10 ಮಹಡಿಗಳ ಕಟ್ಟಡದಲ್ಲಿ ಬೆಂಕಿ : 100 ಮಂದಿ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜೂ.20 (ಪಿಟಿಐ)- ರಾಜಧಾನಿ ದೆಹಲಿಯ ಹತ್ತು ಅಂತಸ್ತುಗಳ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ 100ಕ್ಕೂ ಹೆಚ್ಚು ನಿವಾಸಿಗಳನ್ನು ರಕ್ಷಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿನ್ನೆ ತಡರಾತ್ರಿ ವಾಯುವ್ಯ ದೆಹಲಿಯ ಪಿತಾಂಪುರದ 10 ಮಹಡಿಗಳ ಕಟ್ಟಡವೊಂದರ ಐದನೆ ಮಹಡಿಯಲ್ಲಿ ಸುಮಾರು ನಸುಕಿನಲ್ಲಿ ಬೆಂಕಿ ಆಕಸ್ಮಿಕದ ಸುದ್ದಿ ತಿಳಿದು 15 ವಾಹನಗಳೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಮೂರು ಗಂಟೆಗಳ ನಿರಂತರ ಹೋರಾಟದ ನಂತರ ಅಗ್ನಿಯ ಜ್ಜಾಲೆಗಳನ್ನು ತಣಿಸಲಾಯಿತು.

ಈ ಘಟನೆಯಲ್ಲಿ ಕೆಲವು ನಿವಾಸಿಗಳಿಗೆ ಸ್ವಲ್ಪ ಉಸಿರುಗಟ್ಟಿದಂತಾಯಿತು. ಆದರೆ ಅವರಿಗೆ ಚಿಕಿತ್ಸೆ ಅಗತ್ಯವಿಲ್ಲ ಎಂದು ಮುಖ್ಯ ಅಗ್ನಿ ಶಾಮಕ ಅಧಿಕಾರಿ ಅತುಲ್ ಗರ್ಗ್ ಹೇಳಿದ್ದಾರೆ.

ಬೆಂಕಿ ಆಕಸ್ಮಿಕದಲ್ಲಿ ಕಟ್ಟಡದಲ್ಲಿದ್ದ ಪೀಠೋಪಕರಣಗಳು ಮತ್ತು ಇತರ ಗೃಹ ಬಳಕೆ ವಸ್ತುಗಳು ಭಸ್ಮವಾಗಿವೆ. ಈ ಘಟನೆಗೆ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ