“ಅವನನ್ನು ಶೂಟ್ ಮಾಡಿ ಬಿಸಾಕಬೇಕಿತ್ತು”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ14- ಆರೋಪಿ ನಾಗೇಶನನ್ನು ಪೊಲೀಸರು ಬಂಧಿಸುವುದಕ್ಕಿಂತ ಶೂಟೌಟ್ ಮಾಡಬೇಕಿತ್ತು ಎಂದು ಸಂತ್ರಸ್ಥೆ ಯುವತಿಯ ತಂದೆ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೋಪಿ ನಾಗೇಶನ ಒಂದು ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆಂದು ಗೊತ್ತಾಯಿತು. ಎರಡೂ ಕಾಲಿಗೂ ಹೊಡೆಯಬೇಕಿತ್ತು. ಆತನನ್ನು ಜೈಲಿಗೆ ಕಳುಹಿಸಿದರೆ ಪ್ರಯೋಜನವಾಗುವುದಿಲ್ಲ. ರಸ್ತೆಗೆ ಆತನನ್ನು ಬಿಟ್ಟರೆ ಜನ ಏನು ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದು ಗುಡುಗಿದರು.

ಪೊಲೀಸರು ಉತ್ತಮ ಕೆಲಸ ಮಾಡಿದ್ದಾರೆ. ನಮಗೂ ಸಹ ಧೈರ್ಯ ತುಂಬಿದ್ದಾರೆ. ಮಗಳ ಚಿಕಿತ್ಸೆಗೆ ಸರ್ಕಾರ ಸ್ಪಂದಿಸಿದೆ. ಅದಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದು ರಾಜಣ್ಣ ಹೇಳಿದರು.

Facebook Comments