ಮುಂಬೈ ಮಾಲ್‍ನಲ್ಲಿ ಅಗ್ನಿ ಆಕಸ್ಮಿಕ : ಅಕ್ಕಪಕ್ಕದ ಕಟ್ಟಡಗಳಿಂದ 3,500 ಮಂದಿ ಸ್ಥಳಾಂತರ..!

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಅ.23- ದೇಶದ ವಾಣಿಜ್ಯ ರಾಜಧಾನಿ ಮುಂಬೈನ ಹೃದಯ ಭಾಗದಲ್ಲಿರುವ ಸಿಟಿ ಸೆಂಟರ್ ಮಾಲ್‍ನಲ್ಲಿ ಭಾರೀ ಬೆಂಕಿ ದುರ್ಘಟನೆ ಸಂಭವಿಸಿದ್ದು, ಸುರಕ್ಷತಾ ಕ್ರಮವಾಗಿ ಅಕ್ಕಪಕ್ಕದ ಕಟ್ಟಡಗಳಿಂದ 3,500ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.

ಮೂರು ಅಂತಸ್ತುಗಳ ಕಟ್ಟಡದಿಂದ ಈವರೆಗೆ 300ಕ್ಕೂ ಅಕ ಮಂದಿಯನ್ನು ರಕ್ಷಿಸಲಾಗಿದೆ. ಈ ದುರ್ಘಟನೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ಕೆಲವರಿಗೆ ಗಾಯಗಳಾಗಿವೆ. ಮಾಲ್‍ನಲ್ಲಿ ಸಿಲುಕಿರಬಹುದಾದ ಜನರ ರಕ್ಷಣೆ ಕಾರ್ಯಾಚರಣೆ ಮುಂದುವರಿದಿದೆ.

ಈ ಕಟ್ಟಡದಲ್ಲಿ ನಿನ್ನೆ 8.50ರಲ್ಲಿ ಬೆಂಕಿ ಕಾಣಿಸಿಕೊಂಡು ವ್ಯಾಪಿಸಿತು. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸುಮಾರು 15 ತಾಸುಗಳ ಕಾಲ ಸೆಣಸಿ ಅಗ್ನಿಯ ಕೆನ್ನಾಲಗೆಯನ್ನು ನಿಯಂತ್ರಿಸಿದರು.

50 ಅಗ್ನಿಶಾಮಕ ವಾಹನಗಳು, 24 ಫೈರ್ ಎಂಜಿನ್‍ಗಳು ಮತ್ತು 16 ಜಂಬೋ ಟ್ಯಾಂಕರ್‍ಗಳೊಂದಿಗೆ 250ಕ್ಕೂ ಹೆಚ್ಚು ಅಕಾರಿಗಳು ಮತ್ತು ಸಿಬ್ಬಂದಿ ಬೆಂಕಿ ನಿಯಂತ್ರಣ ಕಾರ್ಯದಲ್ಲಿ ಶ್ರಮಿಸಿದರು.

ಬೆಂಕಿ ನಿಯಂತ್ರಿಸುವ ಕಾರ್ಯದಲ್ಲಿ ಸಿಬ್ಬಂದಿ ಸೇರಿದಂತೆ ಕೆಲವರಿಗೆ ಗಾಯಗಳಾಗಿದ್ದ ಸಮೀಪದ ಜೆಜೆ ಆಸ್ಪತ್ರೆಗೆ ಸೇರಿಸಲಾಗಿದೆ
ಸಿಟಿ ಸೆಂಟರ್ ಮಾಲ್‍ನ ಎರಡನೇ ಮಹಡಿಯಲ್ಲಿರುವ ಮೊಬೈಲ್ ಶಾಪ್‍ನಲ್ಲಿ ಕಾಣಿಸಿಕೊಂಡ ಬೆಂಕಿ ಸುತ್ತಮುತ್ತಲಿನ ಮಳಿಗೆಗಳಿಗೆ ವ್ಯಾಪಿಸಿ ಭುಗಿಲೆದ್ದಿತು. ಮೂರು ಅಂತಸ್ತುಗಳ ಈ ಮಾಲ್‍ನಲ್ಲಿ ಅನೇಕ ಮೊಬೈಲ್ ಅಂಗಡಿಗಳು ಮತ್ತು ಇತರ ಮಳಿಗೆಗಳು ಇವೆ.

ಈ ಮಾಲ್‍ಗೆ ಸನಿಹದಲ್ಲಿರುವ 55 ಮಹಡಿಗಳ ಆರ್ಚಿಡ್ ಎನ್‍ಕ್ಲೇವ್ ಸೇರಿದಂತೆ ಅಕ್ಕಪಕ್ಕದ ಕಟ್ಟಡಗಳಿಂದ 3,500 ನಿವಾಸಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳಾಂತರಿಸಲಾಗಿದೆ ಎಂದು ಬೃಹನ್ ಮುಂಬೈ ಪಾಲಿಕೆ (ಬಿಎಂಸಿ) ಉನ್ನತಾಕಾರಿಯೊಬ್ಬರು ತಿಳಿಸಿದ್ದಾರೆ.

ಘಟನಾ ಸ್ಥಳದಲ್ಲಿ ದಟ್ಟ ಹೊಗೆಯಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುಂಬೈ ಮೇಯರ್ ಕಿಶೋರಿ ಪೆಡ್ನೆಕರ್ ಹಾಗೂ ಬಿಎಂಪಿ ಮತ್ತು ಪೊಲೀಸ್ ಇಲಾಖೆಯ ಹಿರಿಯ ಅಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಘಟನೆಗೆ ಕಾರಣ ತಿಳಿದುಬಂದಿಲ್ಲ. ತನಿಖೆಗೆ ಆದೇಶಿಸಿಲಾಗಿದೆ.
ಮುಂಬೈನ ಕುರ್ಲಾದಲ್ಲಿನ ಗಾರ್ಮೆಂಟ್ ಕಾರ್ಖಾನೆಯಲ್ಲಿ ನಿನ್ನೆ ಬೆಂಕಿ ಆಕಸ್ಮಿಕ ಸಂಭವಿಸಿದ್ದನ್ನು ಇಲ್ಲಿ ಉಲ್ಲೇಖಿಸಬಹುದು.

Facebook Comments

Sri Raghav

Admin