ಭಾರತದ ಸಾಮರ್ಥ್ಯ ಕಂಡು ಪಾಕ್ ಗೆ ಶುರುವಾಯ್ತು ನಡುಕ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.21- ಎಲ್ಲಾ ಕ್ಷೇತ್ರಗಳಲ್ಲೂ ಬಲವರ್ಧನೆಯಾಗುತ್ತಿರುವ ಭಾರತದ ಸಾಮಥ್ರ್ಯದಿಂದ ಈಗಾಗಲೇ ಕಂಗಾಲಾಗಿರುವ ಪಾಕಿಸ್ತಾನಕ್ಕೆ ಸೇನಾ ಪಡೆ ಮತ್ತೊಂದು ಆಘಾತ ನೀಡಿದೆ. ಬಾಲಕೋಟ್ ವಾಯು ದಾಳಿ ಬಳಿಕ ಭಾರತದ ಪ್ರತಿಯೊಂದು ನಡೆಯನ್ನು ಭಯದಿಂದಲೇ ನೋಡುತ್ತಿರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರತ ತನ್ನ ಅಗಾಧ ಸಾಮಥ್ರ್ಯ ಪ್ರದರ್ಶಿಸಿದೆ.

ರಾಜಸ್ತಾನದ ಫೋಖ್ರಾನ್ ಫೀಲ್ಡ್ ಫೈರಿಂಗ್ ಶ್ರೇಣಿ ಮೂರನೇ ತಲೆಮಾರಿನ ಆಂಟಿ-ಟ್ಯಾಂಕ್ ಗೈಡೆಡ್(ಯುದ್ಧ ಟ್ಯಾಂಕ್ ದ್ವಂಸ ಮಾಡುವ ಮಾರ್ಗದರ್ಶಿ) ಕ್ಷಿಪಣಿ ಎನ್‍ಎಜಿಯ ಪರೀಕ್ಷೆಯನ್ನು ಭಾರತೀಯ ಸೇನೆಯು ಯಶಸ್ವಿಯಾಗಿ ನಡೆಸಿರುವುದು ನಡುಕ ತರಿಸಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‍ಡಿಒ) ಅಭಿವೃದ್ಧಿಪಡಿಸಿದ ಕ್ಷಿಪಣಿಯ ಪ್ರಯೋಗಗಳನ್ನು ಜುಲೈ 7-18ರ ನಡುವೆ ನಡೆಸಲಾಯಿತು ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
ಪರೀಕ್ಷಾರ್ಥ ಪ್ರಯೋಗಗಳು ಯಶಸ್ವಿ

ಗಿ ಪೂರ್ಣಗೊಳಿಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ರಯೋಗ ಮೌಲ್ಯಮಾಪನ ತಂಡಗಳನ್ನು ಮತ್ತು ಡಿಆರ್‍ಡಿಒ ಸಂಸ್ಥೆಯನ್ನು ಅಭಿನಂದಿಸಿದ್ದಾರೆ.

Facebook Comments