ಸಾಯಿಸ್ಬಿಡ್ತೀನಿ ಎಂದಿದ್ದ ಮಹಿಳಾ ಎಸ್‍ಐ ವಿರುದ್ಧ ಎಫ್‍ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

ಮೈಸೂರು, ಜೂ.7- ವ್ಯಕ್ತಿಯೊಬ್ಬರಿಗೆ ಹತ್ಯೆ ಬೆದರಿಕೆ ಹಾಕಿದ್ದ ಆರೋಪದ ಮೇರೆಗೆ ಮಹಿಳಾ ಎಸ್‍ಐ ವಿರುದ್ಧ ದೂರು ದಾಖಲಾಗಿದೆ. ಟಿ.ನರಸೀಪುರದ ಮಹಿಳಾ ಎಸ್‍ಐ ಯಾಸ್ಮಿನ್ ತಾಜ್ ವಿರುದ್ಧ ನಗರದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ನಗರದ ಹೆಬ್ಬಾಳು ನಿವಾಸಿ ಪರಮೇಶ್ವರ್ ಎಂಬುವರು ನೀಡಿದ ದೂರಿನ ಮೇರೆಗೆ ಮಹಿಳಾ ಎಸ್‍ಐ ವಿರುದ್ಧ ದೂರು ದಾಖಲಾಗಿದೆ.

ಜೂ.4ರಂದು ಗಾಯತ್ರಿಪುರಂನಲ್ಲಿ ಯಾಸ್ಮಿನ್ ತಾಜ್ ಎಂಬುವರು ತಮ್ಮ ಪುತ್ರನ ಜೊತೆ ದ್ವಿಚಕ್ರ ವಾಹನದಲ್ಲಿ ಬರುವಾಗ ಪರಮೇಶ್ವರ್ ಎಂಬುವರು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಇವರಿಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆ ಸಂದರ್ಭದಲ್ಲಿ ಯಾಸ್ಮಿನ್ ತಾಜ್ ಅವರು ದೂರು ನೀಡಿದರೆ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಅಪಘಾತ ಸಂಬಂಧ ಪರಮೇಶ್ವರ್ ವಿರುದ್ಧ ಸಿದ್ದಾರ್ಥ ಸಂಚಾರಿ ಠಾಣೆಗೆ ದೂರು ನೀಡಿದ್ದರು. ಇದಕ್ಕೆ ಪ್ರತಿಯಾಗಿ ಎಸ್‍ಐ ಯಾಸ್ಮಿನ್ ಅವರು ನನ್ನ ಮೇಲೆ ಹಲ್ಲೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆಂದು ಪರಮೇಶ್ವರ್ ದೂರು ನೀಡಿದ್ದಾರೆ.

Facebook Comments