ಮಣಿಪುರದಲ್ಲಿ ಮೊದಲ ಕೊರೊನಾ ವೈರಸ್ ಕೇಸ್ ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

ಇಂಫಾಲ,ಮಾ.24- ಇಲ್ಲಿಯವರೆಗೂ ಮಹಾಮಾರಿಗೆ ತುತ್ತಾಗದೆ ಉಳಿದಿದ್ದ ಮಣಿಪುರದಲ್ಲಿ ಈಗ ಮೊದಲ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಇಂಫಾಲ್ ಪಶ್ಚಿಮ ಥಂಗ್ಮೀಬಾಂಡ್ ಮೂಲದ 23 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.

ಸೋಂಕಿತನಿಗೆ ಇಂಫಾಲ್‍ನ ಜವಾಹರಲಾಲ್ ನೆಹರು ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಜೆಎನ್‍ಐಎಂಎಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕರೋನವೈರಸ್ ಹರಡುವುದನ್ನು ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪುರ ಸರ್ಕಾರ ಮಾರ್ಚ್ 31 ರವರೆಗೆ ರಾಜ್ಯವನ್ನು ಸಂಪೂರ್ಣ ಲಾಕ್‍ಡೌನ್ ಮಾಡಲು ಆದೇಶಿಸಿದೆ.

ಪ್ರಾದೇಶಿಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ಮತ್ತು ಜೆಎನ್‍ಐಎಂಎಸ್‍ನಲ್ಲಿ ಸರ್ಕಾರ ಪ್ರತ್ಯೇಕ ವಾರ್ಡ್‍ಗಳನ್ನು ಸ್ಥಾಪಿಸಲಾಗಿದೆ. ಜ್ವರ, ಕೆಮ್ಮು, ಶೀತದಂತಹ ಲಕ್ಷಣಗಳು ಕಂಡುಬಂದರೆ ಮರೆಮಾಚದೆ ತಪಾಸಣೆಗೊಳಪಡಿಸಿಕೊಳ್ಳಬೇಕೆಂದು ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.  ಕೊರೊನಾ ಶಂಕಿತರು ಕ್ಯಾರೆಂಟೈನ್ ಮಾನದಂಡಗಳಿಗೆ ಬದ್ಧರಾಗಿ ಮನೆಯಲ್ಲೇ ಉಳಿಯುವಂತೆಯೂ ಸೂಚನೆ ನೀಡಿದೆ.

Facebook Comments

Sri Raghav

Admin