ಮಗನ ಕೊಲೆಗೆ ತಂದೆಯಿಂದಲೇ ಸುಪಾರಿ, ಅಪ್ಪ ಸೇರಿ 6 ಮಂದಿ ಅರೆಸ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಹೊಸೂರು ಬಳಿ ಕಳೆದ ತಿಂಗಳು 27 ರಂದು ತಂದೆಯೇ ಸುಪಾರಿ ನೀಡಿ ಮಗನನ್ನು ಗುಂಡಿಟ್ಟು ಕೊಲೆ ಮಾಡಿಸಿದ ಪ್ರಕರಣ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ ತಿಳಿಸಿದರು.

ನಗರದ ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಶ್ರೀನಿವಾಸ ಗೌಡ ಅವರು ಪ್ರಕರಣ ಸಂಬಂಧ ಸುಪಾರಿ ನೀಡಿದ ತಂದೆ ಸೇರಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಪ್ರಕರಣ ಸಂಬಂಧ ಬಂಧಿಸಲಾಗಿರುವ ಆರೋಪಿಗಳೆಲ್ಲರೂ ಚನ್ನರಾಯಪಟ್ಟಣ ತಾಲೂಕಿನ ವರಾಗಿದ್ದು ಓರ್ವ ಆರೋಪಿ ನಾಗರಾಜ್ ಬಂದೂಕು ರಿಪೇರಿ ಮಾಡುವ ಲೈಸೆನ್ಸ್ ಹೊಂದಿದ್ದು, ಆರೋಪಿಗಳಾದ ತಂದೆ ಹೇಮಂತ್ ಬೀನ್ ಮುದ್ದೆಗೌಡ (48),ಕಾಂತರಾಜು (52 )ಸುನಿಲ್( 27) ಪ್ರಶಾಂತ್ (23 )ನಂದೀಶ್ (28) ನಾಗರಾಜು( 65) ಎಂಬುವವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದಂತಹ ಆರು ಬಂದೂಕು, 1.8 ಲಕ್ಷ ರೂ ನಗದು, ಒಂದು ಒಮಿನಿ ಕಾರ್, ಮೂರು ಮೋಟಾರ್ ಸೈಕಲ್ ಅನ್ನು ಹಾಗೂ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

# ಶಿಕಾರಿ ಬಂದೂಕು ಬಳಕೆ;
ಮಲೆನಾಡು ಭಾಗದ ಕಾಫಿ ತೋಟದ ಮಾಲೀಕರು ಹಾಗೂ ಶಿಕಾರಿ ಮಾಡಲು ಬಳಸುವ ಆರು ಬಂದುಕುಗಳನ್ನು ಆರೋಪಿಗಳು ಬಳಸಿದ್ದು ಇದನ್ನು ಬಂದೂಕು ರಿಪೇರಿ ಮಾಡುವಂತಹ ಆರೋಪಿ ನಾಗರಾಜ್ ಅವರಿಂದ ವಶಪಡಿಸಿಕೊಳ್ಳಲಾಗಿದೆ . ಎಂದು ತಿಳಿಸಿರುವ ಅವರು ಬಂದುಕನ್ನು ಎಲ್ಲಿಂದ ತರಲಾಗಿದೆ ಎಂಬ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದರು.

# ಐದು ತಿಂಗಳಿಂದ ಸ್ಕೆಚ್:
ಪುನೀತ್ ನನ್ನು ಕೊಲೆ ಮಾಡಲು ಆರೋಪಿಗಳು ಐದು ತಿಂಗಳುಗಳಿಂದಲೂ ಸ್ಕೆಚ್ ಹಾಕಿದ್ದರು, ಪುನೀತನ ಚಲನವಲನ ಹಾಗೂ ಇತರ ಮಾಹಿತಿಗಳನ್ನು ಕಲೆ ಹಾಕಿದ್ದ ಆರೋಪಿಗಳಿಗೆ ತಂದೆ ಹೇಮಂತ್ ಸುಪಾರಿ ಆಗಿ 2 ಲಕ್ಷರೂ ನೀಡಲು ಒಪ್ಪಿದ್ದರು ಮುಂಗಡವಾಗಿ 5001 ನೀಡಿ ಮಗನ ಕೊಲೆ ಮಾಡಿಸಿದ್ದಾರೆ ಎಂದು ತಿಳಿಸಿದರು.

# ಘಟನೆ‌ ಹಿನ್ನೆಲೆ;
ತಂದೆ ಹೇಮಂತ್ ಮತ್ತು ಪುನೀತ್ ನಡುವೆ ಕೆಲ ವರ್ಷಗಳಿಂದ ವೈಷಮ್ಯ ಇತ್ತು; ಮೂರು ವರ್ಷಗಳಿಂದ ತಂದೆ ಮತ್ತು ಪುನೀತ್ ಬೇರೆಯಾಗಿದ್ದರು ಪುನೀತ್ ನೊಂದಿಗೆ ತಾಯಿ ಯಶೋದಮ್ಮ ವಾಸವಾಗಿದ್ದರು ಹೇಮಂತ್ ಯಶೋದಮ್ಮ ಅವರಿಗೆ ಯಾವುದೇ ಜೀವನಾಂಶವನ್ನು ನೀಡಿರಲಿಲ್ಲ ಈ ಸಂಬಂಧ ಗ್ರಾಮದಲ್ಲಿ ಎರಡು-ಮೂರು ಬಾರಿ ರಾಜಿ ಪಂಚಾಯತಿಯು ನಡೆದಿತ್ತು ಆದರೆ ಯಾವುದೇ ಜೀವನಾಂಶ ನೀಡುವುದಿಲ್ಲ ಎಂದು ಹೇಮಂತ್ ಸ್ಪಷ್ಟಪಡಿಸಿದ್ದರು ಹಾಗೂ ಪುನೀತ್ ಬೆಂಗಳೂರಿನಲ್ಲಿ ಕೂಲಿ ಮಾಡಿಕೊಂಡು ವಾಸವಾಗಿದ್ದರು ; ಹೀಗೆ ಕೆಲದಿನಗಳ ಹಿಂದೆ ಹೇಮಂತ್ ಅವರ ತೋಟದಲ್ಲಿ ಪುನೀತ್ ತೆಂಗಿನಕಾಯಿ ಕೆಡವಿದ್ದ ರಿಂದ ತಂದೆ ಹೇಮಂತ್ ಮಗ ಪುನೀತ್ ಗೆ ವಾರ್ನಿಂಗ್ ಮಾಡಿದ್ದರು ಈ ಕಾರಣದಿಂದಲೇ ಕೊಲೆ ಮಾಡಲಾಗಿದೆ ಎಂದು ಯಶೋದಮ್ಮ ಅವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು .

ಅಲ್ಲದೆ ತಂದೆಯಿಂದಲೇ ಮಗನ ಹತ್ಯೆ ಆಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದರು ಈ ಹೇಳಿಕೆ ಹಾಗೂ ಗ್ರಾಮಸ್ಥರಿಂದ ಮಾಹಿತಿ ಕಲೆಹಾಕಿ ಪ್ರಕರಣವನ್ನು ಭೇಧಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಪ್ರಕರಣವನ್ನು ಬೇಧಿಸುವಲ್ಲಿ ಡಿವೈಎಸ್ಪಿ ಬಿ.ಬಿ ಲಕ್ಷ್ಮೇ ಗೌಡ, ಸಿಪಿಐ ಬಿ.ಜಿ .ಕುಮಾರ್ ,ಪೊಲೀಸ್ ಇನ್ಸ್ಪೆಕ್ಟರ್ ವಿನಯ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿನೋದರಾಜ್, ಪಿಎಸ್ಐ ಶ್ರೀನಿವಾಸ್ ಸೇರಿದಂತೆ ಪ್ರಕರಣ ಭೇದಿಸಿದ ಎರಡು ತಂಡಗಳಿಗೆ ಶ್ರೀನಿವಾಸಗೌಡ ಅಭಿನಂದಿಸಿದರು

Facebook Comments

Sri Raghav

Admin