ಹುಡುಗಿಯ ವಿಚಾರಕ್ಕೆ ಸ್ನೇಹಿತರಿಬ್ಬರ ಜಗಳ, ಒಬ್ಬನ ಕೊಲೆಯಲ್ಲಿ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

Murdr--01

ಬೆಂಗಳೂರು, ಆ.9- ಹುಡುಗಿಯ ಪ್ರೇಮ ವಿಚಾರಕ್ಕೆ ಸಂಬಂಧಿಸಿ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ ಒಬ್ಬನ ಸಾವಿನಲ್ಲಿ ಅಂತ್ಯಗೊಂಡ ಘಟನೆ ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ರಾತ್ರಿ ನಡೆದಿದೆ. ಗುಜರಾತ್ ಮೂಲದ ರೋಣಕ್ ಚೌದರಿ (23) ಸಾವನ್ನಪ್ಪಿದವರು. ನರ್ಸಿಂಗ್ ಕೋರ್ಸ್ ಪ್ರವೇಶ ಪರೀಕ್ಷೆ ಬರೆಯಲು ರೋಣಕ್ ಚೌದರಿ ಸಹಿತ 30 ಮಂದಿ ಆ.2ರಂದು ಗುಜರಾತ್‍ನಿಂದ ನಗರಕ್ಕೆ ಬಂದಿದ್ದರು. ವಿ.ವಿ.ಪುರಂ ಬಸಪ್ಪ ಸರ್ಕಲ್ ಬಳಿ ಇರುವ ತ್ರಿಷೂಲ್ ಹೋಟೆಲ್ ಆಂಡ್ ಲಾಡ್ಜ್‍ನಲ್ಲಿ ಕೆಲವು ವಿದ್ಯಾರ್ಥಿಗಳು ತಂಗಿದ್ದರು. ಪರೀಕ್ಷೆ ನಿನ್ನೆ ಕೊನೆಗೊಂಡಿದೆ.

ಮೃತ ರೋಣಕ್, ಆತನ ಗೆಳೆಯರಾದ ಅಪೂರ್ವ ಚೌದರಿ, ರಾಯಲ್ ಚೌದರಿ ಅವರು ಇದೇ ಲಾಡ್ಜ್‍ನ ಒಂದೇ ಕೊಠಡಿಯಲ್ಲಿ ತಂಗಿದ್ದರು. ನಿನ್ನೆ ರಾತ್ರಿ 11.15ರ ಸುಮಾರಿಗೆ ರಾಯಲ್ ಚೌದರಿ ಮತ್ತು ರೋಣಕ್ ಚೌದರಿ ನಡುವೆ ಹುಡುಗಿಯೊಬ್ಬಳನ್ನು ಪ್ರೀತಿಸುವ ವಿಷಯದಲ್ಲಿ ಜಗಳವಾಗಿದೆ. ಈ ವೇಳೆ ಕೊಠಡಿಯ ಪಕ್ಕದಲ್ಲಿದ್ದ ಖಾಲಿ ಜಾಗವನ್ನು ದಾಟುತ್ತಿದ್ದ ರೋಣಕ್ ಚೌದರಿ ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ.

ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ವಿ.ವಿ.ಪುರಂ ಪೊಲೀಸರು, ಮೃತರ ಪೋಷಕರಿಗೆ ಮಾಹಿತಿ ನೀಡಿ ಅವರ ಬರುವಿಕೆಗಾಗಿ ಕಾಯುತ್ತಿದ್ದಾರೆ. ಪೋ ಷಕರ ಹೇಳಿಕೆ ಪಡೆದು ಮುಂದಿನ ಕ್ರಮಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin