ಆಸ್ತಿ ದುರಾಸೆಗೆ ಅಣ್ಣನ ಮಗನನ್ನೇ ಕೊಂದ ಚಿಕ್ಕಪ್ಪ..!

ಈ ಸುದ್ದಿಯನ್ನು ಶೇರ್ ಮಾಡಿ

ಚಳ್ಳಕೆರೆ, ಮಾ.6- ತನಗೆ ಎಲ್ಲಿ ಆಸ್ತಿ ಕೈ ತಪ್ಪುತ್ತದೋ ಎಂಬ ದುರಾಸೆಯಿಂದ ಚಿಕ್ಕಪ್ಪ ತನ್ನ ಅಣ್ಣನ ಮಗನನ್ನೇ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದ ಗೋವಿಂದ (8) ಕೊಲೆಯಾಗಿರುವ ಬಾಲಕ.

ಆರೋಪಿ ಚಿರಂಜೀವಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಚಿರಂಜೀವಿ ಅವರ ತಂದೆ ತನ್ನ ಆಸ್ತಿಯನ್ನು ಮೊಮ್ಮಕ್ಕಳ ಹೆಸರಿಗೆ ಬರೆಯುವುದಾಗಿ ಹೇಳಿದ್ದರು. ಈ ವಿಚಾರ ತಿಳಿದ ಚಿರಂಜೀವಿ ತನಗೆ ಎಲ್ಲಿ ಆಸ್ತಿ ಕೈ ತಪ್ಪುತ್ತದೋ ಎಂಬ ದುರಾಲೋಚನೆಯಿಂದ ಅಣ್ಣನ ಮಗ ಗೋವಿಂದನನ್ನು ಕೊಲೆ ಮಾಡಲು ಸಂಚು ರೂಪಿಸಿ ಮೂರು ದಿನಗಳ ಹಿಂದೆ ಗೋವಿಂದನನ್ನು ಕತ್ತು ಹಿಸುಕಿ ಸಾಯಿಸಿ ಗೋಣಿ ಚೀಲದಲ್ಲಿ ಶವ ಕಟ್ಟಿ ಗ್ರಾಮದ ಸ್ಮಶಾನದ ಹಳ್ಳದಲ್ಲಿ ಬಿಸಾಡಿ ಬಂದಿದ್ದನು.

ಇತ್ತ ಗೋವಿಂದ ನಾಪತ್ತೆಯಾಗಿರುವ ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸುತ್ತಿದ್ದಾಗ ನಿನ್ನೆ ಮಧ್ಯಾಹ್ನ ಹಳ್ಳದಲ್ಲಿ ಅನುಮಾನಸ್ಪದ ಮೂಟೆ ಪತ್ತೆಯಾದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೂಟೆ ತೆಗೆದು ನೋಡಿದಾಗ ಬಾಲಕನ ಶವ ಇರುವುದು ಕಂಡು ಬಂದಿದೆ. ಸ್ಥಳಕ್ಕೆ ಎಎಸ್‍ಪಿ, ಸಿಪಿಐ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments