ಫಿಫಾ ವಿಶ್ವಕಪ್ : ಫ್ರೀ-ಕ್ವಾರ್ಟರ್‍ನಲ್ಲಿ ಅತಿರಥ-ಮಹಾರಥರ ಹಣಾಹಣಿ

ಈ ಸುದ್ದಿಯನ್ನು ಶೇರ್ ಮಾಡಿ

Fifa--001

ಮಾಸ್ಕೋ, ಜೂ.30-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್-2018 ಕುತೂಹಲಕಾರಿ ಘಟ್ಟ ತಲುಪಿದೆ. ಲೀಗ್ ಹಂತಗಳು ಮುಕ್ತಾಯಗೊಂಡಿದ್ದು, ಇಂದಿನಿಂದ ಕಾಲ್ಚೆಂಡಿನ ನಾಕೌಟ್ ಕದನ ಆರಂಭವಾಗಲಿದೆ. 16ರ ಸುತ್ತಿಗೆ ಇಂದು ಸಂಜೆಯಿಂದ ಚಾಲನೆ ದೊರೆಯಲಿದ್ದು, ಗೆಲ್ಲುವ ತಂಡಗಳು ಕ್ವಾರ್ಟರ್‍ಗೆ ಸೋತ ತಂಡಗಳು ಪಂದ್ಯಾವಳಿಯಿಂದ ನಿರ್ಗಮಿಸಲಿವೆ.

ನಾಕೌಟ್ ಹಂತ ಕದನ ಕೌತುಕ ಕೆರಳಿಸಿದ್ದು, ಈ ಸುತ್ತಿಗೆ ಪ್ರವೇಶ ಪಡೆದಿರುವ 16 ತಂಡಗಳು ಮುಂದಿನ ಹಂತ ತಲುಪಲು ತೀವ್ರ ಹೋರಾಟ ನಡೆಸಲಿವೆ. ಒಟ್ಟು 32 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯಲ್ಲಿ ತಲಾ ನಾಲ್ಕು ತಂಡಗಳಂತೆ ಎಂಟು ಗುಂಪುಗಳಾಗಿ ವಿಂಗಡಿಸಲಾಗಿತ್ತು. ಪ್ರತಿ ಗುಂಪಿನಿಂದಲೂ ಮೂರು ಲೀಗ್ ಪಂದ್ಯಗಳನ್ನು ಆಯೋಜಿಸಲಾಗಿತ್ತು. ಅಗ್ರ ಎರಡು ಸ್ಥಾನಗಳನ್ನು ಪಡೆದ ತಂಡಗಳು ನಾಕೌಟ್ (ಫ್ರೀ-ಕ್ವಾರ್ಟರ್) ಹಂತ ಪ್ರವೇಶಿಸಿವೆ. ಇದರಂತೆ ಪ್ರತಿ ಗುಂಪಿನಿಂದಲೂ ಎರಡರಂತೆ ಒಟ್ಟು 16 ತಂಡಗಳು ಪರಾಭವಗೊಂಡು ಟೂರ್ನಿಯಿಂದ ನಿರ್ಗಮಿಸಿವೆ.

ಫ್ರೀ ಕ್ವಾರ್ಟರ್ ಹಂತ ಪ್ರವೇಶಿದ ತಂಡಗಳು: ಉರುಗ್ವೆ, ರಷ್ಯಾ(ಗ್ರೂಪ್ ಎ), ಸ್ಪೇನ್, ಪೋರ್ಚುಲ್(ಗ್ರೂಪ್ ಬಿ), ಫ್ರಾನ್ಸ್, ಡೆನ್ಮಾರ್ಕ್(ಗ್ರೂಪ್ ಸಿ), ಕ್ರೊವೇಷ್ಯಾ, ಅರ್ಜೆಂಟೀನಾ(ಗ್ರೂಪ್ ಡಿ), ಸ್ವೀಡನ್, ಮೆಕ್ಸಿಕೋ(ಗ್ರೂಪ್ ಇ), ಬೆಲ್ಜಿಯಂ, ಇಂಗ್ಲೆಂಡ್ (ಗ್ರೂಪ್ ಜಿ) ಹಾಗೂ ಕೊಲಂಬಿಯಾ, ಜಪಾನ್ (ಗ್ರೂಪ್ ಎಚ್) ಈ ತಂಡಗಳು 16ರ ಹಂತ ತಲುಪಿವೆ. ಇಂದು ಅರ್ಜೆಂಟೀನಾ ಮತ್ತು ಫ್ರಾನ್ಸ್ ಹಾಗೂ ಪೋರ್ಚುಗಲ್ ಮತ್ತು ಉರುಗ್ವೆ ತಂಡಗಳ ನಡುವೆ ಎರಡು ಜಿದ್ದಾಜಿದ್ದಿನ ಪೈಪೋಟಿಗೆ ವೇದಿಕೆ ಸಜ್ಜಾಗಿದೆ.

ರೊನಾಲ್ಡೊ-ಮೆಸ್ಸಿ ಪೈಪೋಟಿ :

ಫುಟ್ಬಾಲ್ ಕ್ರೀಡೆಯ ಸರ್ವಶ್ರೇಷ್ಠ ಆಟಗಾರರಾದ ಪೋರ್ಚುಗಲ್‍ನ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಅರ್ಜೆಂಟೀನಾದ ಲಿಯೋನಲ್ ಮೆಸ್ಸಿ ಈ ವಿಶ್ವಕಪ್‍ನಲ್ಲಿ ಪರಸ್ಪರ ಎದುರಾಗುವ ಸಾಧ್ಯತೆ ಇದೆ. ಈ ಎರಡೂ ತಂಡಗಳು ಫ್ರೀ-ಕ್ವಾರ್ಟರ್‍ನಲ್ಲಿ ಜಯಸಾಧಿಸಿದರೆ, ಕ್ವಾರ್ಟರ ಫೈನಲ್‍ನಲ್ಲೂ ಪರಸ್ಪರ ಸೆಣಸುವ ನಿರೀಕ್ಷೆಯೂ ಉಂಟು. ಪೋರ್ಚುಗಲ್ ಅಥವಾ ಅರ್ಜೆಂಟೀನಾ ಸೆಮಿಫೈನಲ್‍ನಲ್ಲಿ ಬ್ರೆಜಿಲ್ ವಿರುದ್ಧ ಮುಖಾಮುಖಿಯಾಗುವ ಸಂಭವವಿದೆ. ಈ ಎಲ್ಲ ಕಾರಣಗಳಿಂದಲೂ ನಾಕೌಟ್ ಹಂತ ಕದನ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin