ನಂತರ ಅಕ್ಕಪಕ್ಕದ ನಿವಾಸಿಗರಿಗೆ ವಿಷಯ ತಿಳಿಯುತ್ತಿದ್ದಂತೆ ಮಗುವನ್ನು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಕೊಂಡೊಯ್ಯವಾಗ ಮಗು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಪತ್ನಿ ಮಂಜುಳಾ ಕಡೂರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಬಂಧಿಸಲಾಗಿದೆ. ಮಗುವಿನ ಅಂತ್ಯಕ್ರಿಯೆಯನ್ನು ಪಟ್ಟಣದ ಚಂದ್ರಮಳೇಶ್ವರ ದೇವಾಲಯದ ರುದ್ರಭೂಮಿಯಲ್ಲಿ ನಡೆಸಲಾಯಿತು.

Facebook Comments