ಫ್ರಾನ್‍ನಿಂದ ಭಾರತದತ್ತ 5 ರಫೇಲ್ ಪೈಟರ್ ಜೆಟ್‍ಗಳು

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.27-ಬಾರತೀಯ ಸೇನಾ ಪಡೆಗೆ ಅಗಾಧ ಶಕ್ತಿ ನೀಡುವ ಫ್ರಾನ್ಸ್‍ನ ಅತ್ಯಾಧುನಿಕ ರಫೇಲ್ ಫೈಟರ್ ಜೆಟ್‍ಗಳ ಮೊದಲ ತಂಡದ ಯುದ್ಧ ವಿಮಾನಗಳು ಇಂದು ಫ್ರಾನ್ಸ್‍ನಿಂದ ಭಾರತದತ್ತ ತೆರಳಿವೆ.

ಮೊದಲ ತಂಡದಲ್ಲಿ ಐದು ರಫೇಲ್ ಜೆಟ್‍ಗಳು ಭಾರತದ ವಾಯುಪಡೆಯನ್ನು ಸೇರಲಿದ್ದು, ಫ್ರಾನ್ಸ್ ಜತೆ ಮಹತ್ವದ ಒಪ್ಪಂದ ಮಾಡಿಕೊಂಡ ಬಹುತೇಕ ನಾಲ್ಕು ವರ್ಷಗಳ ನಂತರ ಫೈಟರ್ ಜೆಟ್‍ಗಳು ಭಾರತೀಯ ಸೇನಾಪಡೆ ಸೇವೆಗೆ ಲಭ್ಯವಾಗಲಿದೆ.

ಈ ಐದು ಯುದ್ದ ವಿಮಾನಗಳು ಬುಧವಾರ ಅಂಬಾಲಾ ವಾಯು ನೆಲೆಗೆ ಬಂದಿಳಿಯಲಿವೆ ಎಂದು ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲಡಾಖ್, ಸಿಕ್ಕಿಂ, ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಚೀನಾ ಗಡಿ ಕ್ಯಾತೆಯೀಂದ ಯುದ್ದದ ಕಾರ್ಮೋಡಗಳು ಕವಿದಿರುವ ಸಂದರ್ಭದಲ್ಲಿ ಭಾರತಕ್ಕೆ ಅತ್ಯತಂತ್ ಪ್ರಬಲ ರಫೇಲ್ ಫೈಟರ್ ಜೆಟ್‍ಗಳು ಲಭಿಸುತ್ತಿರುವುದು ಅತ್ಯಂತ ಮಹತ್ವದ ಸಂಗತಿಯಾಗಿದೆ.

Facebook Comments

Sri Raghav

Admin