66ನೇ ಫಿಲಂಫೇರ್ ಪ್ರಶಸ್ತಿ ಪ್ರಕಟ : ಇರ್ಫಾನ್‍ಖಾನ್-ತಾಪ್ಸಿಪನ್ನು ಉತ್ತಮ ನಟ-ನಟಿ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮಾ. 28- ಬಾಲಿವುಡ್ ಅಂಗಳದಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿರುವ ಫಿಲಂಫೇರ್ ಪ್ರಶಸ್ತಿಯು ಪ್ರಕಟಗೊಂಡಿದೆ. ದೇಶದ ಪ್ರತಿಷ್ಠಿತ ಪಾನ್ ಮಸಾಲ ಕಂಪೆನಿಯಾಗಿರುವ ವಿಮಲ್ ಸಹಯೋಗದಲ್ಲಿ ನಡೆದ 66ನೇ ಫಿಲಂ ಫೇರ್ ಪ್ರಶಸ್ತಿಯ ವಿಭಾಗದಲ್ಲಿ ಉತ್ತಮ ನಟನಾಗಿ ಇರ್ಫಾನ್‍ಖಾನ್ ಹಾಗೂ ಉತ್ತಮ ನಟಿಯಾಗಿ ತಾಪ್ಸಿಪನ್ನು ಅವರು ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

ಕಳೆದ ವರ್ಷ ದುರಂತ ಅಂತ್ಯ ಕಂಡ ಶುಶಾಂತ್‍ಸಿಂಗ್ ರಜಪೂತ್ ಅವರು ಚಿಚೋರೆ ಚಿತ್ರಕ್ಕಾಗಿ ಫಿಲಂ ಫೇರ್ ಪ್ರಶಸ್ತಿ ಪಡೆಯುತ್ತಾರೆ ಎಂದು ಅಂದಾಜಿಸಲಾಗಿತ್ತಾದರೂ ಅಂಗ್ರೇಜಿಮೀಡಿಯಂನಲ್ಲಿನ ತಮ್ಮ ಉತ್ತಮ ನಟನೆಗಾಗಿ ಇರ್ಫಾನ್‍ಖಾನ್ ಪ್ರಶಸ್ತಿ ಗೆದ್ದುಕೊಂಡರು. ಥಪ್ಪಡ್ ಚಿತ್ರದ ನಟನೆಗಾಗಿ ತಾಪ್ಸಿಪನ್ನು ಉತ್ತಮ ನಟಿ ಪ್ರಶಸ್ತಿ ಪಡೆದರೆ ಇವರಿಗೆ ಕಂಗನಾರನಾವತ್ ಉತ್ತಮ ಪೈಪೋಟಿ ನೀಡಿದರು.

ಉತ್ತಮ ಚಿತ್ರವಾಗಿ ಥಪ್ಪಡ್ ಪ್ರಶಸ್ತಿ ಗಿಟ್ಟಿಸಿದರೆ, ಅಜಯ್‍ದೇವಗನ್ ನಟಿಸಿದ್ದ ತಾನ್‍ಜಿ ದಿ ಆನ್‍ಸಾಂಗ್ ವಾರಿಯರ್ ಚಿತ್ರದ ನಿರ್ದೇಶಕ ಓಂ ರಾವತ್ ಉತ್ತಮ ನಿರ್ದೇಶಕರಾಗಿ ಹೊರಹೊಮ್ಮಿದರು. ಗುಲಾಬೋ ಸಿತಾಬೋ ಚಿತ್ರದ ನಟನೆಗಾಗಿ ಅಮಿತಾಬ್‍ಬಚ್ಚನ್ ವಿಮರ್ಶಕರ ಉತ್ತಮ ನಟನ ಪ್ರಶಸ್ತಿ ಬಾಚಿಕೊಂಡರೆ, ಈಸ್ ಲವ್ ಎನಾಫ್? ಸಾರ್ ಚಿತ್ರದ ನಟನೆಗಾಗಿ ತಿಲೋತ್ತಮಾ ಸೋಮೆ ವಿಮರ್ಶಕರ ಉತ್ತಮ ನಟಿಗೆ ಭಾಜನರಾದರು.

ಪ್ರಶಸ್ತಿಗಳ ವಿವರ:
ಸೈಫ್ ಅಲಿಖಾನ್- ಉತ್ತಮ ಪೋಷಕ ನಟ- ತಾನ್‍ಜಿ
ಫಾರೂಖ್‍ಜಬ್ಬಾರ್- ಉತ್ತಮ ಪೋಷಕ ನಟಿ- ಗುಲಾಬೋ ಸೀತಾಬೋ
ಅಲೈಯಾ- ಉದಯೋನ್ಮುಖ ನಟಿ- ಜವಾನಿ ಜಾನೆಮನ್
ಅರ್ಜುನ್- ಅತ್ಯುತ್ತಮ ಕಾದಂಬರಿ ಆಧಾರಿತ ಚಿತ್ರ
ಅನುಭವ್‍ಸಿನ್ಹಾ, ಮೃನ್ಮ ಮೈಲಗೂ – ಉತ್ತಮ ಕಥೆ (ಥಪ್ಪಡ್)
ಅವಿಕ್ ಮುಖ್ಯೋಪಾಧ್ಯಾಯ- ಉತ್ತಮ ಛಾಯಾಗ್ರಾಹಣ- ಗುಲಾಬೊ ಸೀತಾಬೋ
ಫಾರ್ನಖಾನ್- ಉತ್ತಮ ನೃತ್ಯ ನಿರ್ದೇಶಕಿ- ದಿಲ್‍ಬೇಚಾರ
ಇರ್ಫಾನ್‍ಖಾನ್- ಜೀವನ ಶ್ರೇಷ್ಠ ಪ್ರಶಸ್ತಿ
ರಂಜಾನ್ ಬುಲಟ್, ಅರ್ಪಿ ಯಾದವ್- ಉತ್ತಮ ಸಾಹಸ ನಿರ್ದೇಶನ- ತನ್ಹಾಜಿ.

Facebook Comments