ದೀಪಾವಳಿ ಸ್ಪೆಷಲ್ ಮೋದಿ ಮನ್ ಕಿ ಬಾತ್ ನಲ್ಲಿ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ.27- ನಮ್ಮ ಹೆಣ್ಣು ಮಕ್ಕಳು ನಮ್ಮ ಗೌರವ ಎಂದು ಬಣ್ಣಿಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಸ್ತ್ರೀ ಶಕ್ತಿಯನ್ನು ಪ್ರತಿಯೊಬ್ಬರೂ ಗೌರವಿಸಬೇಕು. ನಾರಿಯರನ್ನು ಪೂಜ್ಯ ಭಾವದಿಂದ ನೋಡಬೇಕು ಎಂದು ಕರೆ ನೀಡಿದ್ದಾರೆ.

ಪ್ರತಿ ತಿಂಗಳ ಕೊನೆ ಭಾನುವಾರ ಬಾನುಲಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಭಾರತೀಯರೆಲ್ಲರಿಗೂ ದೀಪಾವಳಿ ಹಬ್ಬದ ಶುಭ ಕೋರಿದರು. ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಹರ್ಷೋಲ್ಲಾಸದಿಂದ ಬೆಳಕಿನ ಹಬ್ಬ ದೀಪಾವಳಿ ಆಚರಿಸಲಾಗುತ್ತದೆ. ಬೆಳಕು ನಮ್ಮ ಜೀವನ. ದೀಪ ನಮಗೆ ದಾರಿದೀಪ ಎಂದು ಮೋದಿ ಹೇಳಿದರು.

ನಾರಿಶಕ್ತಿಯನ್ನು ನಾವೆಲ್ಲರೂ ಗೌರವಿಸಬೇಕು. ಸಾಮಾಜಿಕ ಜಾಲತಾಣಗಳಲ್ಲಿ ನಾರಿಶಕ್ತಿ ಬಗ್ಗೆ ಅನೇಕ ಕಥೆಗಳಿವೆ. ಹೆಣ್ಣು ಮಕ್ಕಳು ನಮ್ಮೆಲ್ಲರಿಗೂ ಗೌರವ. ಅವರನ್ನು ನಾವೆಲ್ಲರೂ ಪೂಜ್ಯ ಭಾವದಿಂದ ಕಾಣಬೇಕು ಎಂದು ಹೇಳಿದರು. ಇದೇ ತಿಂಗಳ 31ರಂದು ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನ. ಪಟೇಲರು ತಾವು ಘೋಷಿಸುತ್ತಿದ್ದ ಎಲ್ಲ ಕಾರ್ಯಗಳನ್ನು ಅಕ್ಷರಶಃ ಜಾರಿಗೆ ತರುತ್ತಿದ್ದರು.

ಇಡೀ ದೇಶವನ್ನು ಒಗ್ಗೂಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಲಕ್ಷ್ಯ ಲಕ್ಷದ್ವೀಪದವರೆಗೂ ಇತ್ತು ಎಂದು ಪಟೇಲರ ಗುಣಗಾನ ಮಾಡಿದರು.  ನವೆಂಬರ್‍ನಲ್ಲಿ ಸಿಖ್ಖರ ಧರ್ಮಗುರು ನಾನಕ್ ಗುರುದೇವ್ ಅವರ 550ನೆ ಜನ್ಮದಿನ. ಇದಕ್ಕಾಗಿ ಭಾರತದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಹೇಳಿದರು.

Facebook Comments