12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.26- ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ಚಲನಚಿತ್ರೋತ್ಸವಕ್ಕಾಗಿಯೇ ಅತ್ಯಾಕರ್ಷಕ ವೇದಿಕೆ ಸಿದ್ದವಾಗಿದೆ. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಯಡಯೂರಪ್ಪ ಚಾಲನೆ ನೀಡಲಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಂತಾರಾಷ್ಟ್ರೀಯ ಸಿನಿಮೋತ್ಸವ ಇಂದಿನಿಂದ ಮಾರ್ಚ್ 4ರವರೆಗೆ ನಡೆಯಲಿದೆ.

ಸಿನಿಮಾ ಪ್ರದರ್ಶನಕ್ಕಾಗಿ ನಗರದ ಓರಾಯನ್ ಮಾಲ್‍ನಲ್ಲಿ 11 ಸ್ಕ್ರೀನ್‍ಗಳು ಸಿದ್ದವಾಗಿದೆ. ಅದೇ ರೀತಿ ನವರಂಗ ಕಲಾವಿದರ ಭವನದಲ್ಲೂ ಪ್ರದರ್ಶನವಿರುತ್ತದೆ.  ಭಾರತೀಯ ಪ್ರಾದೇಶಿಕ ಭಾಷಾ ಚಿತ್ರಗಳು ರಷ್ಯಾ, ಇರಾನ್, ಜಪಾನ್, ಇಂಡೊನೇಷ್ಯ ಸೇರಿದಂತೆ ಒಟ್ಟು 60 ರಾಷ್ಟ್ರಗಳ 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳ ನಂತರ 6 ಗಂಟೆಗೆ ಚಲನಚಿತ್ರೋತ್ಸವ ಚಾಲನೆ ದೊರೆಯಲಿದೆ. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸುವರು. ರಾಕಿಂಗ್ ಸ್ಟಾರ್ ಯಶ್ ಚಿತ್ರೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.

Facebook Comments