ದೆಹಲಿಯಲ್ಲಿ ಎರಡು ಅಗ್ನಿ ಆಕಸ್ಮಿಕ, 500ಕ್ಕೂ ಹೆಚ್ಚು ಗುಡಿಸಲು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 26- ರಾಜಧಾನಿ ದೆಹಲಿಯಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಎರಡು ಪ್ರತ್ಯೇಕ ಅಗ್ನಿ ದುರಂತಗಳಲ್ಲಿ 500ಕ್ಕೂ ಹೆಚ್ಚು ಗುಡಿಸಲು ಭಸ್ಮವಾಗಿದ್ದು , ಪಾದರಕ್ಷೆ ಕಾರ್ಖಾನೆಯೊಂದು ಸುಟ್ಟು ಬೂದಿಯಾಗಿದೆ.

ವಾಯುವ್ಯ ದೆಹಲಿಯ ತುಘಲಕಾ ಬಾದ್ ಪ್ರದೇಶದ ಕೊಳಗೇರಿಯಲ್ಲಿ ಇಂದು ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು 500 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ ಎಂದು ಅಗ್ನಿಶಾಮಕ ಇಲಾಖೆಯ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯ ಶೇಷವಪುರಂನಲ್ಲಿರುವ ಪಾದರಕ್ಷೆ ಕಾರ್ಖಾನೆಗೆ ಇಂದು ಮುಂಜಾನೆ ಬೆಂಕಿ ತಗುಲಿ ಲಕ್ಷಾಂತರ ರೂ. ಮೌಲ್ಯದ ಮಾಲುಗಳು ಸುಟ್ಟು ಭಸ್ಮವಾಗಿವೆ. ಈ ದುರಂತಕ್ಕೆ ಕಾರಣ ತಿಳಿದು ಬಂದಿಲ್ಲ.

Facebook Comments