ರಾಜ್ಯದ ಹಲವೆಡೆ ಗಲಭೆ : 17 ಮಂದಿ ವಿರುದ್ಧ ಎಫ್‍ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.14- ರಾಜ್ಯದ ಹಲವೆಡೆ ಹಾಗೂ ಬೆಂಗಳೂರಿನಲ್ಲಿ ಗಲಭೆ ಸೃಷ್ಟಿಸುವುದು, ಹಿಂದು ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ 17 ಮಂದಿ ವಿರುದ್ಧ ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.ಗುರಪ್ಪನಪಾಳ್ಯದಲ್ಲಿ ಬಾಡಿಗೆಗೆ ಮನೆಯೊಂದನ್ನು ಪಡೆದು ಉಗ್ರ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಿಕೊಂಡಿದ್ದರಲ್ಲದೆ, ಸಭೆಯನ್ನೂ ನಡೆಸುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಈ ಮನೆಯಲ್ಲಿ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ಸಂಗ್ರಹಿಸಿಟ್ಟಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದ ಪ್ರಕರಣದಲ್ಲಿ 17 ಮಂದಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಈ ಮನೆಯಲ್ಲಿ ಸಭೆ ನಡೆಸಿ ಹಿಂದು ಮುಖಂಡರ ಹತ್ಯೆ, ಕೋಮುಗಲಭೆ ಹಾಗೂ ಇತರೆ ದೇಶ ವಿರೋಧಿ ಚಟುವಟಿಕೆಗಳ ನಡೆಸಲು ಸಂಚು ರೂಪಿಸುತ್ತಿದ್ದರು.

ಮೆಹಬೂಬ್ ಪಾಷಾ ತನ್ನ ಸಂಬಂಧಿಕರಾದ ಇಮ್ರಾನ್‍ಖಾನ್, ಹನೀಫ್, ಮನ್ಸೂರ್ ಇತರೆ ಸ್ನೇಹಿತರಾದ ಸಲೀಂ, ಮತೀನ್, ಸುಹೇನ್, ಅನೀಸ್, ಶಾಜಿಬ್ ಜಬಿವುಲ್ಲಾ, ಎಜಾಜ್‍ಪಾಷಾ ಹಾಗೂ ಇತರರೊಂದಿಗೆ ಸಂಚು ಮಾಡಿ ಶಸ್ತ್ರಾಸ್ತ್ರ ಮತ್ತು ಸ್ಫೋಟಕಗಳನ್ನು ಸಂಗ್ರಹಿಸುವಲ್ಲಿ ನಿರತರಾಗಿರುವುದು ಕಂಡು ಬಂದಿದೆ. ಇವರಲ್ಲಿ ಮನ್ಸೂರ್ ನಿಷೇಧಿತ ಸಂಘಟನೆಯಾದ ಸಿಮಿಯಾ ಸದಸ್ಯ ಸಾಧಿಕ್ ಸಮೀರ್‍ನೊಂದಿಗೆ ಸಂಪರ್ಕ ಹೊಂದಿರುವ ಮಾಹಿತಿ ಲಭ್ಯವಾಗಿದೆ.

Facebook Comments