ಮಗನ ಮೇಲೆ ಗುಂಡು ಹಾರಿಸಿದ  ಪಾಪಿ ತಂದೆ..!

ಈ ಸುದ್ದಿಯನ್ನು ಶೇರ್ ಮಾಡಿ

ಕಾರವಾರ,ಜೂ 20- ಆಸ್ತಿ ಸಂಬಂಧ ಹೆತ್ತ ಮಗನ ಮೇಲೆಯೇ ಕುಡಿದ ಮತ್ತಿನಲ್ಲಿ ತಂದೆಯೇ ಗುಂಡು ಹಾರಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನರೇಬೈಲ್ ನಲ್ಲಿ ನಡೆದಿದೆ. ರಾವಯ್ಯ ಗುಂಡು ಹಾರಿಸಿದ ತಂದೆ. ರಾವಯ್ಯ ಕುಡಿದ ಅಮಲಿನಲ್ಲಿ ತನ್ನ ಮಗ ನಾಗೇಂದ್ರ ಮೇಲೆ ಗುಂಡು ಹಾರಿಸಿದ್ದಾನೆ.

ಗುಂಡಿನಿಂದಾಗಿ ನಾಗೇಂದ್ರ ತೀವ್ರ ಅಸ್ವಸ್ಥಗೊಂಡಿದ್ದಾನೆ. ರಾವಯ್ಯ ಹಾಗೂ ನಾಗೇಂದ್ರ ನಡುವೆ ಆಸ್ತಿ ಸಂಬಂಧ ಮನಸ್ತಾಪ ಇತ್ತು. ನಿನ್ನೆ ಈ ವಿಚಾರದ ಬಗ್ಗೆ ಜಗಳವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಪರಿಣಾಮ ಕುಡಿದ ಅಮಲಿನಲ್ಲಿದ್ದ ತಂದೆ ರಾವಯ್ಯ ಬಂದೂಕಿನಿಂದ ಗುಂಡು ಹಾರಿಸಿದ ಪರಿಣಾಮ ಮಗನ ಹೊಟ್ಟೆ ಸೀಳಿದೆ.

ನಾಗೇಂದ್ರನ ಹೊಟ್ಟೆಗೆ ಗುಂಡು ಹಾರುತ್ತಿದ್ದಂತೆ ರಾವಯ್ಯ ಗಾಬರಿಗೊಂಡು ಮಗನನ್ನು ಶಿರಸಿ ಟಿಎಸ್‍ಎಸ್ ಆಸ್ಪತ್ರೆಗೆ ಕೊರೆದುಕೊಂಡು ಹೋಗಿದ್ದಾನೆ.
ಸದ್ಯ ನಾಗೇಂದ್ರಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಬಗ್ಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ತಂದೆಯನ್ನು ವಶಕ್ಕೆ ಪಡೆಯಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ