ಜಮ್ಮು-ಕಾಶ್ಮೀರ : ರಸ್ತೆ ಅಪಘಾತದಲ್ಲಿ ತಂದೆ, ಮಗ ಸಾವು, ಮೂವರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

ಜಮ್ಮು, ಫೆ.20 (ಪಿಟಿಐ)- ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಜಮ್ಮು-ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವ್ಯಾನೊಂದು ಲಾರಿಗೆ ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿವೆ. ಶನಿವಾರ ಬೆಳ್ಳಂಬೆಳಗ್ಗೆ ಸಂಭವಿಸಿದೆ ಅಪಘಾತದಲ್ಲಿ 70 ವರ್ಷದ ಹನ್ಸರಾಜ್ ಸ್ಥಳದಲ್ಲೇ ಮೃತಪಟ್ಟು, 35 ವರ್ಷದ ಮಗ ಸೋಹನ್ ಲಾಲ್‍ಗೆ ತೀವ್ರ ಗಾಯಗಳಾಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಮಧ್ಯರಾತ್ರಿ 2 ಗಂಟೆಯಲ್ಲಿ ಕತುವಾದಿಂದ ಬರುತ್ತಿದ್ದ ವ್ಯಾನ್ ಜಮ್ಮು-ಪಠಾಣ್‍ಕೋಟ್ ರಾಷ್ಟ್ರೀಯ ಹೆದ್ದಾರಿಯ ಮನ್ಸಾರ್ ಮೋರ್ಹ್ ಬಳಿ ನಿಯಂತ್ರಣಕ್ಕೆ ಸಿಗದೆ ಹಿಂದಿನಿಂದ ಟ್ರಕ್‍ಗೆ ಗುದ್ದಿದೆ. ಸ್ಥಳದಲ್ಲಿ ಹನ್ಸರಾಜ್ ಮತ್ತು ಆಸ್ಪತ್ರೆಯಲ್ಲಿ ಸೋಹನ್ ಲಾಲ್ ಮೃತಪಟ್ಟಿದ್ದು, ರಮೇಶ್ ಚಂದರ್ (60), ಹಿಮಂತ್ ಕುಮಾರ್ (35) ಮತ್ತು ಗೌರವ್ ಕುಮಾರ್ (18) ಗಂಭೀರ ಗಾಯಗಳಿಂದ ಆಸ್ಪತ್ರೆ ಸೇರಿದ್ದಾರೆ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ದೂರು ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Facebook Comments