ಪೊಲೀಸ್ ಪಿಸ್ತೂಲ್ನಿಂದ ಗುಂಡು ಹಾರಿಸಿ ಬೆದರಿಕೆ, ಕಾನ್ಸ್ಟೆಬಲ್ ಮತ್ತು ಆತನ ಸ್ನೇಹಿತ ಬಂಧನ
ನವದೆಹಲಿ,ನ.3- ಸಣ್ಣ ಘಟನೆಗೆ ಸಂಬಂಧಿಸಿದಂತೆ ಯುವಕರೊಂದಿಗೆ ವಾಗ್ವಾದಕ್ಕಿಳಿದು ಪೊಲೀಸ್ ಪಿಸ್ತೂಲ್ನಿಂದ ಯುವಕನೊಬ್ಬನಿಗೆ ಗುಂಡು ಹಾರಿಸಿ ಗಾಯಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ಕಾನ್ಸ್ಟೆಬಲ್ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ. ಸುರೇಂದರ್ ಕರ್ತವ್ಯ ಮುಗಿಸಿ ರಾತ್ರಿ ಮನೆಗೆ ಮರಳುತ್ತಿದ್ದಾಗ ಅವರೊಂದಿಗೆ ಕ್ಲಸ್ಟರ್ ಬಸ್ ಚಾಲಕನಾಗಿ ಕೆಲಸ ಮಾಡುವ ರಾಜೇಶ್ ಕೂಡ ಇದ್ದರು. ಬಾಬಾ ಹರಿದಾಸ್ನಗರದಲ್ಲಿ ಮೋಟಾರ್ ಸೈಕಲ್ ರಸ್ತೆಯ ಮೇಲೆ ಬಿದ್ದಿತ್ತು.
ಅದೇ ದಾರಿಯಲ್ಲಿ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರನ್ನು ತಡೆದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಬೈಕ್ನ್ನು ರಸ್ತೆಯಿಂದ ತೆಗೆದುಹಾಕುವಂತೆ ಸೂಚಿಸಿದ್ದಾರೆ. ಈ ವಿಷಯವಾಗಿ ಯುವಕರು ಪೊಲೀಸ್ ಸುರೇಂದ್ರ ಮತ್ತು ಆತನ ಸ್ನೇಹಿತ ರಾಜೇಶ್ನೊಂದಿಗೆ ಜಗಳವಾಡಿದ್ದಾರೆ. ಅಲ್ಲದೆ ಮೋಟಾರು ಸೈಕಲ್ನಲ್ಲಿದ್ದ ಯುವಕರು ತಮ್ಮ ಇಬ್ಬರು ಸ್ನೇಹಿತರನ್ನು ಸ್ಥಳಕ್ಕೆ ಕರೆದಿದ್ದರಿಂದ ಜಗಳಕ್ಕೆ ಕಾರಣವಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ವೇಳೆ ಸ್ಥಳೀಯ ನಿವಾಸಿ ಲಕ್ಷಣ್ ಅಲ್ಲಿಗೆ ಬಂದಿದ್ದಾರೆ. ಯುವಕರು ಮತ್ತು ಕಾನ್ಸ್ಟೇಬಲ್ ಸುರೇಂದ್ರ ಅವರ ನಡುವೆ ವಾಗ್ವಾದ ಉಂಟಾಗುತ್ತಿದ್ದಂತೆ ಪಕ್ಕದಲ್ಲೇ ಇದ್ದ ರಾಜೇಶ್ ಸುರೇಂದ್ರನ ಪಿಸ್ತೂಲ್ನ್ನು ತೆಗೆದು ತೆಗೆದುಕೊಂಡು ಲಕ್ಷ್ಮಣನಿಗೆ ಗುಂಡು ಹಾರಿಸಿ, ಇತರ ಯುವಕರಿಗೂ ಬೆದರಿಕೆವೊಡ್ಡಿದ್ದಾನೆ ಎಂದು ಹೇಳಿದ್ದಾರೆ.
ಹೊಟ್ಟೆಗೆ ಗುಂಡು ತಗುಲಿ ಗಾಯಗೊಂಡಿದ್ದ ಲಕ್ಷ್ಮಣನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಚೇತರಿಸಿಕೊಂಡಿದ್ದಾರೆ. ಜಹಾಂಗೀರ್ಪುರಿ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಸುರೇಂದರ್ ಮತ್ತು ಸ್ನೇಹಿತ ರಾಜೇಶ್ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.