ಹೋಟೆಲ್‍ನಲ್ಲಿ ಅಗ್ನಿ ಆಕಸ್ಮಿಕ : 25 ವೈದ್ಯರ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಮೇ 28-ಇಲ್ಲಿನ ಹೊಟೇಲ್ ಒಂದರಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ 25 ವೈದ್ಯರೂ ಸೇರಿದಂತೆ 27 ಜನರನ್ನು ರಕ್ಷಿಸಲಾಗಿದೆ.  ದಕ್ಷಿಣ ಮುಂಬೈನ ಮೆಟ್ರೋ ಸಿನಿಮಾ ಬಳಿ ಇರುವ ಹೊಟೇಲ್ ಫಾರ್ಚುನ್ ಎಂಬ ಐದು ಅಂತಸ್ತುಗಳ ಕಟ್ಟಡದಲ್ಲಿ ನಿನ್ನೆ ತಡರಾತ್ರಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು.

ಮೊದಲ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಮೂರನೇ ಅಂತಸ್ತಿಗೂ ವ್ಯಾಪಿಸಿತು. ಸುದ್ದಿ ತಿಳಿದ ಕೂಡಲೇ ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ 25 ವೈದ್ಯರು ಮತ್ತು ಇನ್ನಿಬ್ಬರನ್ನು ರಕ್ಷಿಸಿದರು. ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.  ಎಲೆಕ್ಟ್ರಿಕ್ ಡಕ್‍ನ ವಿದ್ಯುತ್ ತಂತಿಯಲ್ಲಿ ಕಾಣಿಸಿಕೊಂಡ ಕಿಡಿಯಿಂದ ಬೆಂಕಿ ವ್ಯಾಪಿಸಿರುವುದು ತನಿಖೆಯಿಂದ ತಿಳಿದು ಬಂದಿದೆ.

Facebook Comments