ಕೊಲ್ಕತಾ : ಮಾರುಕಟ್ಟೆಯಲ್ಲಿ ಬೆಂಕಿ, ಆಡುಗಳ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

ಕೊಲ್ಕತಾ, ಜ.25- ಇಲ್ಲಿನ ನಾರ್ಕೆಲ್ದಾಂಗ ಪ್ರದೇಶದ ಅತಿ ದೊಡ್ಡ ಮೇಕೆ ಮಾರುಕಟ್ಟೆಯಲ್ಲಿ ಆಕಸ್ಮಾತ್ ಬೆಂಕಿ ಕಾಣಿಸಿಕೊಂಡು ಅಪಾರ ಸಂಖ್ಯೆಯಲ್ಲಿ ಮೇಕೆಗಳು ಮೃತಪಟ್ಟಿವೆ. ಸೋಮವಾರ ಬೆಳಗ್ಗೆ 9.40ರ ಸಮಯದಲ್ಲಿ ನಗರ ಅತಿ ದೊಡ್ಡ ಮಾರುಕಟ್ಟೆಗೆ ಬಂದಿದ್ದ ಆಡುಗಳನ್ನು ಪ್ರತ್ಯೇಕವಾಗಿರಿಸುವ ಕಟ್ಟಡದ ಪೂರ್ವ ಕೆನಾಲ್ ರಸ್ತೆಯ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಅಪಾರ ಸಂಖ್ಯೆಯಲ್ಲಿ ಇರಿಸಿದ್ದ ಆಡುಗಳನ್ನು ತಳಾಂತರಿಸುವ ಕಾರ್ಯ ನಡೆದಿದೆ. ಮೂರು ಅಗ್ನಿಶಾಮಕ ಪಡೆಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಿ, ಅಪಾರ ಪ್ರಮಾಣದ ಹಾನಿಯನ್ನು ತಪ್ಪಿಸಿದ್ದಾರೆ. ಅಕ್ಕಪಕ್ಕದ ವಾಸಿಗರನ್ನು ದೂರದ ಪ್ರದೇಶಕ್ಕೆ ರವಾಂತರಿಸಿ ಸಂಭವಿಸಬಹುದಾಗಿದ್ದ ಭಾರಿ ಪ್ರಮಾದವನ್ನು ತಪ್ಪಿಸಿದ್ದಾರೆ. ಆದರೂ, ಕೆಲವು ಮೇಕೆಗಳು ಸತ್ತಿರುವ ಸಾಧ್ಯತೆ ಇದೆ, ಮನುಷ್ಯರ ಸಾವು, ನೋವುಗಳು ಕಂಡುಬಂದಿಲ್ಲ.

ಅಗ್ನಿ ಆಕಸ್ಮಿಕಕ್ಕೆ ಕಾರಣ ತಿಳಿದುಬಂದಿಲ್ಲವಾದರೂ ತನಿಖೆ ಮುಂದುವರಿಸಲಾಗಿದೆ ಎಂದು ಅಗ್ನಿ ಶಾಮಕ ದಳದ ಅಧಿಕಾರಿ ತಿಳಿಸಿದ್ದಾರೆ.

Facebook Comments