ಪಟಾಕಿ ಕಾರ್ಖಾನೆಯಲ್ಲಿ ಭಾರೀ ಸ್ಫೋಟ : 5 ಮಹಿಳೆಯರು ಛಿದ್ರಛಿದ್ರ

ಈ ಸುದ್ದಿಯನ್ನು ಶೇರ್ ಮಾಡಿ

ಕೊಡಲೂರು(ತನ),ಸೆ.4- ಪಟಾಕಿ ತಯಾರಿಕಾ ಕಾರ್ಖಾನೆಯೊಂದರಲ್ಲಿ ಭಾರೀ ಸ್ಫೋಟ ಸಂಭವಿಸಿ ಐವರು ಮಹಿಳೆಯರು ಛಿದ್ರಛಿದ್ರವಾದ ಹೃದಯ ವಿದ್ರಾವಕ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಸಂಭವಿಸಿದೆ.

ಈ ದುರ್ಘಟನೆಯಲ್ಲಿ ನಾಲ್ವರಿಗೆ ತೀವ್ರ ಗಾಯಗಳಾಗಿದ್ದು, ಇಬ್ಬರ ಸ್ಥಿತಿ ಶೋಚನೀಯವಾಗಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಉನ್ನತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಕಡಲೂರು ಜಿಲ್ಲೆಯ ಕಟ್ಟುಮನ್ನಾರ್ ಕೊಯಿಲ್ ತಾಲ್ಲೂಕಿನಲ್ಲಿ ಈ ಘಟನೆ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಇಡೀ ಕಾರ್ಖಾನೆ ಕಟ್ಟಡವೇ ಧ್ವಂಸಗೊಂಡಿದೆ.  ಘಟನಾ ಸ್ಥಳಕ್ಕೆ ಉನ್ನತ ಪೆÇಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ದೀಪಾವಳಿ ಹಬ್ಬಕ್ಕಾಗಿ ತಮಿಳುನಾಡಿನ ವಿವಿಧೆಡೆ ಪಟಾಕಿ ತಯಾರಿಕೆ ಚಟುವಟಿಕೆ ಬಿರುಸಾಗಿದ್ದು, ಕೆಲವು ಅನಧಿಕೃತ ಘಟಕಗಳಲ್ಲಿ ತಯಾರಾಗುವ ಪಟಾಕಿಗಳಿಂದ ಪ್ರತಿ ವರ್ಷ ದುರಂತಗಳು ಮರುಕಳಿಸುತ್ತಿವೆ.

Facebook Comments