ಶಾಕಿಂಗ್ ನ್ಯೂಸ್ : ಡೆಡ್ಲಿ ಕರೋನಾಗೆ ಕರ್ನಾಟಕದಲ್ಲಿ ಮೊದಲ ಬಲಿ..!?

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ,ಮಾ.11- ವಿಶ್ವವನ್ನೇ ಕಂಗೆಡೆಸಿರುವ ಕೊರೋನಾ ವೈರಸ್‍ಗೆ ಕರ್ನಾಟಕದಲ್ಲಿ ಮೊದಲ ಬಲಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆದರೆ ಅಧಿಕೃತ ವರದಿಗಳು ಸೋಂಕನ್ನು ದೃಢಪಡಿಸದ ಹಿನ್ನಲೆಯಲ್ಲಿ ಸಾರ್ವಜನಿಕರು ಅನಗತ್ಯವಾಗಿ ಆತಂಕಕ್ಕೆ ಒಳಗಾಗಬಾರದು ಎಂದು ಸರ್ಕಾರ ಸ್ಪಷ್ಟನೆ ನೀಡಿದೆ. ಮೊಹಮ್ಮದ್ ಹುಸೇನ್ ಸಿದ್ದಿಕ್ಕಿ (76) ಸಾವನ್ನಪ್ಪಿರುವ ವೃದ್ಧ.

ಸೌದಿ ಅರೇಬಿಯಾದಿಂದ ಬಂದಿದ್ದ ಸಿದ್ದಿಕ್ಕಿಗೆ ಕೊರೊನಾ ವೈರಸ್ ತಗುಲಿರುವ ಶಂಕೆ ಹಿನ್ನೆಲೆಯಲ್ಲಿ ಅವರನ್ನು ಜೀಮ್ಸ್ ಆಸ್ಪತ್ರೆಯಿಂದ ಹೈದರಬಾದ್‍ಗೆ ಸ್ಥಳಾಂತರ ಮಾಡಲಾಗಿತ್ತು.
ಗಂಟಲು ದ್ರವ  ಸಂಗ್ರಹಿಸಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆ ಲ್ಯಾಬ್‍ಗೆ ಕಳುಹಿಸಲಾಗಿತ್ತು. ಆದರೆ ವರದಿಗೂ ಮುನ್ನವೇ ಹೆಚ್ಚಿನ ಚಿಕಿತ್ಸೆಗಾಗಿ ಕುಟುಂಬಸ್ಥರು ಅವರನ್ನು ಹೈದರಾಬಾದ್‍ಗೆ ಶಿಫ್ಟ್ ಮಾಡಿದ್ದರು. ಇಂದು ಅಥವಾ ನಾಳೆ ವರದಿ ಬರುವುದಿತ್ತು ಆದರೆ ವರದಿಗೂ ಮುನ್ನವೇ ಸಿದ್ದಿಕ್ಕಿ ಸಾವನ್ನಪ್ಪಿದ್ದಾರೆ.

ವೃದ್ಧ ಸಿದ್ದಿಕ್ಕಿ ಫೆಬ್ರವರಿ 29 ರಂದು ಸೌದಿ ಅರೇಬಿಯಾದಿಂದ ಬಂದಿದ್ದರು. ಮಾರ್ಚ್ 5 ರಂದು ಜ್ವರ, ಕೆಮ್ಮು ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕೊರೊನಾ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿತ್ತು.  ಈ ನಡುವೆ ಸಿದ್ದಿಕ್ಕಿ ಅವರು ಕೊರೋನಾ ವೈರಸ್‍ನಿಂದ ಮೃತಪಟ್ಟಿದ್ದಾರೆಂದು ಕಲಬುರಗಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪಾ ಕ್ಯಾತನಾಳ ಹಾಗೂ ಅವರ ತಂಡ ಅಂತ್ಯಕ್ರಿಯೆ ಪ್ರಕ್ರಿಯೆ ಮುಗಿಯುವವರೆಗೂ ಉಸ್ತುವಾರಿ ವಹಿಸಿಕೊಂಡು ಅಗತ್ಯ ಮುಂಜಗ್ರತಾ ಕ್ರಮ ಕೈಗೊಂಡಿರುವುದಾಗಿ ಪ್ರಕಟಣೆ ಹೊರಡಿಸಿತ್ತು.

ಇದು ಜನರನ್ನು ಭಯಭೀತರನ್ನಾಗಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಇಲಾಖೆ ಆಯುಕ್ತರು ಸಿದ್ದಿಕ್ಕಿ ಅವರ ಸಾವು ಕೊರೋನಾದಿಂದ ಸಂಭವಿಸಿರುವ ಬಗ್ಗೆ ಇನ್ನೂ ಖಚಿತವಾಗಿಲ್ಲ. ಇದು ಕೇವಲ ವದಂತಿ. ವರದಿಬಂದಮೇಲಷ್ಟೇ ಈ ಬಗ್ಗೆ ಖಚಿತತೆ ದೊರೆಯಲಿದೆ. ಹಾಗಾಗಿ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

#ಅಧಿಕೃತ ಮಾಹಿತಿ ಬಂದಿಲ್ಲ.. 
ಬೆಂಗಳೂರು, ಮಾ.11- ಕಲ್ಬುರ್ಗಿಯಲ್ಲಿ ವ್ಯಕ್ತಿಯೊಬ್ಬ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿರುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ವೈರಸ್‍ನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಕೊರೊನಾ ವೈರಸ್‍ನಿಂದಲೇ ಮೃತಪಟ್ಟಿದ್ದಾರೆಯೇ ಎಂಬುದು ಈತನಕ ಅಧಿಕೃತ ಮಾಹಿತಿ ಬಂದಿಲ್ಲ. ಸಂಜೆ ವೇಳೆಗೆ ಪ್ರಯೋಗಾಲಯದ ವರದಿ ಬರಲಿದ್ದು, ಆನಂತರ ಸ್ಪಷ್ಟಪಡಿಸಲಾಗುವುದು ಎಂದರು. ರಾಜ್ಯದಲ್ಲಿ ಇದುವರೆಗೂ ನಾಲ್ಕು ಮಂದಿಗೆ ಮಾತ್ರ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ. ಅವರೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಿದರು.

Facebook Comments

Sri Raghav

Admin