ದೈವ ನಿಂದನೆ : ಶ್ವೇತಾ ತಿವಾರಿ ವಿರುದ್ಧ ಮೊಕದ್ದಮೆ ದಾಖಲು

ಈ ಸುದ್ದಿಯನ್ನು ಶೇರ್ ಮಾಡಿ

ಭೋಪಾಲ್, ಜ.28- ದೇವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇರೆಗೆ ಟೆಲಿವಿಷನ್ ನಟಿ ಶ್ವೇತಾ ತಿವಾರಿ ಅವರ ವಿರುದ್ಧ ಇಲ್ಲಿನ ಪೊಲೀಸರು ಮೊಕದ್ದಮೆ ಹೂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ವೇತಾ ಅವರ ಹೇಳಿಕೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಶ್ವೇತಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಶ್ವೇತಾ ತಿವಾರಿ ಅವರು ಭೋಪಾಲ್‍ನಲ್ಲಿ ಅವರ ವೆಬ್ ಸೀರೀಸ್ ಷೋ ಸ್ಟಾಪರ್ ಪರಚಾರ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ತಿವಾರಿ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು.

ಈ ವಿಡಿಯೋದಲ್ಲಿ ತಿವಾರಿ ತನ್ನ ಒಳ ಉಡುಪಿನ ಬಗ್ಗೆ ಮಾತನಾಡುವಾಗ ದೇವರ ಹೆಸರನ್ನು ಪ್ರಸ್ತಾಪಿಸಿದರು ಎಂಬುದರ ಚಿತ್ರಣವಿದೆ ಎನ್ನಲಾಗಿದೆ. ಮಾಧ್ಯಮ ಪ್ರತಿನಿಗಳ ಮುಂದೆ ಅವರು ಹೇಳಿಕೆ ನೀಡಿದಾಗ ಅವರ ಸಹ-ಕಲಾವಿದರೂ ಉಪಸ್ಥಿತರಿದ್ದರು ಎಂದು ಆಪಾದಿಸಲಾಗಿದೆ.

Facebook Comments