ಕೊರೊನಾ ಸೋಂಕಿತ ಇಮ್ರಾನ್ ಪಾಷ ವಿರುದ್ಧ ಎಫ್‍ಐಆರ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ. 31- ಕೊರೋನಾ ಸಾಂಕ್ರಾಮಿಕ ರೋಗದಿಂದ ಇತರರಿಗೂ ರೋಗ ಹರಡುವುದು ಗೊತ್ತಿದ್ದರೂ ಮನೆಯಲ್ಲೇ ಉಳಿದುಕೊಳ್ಳುವುದಾಗಿ ಹೇಳಿದ್ದ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷ ವಿರುದ್ಧ ಜೆಜೆ ನಗರ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಕೊರೋನಾ ಸೋಂಕಿತ ಇಮ್ರಾನ್ ಪಾಷ ಬಿಬಿಎಂಪಿ ಆರೋಗ್ಯಾಕಾರಿಗಳ ಮನವಿಗೆ ಸ್ಪಂದಿಸದೇ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಆರೋಗ್ಯಾಕಾರಿಗಳು ಇಮ್ರಾನ್ ವಿರುದ್ಧ ದೂರು ಸಲ್ಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ಜೆಜೆ ನಗರ ಪೊಲೀಸರು ಆಸ್ಪತ್ರೆಗೆ ತೆರಳುವಾಗ ಹೆಚ್ಚಿನ ಜನ ಸೇರಲು ಕಾರಣವಾಗಿದ್ದ ಹಿನ್ನೆಲೆಯಲ್ಲಿಯೂ ಎಫ್‍ಐಆರ್ ದಾಖಲಿಸಿದ್ದಾರೆ.

ಕಾರ್ಪೊರೇಟರ್ ಇಮ್ರಾನ್ ಪಾಷಾಗೆ ಸೋಂಕು ಹಿನ್ನೆಲೆ ಇಡೀ ಪಾದರಾಯನಪುರ ವಾರ್ಡ್ ಸೀಲ್ ಡೌನ್ ಮಾಡಲಾಗಿದೆ.
ಆಸ್ಪತ್ರೆಗೆ ಹೋಗುವಾಗ ಬೇಜವಾಬ್ದಾರಿತನ ಮೆರೆದಿದ್ದ ಕಾರ್ಪೊರೇಟರ್ ನಿಂದಾಗಿ ಪಾದರಾಯನಪುರದಲ್ಲಿ ಕಠಿಣ ಲಾಕ್ ಡೌನ್ ಮಾಡಲಾಗಿದೆ.
ಉಳಿದಂತೆ ಕಂಟೈನ್ಮೆಂಟ್ ಏರಿಯಾ ಹೊರತು ಪಡಿಸಿ ಬೆಂಗಳೂರು ಸಹಜ ಸ್ಥಿತಿಯಲ್ಲಿದೆ.

Facebook Comments

Sri Raghav

Admin